ಜೈ ಭೀಮ್ ಸಿನಿಮಾ ಎಲ್ಲರ ಮನೆ ಮಾತಾಗಿರುವುದು ತಮಿಳು ನಾಯಕ ನಟ ಸೂರ್ಯಗೆ ಸಂದ ಸತತ ಎರಡನೇ ಗೆಲುವು. ಕಳೆದ ವರ್ಷ ಕಮರ್ಷಿಯಲ್ ಹಿಟ್ ಅಲ್ಲದೇ ಎಲ್ಲರಿಂದ ಪ್ರಶಂಸೆಗೆ ಒಳಗಾದ ಸೂರರೈಪಟ್ರುವಿನ ನಂತರ ಸೂರ್ಯ ಗಳಿಸಿಕೊಂಡ ಇದು ಎರಡನೇ ಹಿಟ್ ಸಿನಿಮಾ. ವಿಶೇಷ ಅಂದರೆ, ಈ ಎರಡೂ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲೇ ಇಲ್ಲ. ಓಟಿಟಿ ಅಮೇಜ್ ಜಾನ್ ಪ್ಲಾಟ್ ಪಾರ್ಮ್ನಲ್ಲೇ ಲೋಕಾರ್ಪಣೆ ಗೊಂಡು ಜಗಮನ್ನಣೆ ಗಳಿಸಿದೆ.
ಜೈ ಭೀಮ್ ಚಿತ್ರದ ಮತ್ತೊಂದು ದಾಖಲೆ ಏನೆಂದರೆ, ಇಂಟರ್ ನೆಟ್ ಮೂವಿ ಡಾಟಾಬೇಸ್ (ಐಎಂಡಿಬಿ)ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಮೊದಲ ತಮಿಳು ಚಿತ್ರವಾಗಿದೆ. ಸುಮಾರು 73 ಸಾವಿರ ವೋಟ್ ಗಳನ್ನು ಪಡೆದ ಜೈ ಭೀಮ್ 9.6 ರೇಟಿಂಗ್ ಪಡೆದು ದಾಖಲೆ ನಿರ್ಮಿಸಿದೆ.
ಸ್ಪರ್ಧೆಗೆ ಬಿದ್ದಿದ್ದ ಶಶಾಂಕ್ ಡಿಮ್ಷನ್ (9.3 ರೇಟಿಂಗ್) , ದ ಗಾಡ್ ಫಾದರ್ ನಂಥ ಸಿನಿಮಾಗಳನ್ನು (9.2 ರೇಟಿಂಗ್ ) ಹಿಂದಿಕ್ಕಿ ಜೈಭೀಮ್ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದೆ.
ಐಎಂಡಿಬಿಯ ಟಾಪ್ 10 ಪಟ್ಟಿಯಲ್ಲಿರುವ ಇತರೆ ಚಿತ್ರಗಳೆಂದರೆ, ದ ಲಾರ್ಡ್ ಆಫ್ ರಿಂಗ್ಸ್, ದಿ ರಿಟರ್ನ್ ಆಫ್ ದ ಕಿಂಗ್, ಪುಲ್ಪ್ ಫಿಕ್ಷನ್ ಅಂಡ್ ಇನ್ ಸೆಪ್ಷನ್. ಜ್ಞಾನೇವೆಲ್ ನಿರ್ದೇಶನ ಮಾಡಿರುವ ಜೈ ಭೀಮ್ ಚಿತ್ರವು, 1990ರಲ್ಲಿ ತಮಿಳುನಾಡಿನ ನ್ಯಾಯಾಲಯದ ಪ್ರಕರಣವೊಂದನ್ನು ಸತ್ಯ ಘಟನೆ ಆಧರಿಸಿರುವ ಸಿನಿಮಾವಾಗಿದೆ. ಸೂರ್ಯ ಪಾತ್ರವನ್ನು ಮದರಾಸು ಹೈ ಕೋರ್ಟಿನ ನಿವೃತ್ತ ನ್ಯಾಯಾಧೀಶ ಚಂದ್ರ ಅವರ ಬದುಕಿನಿಂದ ಸ್ಫೂರ್ತಿ ಪಡೆದು ಸೃಷ್ಟಿಸಲಾಗಿದೆ.
ಇದನ್ನೂ ಓದಿ:Jai Bhim: ಮತ್ತೊಂದು ವಿವಾದದ ಸುಳಿಯಲ್ಲಿ ಜೈ ಭೀಮ್ ಚಿತ್ರ – ನಟ ಸೂರ್ಯ ಮನೆಗೆ ಪೋಲೀಸ್ ರಕ್ಷಣೆ
Discussion about this post