ಬಾಲಿವುಡ್ ನಟ ಅಮೀರ್ ಖಾನ್ ವಯಸ್ಸು 56. ಮೊದಲ ಪುತ್ರಿ ಇರಾನ್ ಖಾನ್ ಗೆ 24 ವರ್ಷ, ಮಗ ಜುಬೇದ್ ಖಾನ್ ಗೆ 23 ವರ್ಷ. ಈಗ ಇದೇಕೆ ಖಾನ್ ವಂಶವೃಕ್ಷ ಹೇಳಹೊರಟಿದ್ದಾರೆ ಅನ್ನಬೇಡಿ. ಎಲ್ಲವೂ ಅಂದುಕೊಂಡಂತೆ ಆದರೆ, ಬಾಲಿವುಡ್ ಊಹಿಸಿದಂತೆ ಸಂಭವಿಸಿದರೆ 56 ವರ್ಷದ ಅಮೀರ್ ಖಾನ್ 29 ವರ್ಷದ ನಟಿ ಫಾತಿಮಾ ಸಮಾ ಶೇಖ್ ಜೊತೆ ಮದುವೆಯಾಗುವುದು ದಟ್ಟವಾಗಿದೆ.
ನೀವು ಮತ್ತೆ ಮೂರನೇ ಮದುವೆ ಆಗ್ತಾ ಇದ್ದೀರಾ ಅಂತ ಅಮೀರ್ ಖಾನ್ ಅವರನ್ನು ಬಾಯಿಬಿಡಿಸಿದವರು ಎಷ್ಟು ಮಂದಿಯೋ, ಪ್ರಶ್ನೆ ಎದ್ದಾಗೆಲ್ಲಾ ಮೌನಂ ಸಮ್ಮತಿ ಲಕ್ಷಣಂ ಅನ್ನೋ ಹಾಗೇ ಗಪ್ ಚುಪ್ಪಾಗಿ ನಕ್ಕು ಸುಮ್ಮನಾಗುತ್ತಾರೆ.
ಆದರೆ, ಅಮೀರ್ ಖಾನ್ ನಿಜವಾಗಲೂ ಮದುವೆ ಆಗುತ್ತಿದ್ದಾರೆ ಅನ್ನೋ ವಾರ್ತೆ ಬಾಲಿವುಡ್ ನಲ್ಲಿ ಬಾನಂಗಳದಲ್ಲಿ ತೇಲಿಬರುತ್ತಿದೆ. ಮೊದಲನೆ ಹೆಂಡತಿ ರೀನಾ ದತ್ತಾ ಜೊತೆ 15 ವರ್ಷ, ಆಕೆಗೆ ವಿಚ್ಛೇದನ ನೀಡಿದ ನಂತರ ಕಿರಣ್ ರಾವ್ ಜೊತೆ 15 ವರ್ಷ ಸಂಸಾರ ನಡೆಸಿದ ಅನುಭವಗಳಿಸಿರುವ ಅಮೀರ್ ಖಾನ್, ಕಿರಣ್ ರಾವ್ ಗೆ ವಿಚ್ಛೇದನ ನೀಡಿ, ನಾವಿಬ್ಬರು ಸ್ನೇಹಿತರಂತೆ ಇರ್ತೀವಿ ಅಂತ ಹೇಳಿದ ನಂತರ ನಟಿ ಫಾತೀಮಾ ಸಮಾ ಶೇಖ್ ಅವರೊಟ್ಟಿಗಿನ ಒಡನಾಟ ಹೆಚ್ಚಾಗಿದೆ. ಹೀಗಾಗಿ, ಅವರನ್ನೇ ಮದುವೆಯಾಗುವ ಸಾಧ್ಯತೆ ಇದೆ ಅನ್ನೋ ಗುಸುಗುಸು ಜೋರಾಗಿದೆ.
ಸಧ್ಯ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿರುವ ಅಮೀರ್ ಖಾನ್, ಸಿನಿಮಾ ಬಿಡುಗಡೆ ನಂತರವಷ್ಟೇ ಮದುವೆ ಸೆಟ್ಟೇರಲಿದೆ ಅನ್ನೋ ಸಿಗ್ನಲ್ ನೀಡಿದ್ದಾರಂತೆ. ಆದರೆ, ಲಾಲ್ ಸಿಂಗ್ ಚಡ್ಡಾ ಡಿಸೆಂಬರ್ ಹೊತ್ತಿಗೆ ತೆರೆಕಾಣಬೇಕಿತ್ತು. ಅದು ಫೆಬ್ರವರಿಗೆ ಮುಂದೂಡಲಾಯಿತು, ಈ ದೊರೆಯುತ್ತಿರುವ ಮಾಹಿತಿ ಪ್ರಕಾರ, ಅದು ಕನ್ನಡ ಯಶ್ ನಟನೆಯ ಕೆಜಿಎಪ್ 2 ಚಿತ್ರದ ದಿನವೇ ಅಂದರೆ, ಏಪ್ರಿಲ್ 14, 2021ರಂದು ತೆರೆಗೆ ಬರಲು ಸಿದ್ಧವಾಗಿದೆಯಂತೆ.
ಹೀಗಾಗಿ, ಖಾನ್ ಮದುವೆಯ ಗುಸುಗುಸು ಖಾತ್ರಿಯಾಗಲು ಏಪ್ರಿಲ್ ತಿಂಗಳು ದಾಟಬೇಕು. ಒಟ್ಟಾರೆ, ಖಾನ್ ಚಿತ್ರಕ್ಕಿಂತ ಹೆಚ್ಚು ಅವರ ಬದುಕಿನ ವೈಯಕ್ತಿಕ ವಿಚಾರವೇ ಪ್ರಚಾರ ಪಡೆಯುತ್ತಿದೆ.
ಇದನ್ನೂ ಓದಿ: ಯಶ್ vs ಅಮೀರ್ ಖಾನ್: ಚಿತ್ರಪ್ರೇಮಿಗಳ ಆಯ್ಕೆ ಯಾವುದು?
Discussion about this post