ಬಾಲಿವುಡ್, ಹಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೋನಸ್ ದಾಂಪತ್ಯದ ಕುರಿತು ಹಲವು ಊಹಾಪೋಹಗಳು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಇದಕ್ಕೆ ಕಾರಣವಿಷ್ಟೆ, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಮೂದಿಸಿರುವ ಹೆಸರಿನಿಂದ ಜೋನಸ್ ಪದವನ್ನು ತೆಗೆದುಹಾಕಿದ್ದು.
ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡಿದ್ದಲ್ಲದೆ, ಪ್ರಿಯಾಂಕಾ ಮತ್ತು ನಿಕ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ. ಇಬ್ಬರ ಮಧ್ಯೆ ಮನಸ್ತಾಪ ಮೂಡಿದೆ ಎಂದೆಲ್ಲಾ ಊಹಾಪೋಹಗಳು ಹರಿದಾಡಿದ್ದವು. ಇತ್ತೀಚೆಗಷ್ಟೇ ವಿವಾಹ ವಿಚ್ಛೇದನ ಘೋಷಿಸಿದ್ದ ಟಾಲಿವುಡ್‌ನ ಸಮಂತ ಮತ್ತು ನಾಗಚೈತನ್ಯ ಕೂಡ ಅದಕ್ಕೂ ಕೆಲಸಮಯ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರು ಬದಲಾಯಿಸಿಕೊಂಡಿದ್ದರು. ಇದು ಪ್ರಿಯಾಂಕಾ- ನಿಕ್ ದಾಂಪತ್ಯದ ಕುರಿತ ವದಂತಿಗಳಿಗೆ ಮತ್ತಷ್ಟು ರೆಕ್ಕೆ-ಪುಕ್ಕ ಸೇರಲು ಕಾರಣವಾಗಿತ್ತು.
ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ನಾಗಚೈತನ್ಯ
ಈ ಮಧ್ಯೆ, ನಿಕ್ ಜೋನಸ್ ಅವರ ಇನ್‌ಸ್ಟಾಗ್ರಾಮ್ ಸಂದೇಶ ಒಂದಕ್ಕೆ ವಿಭಿನ್ನ ಪ್ರತಿಕ್ರಿಯೆ ನೀಡುವ ಮೂಲಕ ಪ್ರಿಯಾಂಕಾ ಅವರು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನಿಕ್ ಜೋನಸ್ ಅವರು, ‘ಮಂಡೇ ಮೋಟಿವೇಷನ್, ಲೆಟ್ ಅಸ್ ಗೆಟ್ ಇಟ್’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ, ‘ಡ್ಯಾಮ್ನ್, ಐ ಜಸ್ಟ್ ಡೈಡ್ ಇನ್ ಯುವರ್ ಆರ್ಮ್ಸ್’ ಎಂದು ಬರೆದಿದ್ದು ಜತೆಗೆ ಪ್ರೀತಿಯ ಇಮೋಜಿಯನ್ನೂ ಲಗತ್ತಿಸಿದ್ದಾರೆ.
ಇದರೊಂದಿಗೆ, ತಾರಾ ದಂಪತಿಯ ದಾಂಪತ್ಯದ ಕುರಿತ ವದಂತಿಗಳಿಗೆ ತೆರೆ ಎಳೆಯಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
View this post on Instagram
























Discussion about this post