ನಟ ಯಶ್ ಅಭಿನಯದ ಕೆಜಿಎಫ್-2, ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವು ಒಂದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ, ಇದರ ಪರಿಣಾಮ ಬಾಕ್ಸ್ ಆಫೀಸ್ ಮೇಲೆ ಆಗಬಹುದೇ ಅನ್ನೋ ಲೆಕ್ಕಾಚಾರವನ್ನು ಸಿನಿಮಾ ಅಭಿಮಾನಿಗಳು, ಸಿನಿಮಾ ಪಂಡಿತರು ಮಾತ್ರ ಮಾಡುತ್ತಿಲ್ಲ. ಇತ್ತ ಅಮೀರ್ ಖಾನ್ ಕೂಡ ಇದನ್ನೇ ಮಾಡಿದ್ದಾರೆ.
ಅವರು ಒಂದು ಹೆಜ್ಜೆ ಮುಂದೆ ಹೋಗಿ, ನಾನು, ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಫ್ಯಾನ್. ಹಾಗಾಗಿ, ಮೊದಲ ದಿನವೇ ಆಚಿತ್ರವನ್ನು ನೋಡುತ್ತೇನೆ. ನಾನು ಖುದ್ದು ಆ ಚಿತ್ರದ ಪ್ರಮೋಷನ್ ಮಾಡುತ್ತೇನೆ ಅಂತ ಹೇಳಿದ್ದಾರೆ. ಅಲ್ಲದೇ, ಕೆಜಿಎಫ್ಗೆ ಅದರದ್ದೇ ಆದ ಅಭಿಮಾನ ಬಳಗವಿದೆ. ಅದು ಆ್ಯಕ್ಷನ್ ಚಿತ್ರ ಬೇರೆ. ನಮ್ಮದು ಕೌಟುಂಬಿಕ ಚಿತ್ರ. ಎರಡೂ ಚಿತ್ರದ ದಿಕ್ಕು ಬೇರೆ ಬೇರೆಯಾಗಿರುವುದರಿಂದ ಕಲೆಕ್ಷನ್ ಗೆ ಯಾವ ರೀತಿಯ ಸಮಸ್ಯೆ ಕೂಡ ಆಗುವುದಿಲ್ಲ ಅಂತ ನನ್ನ ನಂಬಿಕೆ ಎಂದು ಅಮೀರ್ ಖಾನ್ ಹೇಳಿಕೊಂಡಿದ್ದಾರೆ.
ಅಮೀರ್ ಖಾನ್ ನಿರ್ಮಾಪಕ ವಿಜಯ್ ಕುಮಾರ್ ಕಿರಂಗದೂರ್, ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಯಶ್ ಜೊತೆ ಮಾತನಾಡಿ, ನಿಮ್ಮ ಚಿತ್ರ ನಿಗದಿಪಡಿಸಿದ ದಿನಾಂಕವನ್ನು ನಾನು ವಶಪಡಿಸಿಕೊಳ್ಳಲು ಇಷ್ಟವಿಲ್ಲ. ಲಾಲ್ ಸಿಂಗ್ ಚಡ್ಡಾದಲ್ಲಿ ನಾನು ಸಿಖ್ ಪಾತ್ರ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. ಅಂದು ಬೈಸಾಕಿಯ ದಿನವಾಗಿದ್ದರಿಂದ ಏಪ್ರಿಲ್ 14 ಚಿತ್ರ ಬಿಡುಗಡೆಗೆ ಸೂಕ್ತ ಎಂದು ಆವತ್ತೇ ಬಿಡುಗಡೆಗೆ ಕೈ ಹಾಕಿದ್ದೇವೆ ಅಷ್ಟೇ ಎಂದು ಯಶ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.
ಇದನ್ನೂ ಓದಿ: ಯಶ್ vs ಅಮೀರ್ ಖಾನ್: ಚಿತ್ರಪ್ರೇಮಿಗಳ ಆಯ್ಕೆ ಯಾವುದು?
Discussion about this post