ನವದೆಹಲಿ: ಇಂಧನ ಕ್ಷೇತ್ರದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾನದೆ ಮಾಡಿ ಹಣ ಉಳಿಸುವ ಹೊಸ ಹೊಸ ತಂತ್ರೋಪಾಯಗಳು ಆವಿಷ್ಕಾರ ಆಗಿವೆ. ಹೀಗಾಗಿ 2050ರ ಹೊತ್ತಿಗೆ ‘ಹಸಿರು ವಿದ್ಯುತ್’ (ಇಂಗಾಲ ಹೊರಸೂಸದ) ಉತ್ಪಾದನೆ ಅಗ್ಗ ಆಗಲಿದೆ.
ಜಾಗತಿಕವಾಗಿ ನಶಿಸಿ ಹೋಗುವ ಇಂಧನ ಮೂಲದಿಂದ ಉತ್ಪಾದಿಸುವ ವಿದ್ಯುತ್ ವೆಚ್ಚ ಮತ್ತು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವ ವಿದ್ಯುತ್ ವೆಚ್ಚದ ತೌಲನಿಕ ಅಧ್ಯಯನವನ್ನು ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೆಮೇಟ್ ಇಂಪ್ಯಾಕ್ಟ್ ರಿಸರ್ಚ್ (ಪಿಐಕೆ) ನಡೆಸಿ ಈ ಅಂದಾಜು ಮಾಡಿದೆ. ಇಂಗಾಲ ಹೊರಸೂಸುವ ವಿದ್ಯುತ್ ಉತ್ಪಾದನೆಯಿಂದ ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿ ಸಾಧಿಸಲು ಆಗುವುದಿಲ್ಲ. ಆದರೆ, ನವೀಕರಿಸಬಹುದಾದ ಮೂಲಗಳನ್ನು ಹೆಚ್ಚು ಆಶ್ರಯಿಸಿದರೆ ಉತ್ಪಾದನಾ ವೆಚ್ಚ ತಗ್ಗುವುದರ ಜತೆಗೆ ಪ್ಯಾರಿಸ್ ಒಪ್ಪಂದ ಗುರಿಯನ್ನು ಸಾಧಿಸಬಹುದು ಅಥವಾ ಅದರ ಸಮೀಪಕ್ಕಾದರೂ ಮುಟ್ಟಬಹುದು ಎಂದು ಅಧ್ಯಯನ ಹೇಳಿದೆ.
“ಪ್ರಸ್ತುತ ಶೇ. 80ರಷ್ಟು ವಿದ್ಯುತ್ ಬೇಡಿಕೆಯ (ಕೈಗಾರಿಕೆ, ಸಂಚಾರ, ಹೀಟಿಂಗ್) ಪಳಯುಳಿಕೆ ಇಂಧನ ಮೂಲಗಳ ದಹನದಿಂದ ಉತ್ಪಾದನೆ ಆಗುತ್ತಿದೆ. ಬದಲಿ ಇಂದನ ಮೂಲಗಳಿಂದ ಶೇ. 20ರಷ್ಟು ಮಾತ್ರ ದೊರೆಯುತ್ತಿದೆ. ಆದರೆ, 2050ರ ಹೊತ್ತಿಗೆ ಇದು ತದ್ವಿರುದ್ಧವಾಗುತ್ತದೆ ಎಂದು ನಮ್ಮ ಅಧ್ಯಯನ ಕಂಡುಕೊಂಡಿದೆ. ಇಂಗಾಲ ರಹಿತ ಹಸಿರು ವಿದ್ಯುತ್ ಜಾಗತಿಕ ವಿದ್ಯುಚ್ಛಕ್ತಿಯ ಮುಖ್ಯ ಆಧಾರ ಆಗುತ್ತದೆ’ ಎಂದು ಈ ಅಧ್ಯಯನದ ಮುಖ್ಯ ಲೇಖಕರಾದ ಬಲಿರ್ನ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊಫೆಸರ್ ಗುನ್ನಾರ್ ಲುಡೆರರ್ ಹೇಳಿದ್ದಾರೆ.
ಶತಮಾನಗಳವರೆಗೆ ಪಳಯುಳಿಕೆ ಇಂಧನ ಮೂಲಗಳು ಕಡಿಮೆ ವೆಚ್ಚದಲ್ಲಿ ಮತ್ತು ಅಪಾರವಾಗಿ ಸಿಗುತ್ತಿತ್ತು. ಇದನ್ನು ಹೆಚ್ಚಾಗಿ ಉಪಯೋಗಿಸಿ ಈಗ ಇವು ನಶಿಸುವ ಹಂತದತ್ತ ಸಾಗಿದೆ. ಜೊತೆಗೆ ತಾಪಮಾನ ಹೆಚ್ಚಳಕ್ಕೂ ಕಾರಣವಾಗಿವೆ. ಕಳೆದ ಶತಮಾನದ ದಶಕಗಳಿಂದ ನವೀಕರಿಸಬಹುದಾದ ಇಂಧನ ಮೂಲಗಳು ವಿದ್ಯುತ್ ಉತ್ಪಾದನೆಗೆ ಅಮೂಲ್ಯ ಆಕರಗಳಾಗಿವೆ. ಈ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳು ದುಬಾರಿಯಾಗಿದ್ದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತಿವೆ. ಕಳೆದ ದಶಕದಲ್ಲಿ ಸೌರ ವಿದ್ಯುತ್ ಉತ್ಪಾದನಾ ವೆಚ್ಚ ಶೇ. 80ರಷ್ಟು ತಗ್ಗಿದೆ. ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗಲಿದೆ. ಇದು ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ’ ಎಂದಿದ್ದಾರೆ.
Green Electricity Can Become Cheapest By 2050
ಇದನ್ನು ಓದಿ: Electric Vehicle: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನದಷ್ಟೇ ಆಗಲಿದೆ
ಇದನ್ನೂ ಓದಿ: Save Electricity: ವಿದ್ಯುತ್ ಉಳಿತಾಯಕ್ಕೆ, ಯುಪಿಎಸ್ ದೀರ್ಘ ಬಾಳಿಕೆಗೆ ಹೀಗೆ ಮಾಡಿ
Discussion about this post