ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪೊಲೀಸರನ್ನು ನಾಯಿಗೆ ಹೋಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಲಾಗಿದೆ.
actor Shivaram passes away: ಹಿರಿಯ ನಟ ಶಿವರಾಂ ನಿಧನ
ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಯ ವಿರುದ್ಧ ಫೋನ್ನಲ್ಲಿ ಮಾತನಾಡಿರುವ ಸಚಿವ ಆರಗ ಜ್ಞಾನೇಂದ್ರ, ಪೊಲೀಸರಿಗೆ ಕೈ ತುಂಬಾ ಸಂಬಳ ಕೊಟ್ಟರೂ ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರೆಲ್ಲ ಕೆಟ್ಟು ಹೋಗಿದ್ದಾರೆ, ಎಂಜಲು ಕಾಸನ್ನು ತಿಂದು ಬದುಕುತ್ತಿದ್ದಾರೆ. ಪೊಲೀಸರಾಗಲು ಯೋಗ್ಯತೆ ಇಲ್ಲದಿದ್ದ ಮೇಲೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ ಎಂದು ಕೂಗಾಡಿರುವ ವಿಡಿಯೋ ವೈರಲ್ ಆಗುತ್ತು.
Road accident: ಲಾರಿ – ಟ್ಯಾಂಕರ್ ನಡುವೆ ರಸ್ತೆ ಅಪಘಾತ- ಸ್ಥಳದಲ್ಲಿ ನಾಲ್ವರ ಸಾವು
ರೈತ ಮುಖಂಡ ನವೀನ್ ಕುರುವಾನೆ ನೀಡಿರುವ ದೂರಿನಲ್ಲಿ ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ. ಸಮಾಜದ ಶಾಂತಿ, ಮಕ್ಕಳು, ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಹಗಲಿರುಳೆನ್ನದೆ ಪೊಲೀಸರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪೊಲೀಸರನ್ನ ನಾಯಿಗೆ ಹೋಲಿಸಿರುವುದು ಖಂಡನೀಯ ಎಂದಿದ್ದಾರೆ.
ಕ್ರಿಪ್ಟೊ ಕರೆನ್ಸಿ ನಿಯಂತ್ರಿಸಲು ಮಸೂದೆ: ಸಂಪುಟ ಟಿಪ್ಪಣಿ ಹೊರಡಿಸಿದ ಸರ್ಕಾರ
Complaint against Aaraga Gyanendra
























Discussion about this post