ನವದೆಹಲಿ: ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರ ಪಶು ಸಂಗೋಪನೆ ಕೈಗೊಳ್ಳಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದೆ. ರೈತರು ಹಸು, ಎಮ್ಮೆ, ಮೇಕೆ, ಕುರಿ, ಹಂದಿ, ಕೋಳಿಗಳನ್ನು ಖರೀದಿಸಲು ಈ ಯೋಜನೆಯಡಿ ಸಾಲ ಪಡೆಯಬಹುದು.
ಇದನ್ನೂ ಓದಿ: Alarming report: ದೇಶದಲ್ಲಿ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಮಾಸ್ಕ್ ಧರಿಸೋದೇ ಇಲ್ಲ
ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಯಾವುದೇ ಗ್ಯಾರಂಟಿ ಇಲ್ಲದೇ ಪಶುಪಾಲನೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಇದನ್ನೂ ಓದಿ: ರಷ್ಯಾದಿಂದ ಎಕೆ -203 ರೈಫಲ್ಸ್ ಖರೀದಿಗೆ ಸೋಮವಾರ ಒಪ್ಪಂದ
ಅಂದ ಹಾಗೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯ ಈ ಯೋಜನೆಯಲ್ಲಿ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸಾಲಸೌಲಭ್ಯ ಒದಗಿಸಲಿದ್ದು, 1.60 ಲಕ್ಷ ರೂ. ವರೆಗೆ ಯಾವುದೇ ಗ್ಯಾರಂಟಿ ನೀಡಬೇಕಿಲ್ಲ.
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
ಹಸುವಿಗೆ 40,783 ಎಮ್ಮೆಗೆ 60,249 ರೂ. ನಿಗದಿ ಮಾಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಮೊಬೈಲ್ ನಂಬರ್, ಪಾಸ್ಪೋರ್ಟ್ ಸೈಜ್ ಫೋಟೋ ಸೇರಿ ಅಗತ್ಯ ದಾಖಲೆ ನೀಡಬೇಕಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರಸ್ತೆ ಬಣ್ಣ ಬಯಲು ಮಾಡಿದ ಇಡುಗಾಯಿ!

























Discussion about this post