ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯ ಸಭೆ ಇಂದು (ಸೋಮವಾರ) ನವದೆಹಲಿಯಲ್ಲಿ ಆರಂಭವಾಗಿದೆ. ಆರ್ಬಿಐ ಗವರ್ನರ್ ನೇತೃತ್ವದ ಈ ಸಭೆ ಮೂರು ದಿನಗಳ ಕಾಲ ನಡೆಯಲಿದ್ದು, ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳು ಬುಧವಾರ ಪ್ರಕಟವಾಗಲಿವೆ.
ಈ ಬಾರಿಯೂ ರೆಪೊ ದರ (ಬಡ್ಡಿ ದರ) ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿರುವ ಈ ಸಂದರ್ಭದಲ್ಲಿ ಆರ್ಬಿಐ ಬಡ್ಡಿ ದರ ಬದಲಾವಣೆ ಮಾಡಲು ಮುಂದಾಗದು ಎಂಬುದು ಆರ್ಥಿಕ ತಜ್ಞರ ಅಂದಾಜು.
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
ಅಕ್ಟೋಬರ್ ತಿಂಗಳಲ್ಲಿ ನದಿದ್ದ ಸಭೆಯಲ್ಲಿ ಆರ್ಬಿಐ ಬಡ್ಡಿದರದಲ್ಲಿ ಬದಲಾವಣೆ ಮಾಡಿರಲಿಲ್ಲ. ಈ ಹಿಂದೆ 2020ರ ಮೇ ತಿಂಗಳಲ್ಲಿ ಬಡ್ಡಿದರಗಳಲ್ಲಿ ಆರ್ಬಿಐ ಬದಲಾವಣೆ ಮಾಡಿತ್ತು.
ವಿಶ್ವದಾದ್ಯಂತ ಒಮಿಕ್ರಾನ್ ಹರಡುವಿಕೆ ಹೆಚ್ಚಾಗಿರುವುದು ಆರ್ಥಿಕತೆಗೂ ಹೊಡೆತ ನೀಡಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯ ಬಗ್ಗೆ ಈ ಹಿಂದೆ ನೀಡಿದ್ದ ಮುನ್ನೋಟವನ್ನು ಕಡಿಮೆ ಮಾಡಬೇಕಾಗಿ ಬರಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಇತ್ತೀಚೆಗೆ ಹೇಳಿತ್ತು.
ಇನ್ನಷ್ಟು ಸುದ್ದಿಗಳು…
Coffee growers: ಕಾಫಿ ಉದ್ಯಮ ನಷ್ಟ: ಪ್ರಧಾನಿ ಭೇಟಿ ಅವಕಾಶಕ್ಕೆ ಬೆಳೆಗಾರರ ನಿಯೋಗ ಒತ್ತಾಯ
Discussion about this post