ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಯ (ಇಪಿಎಫ್) ಚಂದಾದಾರರು ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ವಿಮಾ ಪಾಲಿಸಿ ಹೊಂದಿದ್ದರೆ ಅದರ ವಿಮಾ ಕಂತನ್ನು ತಮ್ಮ ಪಿಎಫ್ ಖಾತೆ ಮೂಲಕ ಪಾವತಿಸುವ ಅವಕಾಶವನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್ಒ) ಕಲ್ಪಿಸಿದೆ.
ಇದಕ್ಕಾಗಿ ಚಂದಾದಾರರು ಕನಿಷ್ಠ ಎರಡು ವರ್ಷದಿಂದ ಇಪಿಎಫ್ಒ ಸದಸ್ಯರಾಗಿರಬೇಕು ಮತ್ತು ಅರ್ಜಿ ನಮೂನೆ 14ರಲ್ಲಿ ಮನವಿ ಸಲ್ಲಿಸಬೇಕು. ಜತೆಗೆ ಪಿಎಫ್ ಖಾತೆಯಲ್ಲಿ ಎರಡು ವರ್ಷದ ವಿಮಾ ಕಂತಿನ ಮೊತ್ತಕ್ಕೆ ಸಾಲುವಷ್ಟು ಕನಿಷ್ಠ ಹಣ ಇರಿಸಿರಬೇಕು. ಆಗ ಮಾತ್ರ ಪಿಎಫ್ ಖಾತೆ ಮತ್ತು ಎಲ್ಐಸಿ ಪಾಲಿಸಿಯನ್ನು ಜೋಡಣೆ ಮಾಡಲು ಸಾಧ್ಯ. ಈ ಪ್ರಕ್ರಿಯೆ ಪೂರ್ಣವಾದ ಮೇಲೆ ವಿಮಾ ಕಂತು ಜಮಾ ಮಾಡುವ ಗಡುವಿನೊಳಗೆ ಚಂದಾದಾರರ ಪಿಎಫ್ ಖಾತೆಯಿಂದ ಮೊತ್ತವು ನೇರವಾಗಿ ಎಲ್ಐಸಿಗೆ ಪಾವತಿ ಆಗುತ್ತದೆ ಎಂದು ಇಪಿಎಫ್ಒ ತಿಳಿಸಿದೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಚಂದಾದಾರರಿಗೆ ಅದರಲ್ಲೂ ಕೊರೊನಾ ಸಾಂಕ್ರಾಮಿಕದ ದುರಿತದ ಸಂದರ್ಭದಲ್ಲಿ ಈ ಸೌಲಭ್ಯದಿಂದ ಅನುಕೂಲ ಆಗುತ್ತಿದೆ. ಭವಿಷ್ಯ ನಿಧಿಯ ಕಾರ್ಮಿಕರ ನಿವೃತ್ತಿಯ ನಂತರದ ಬದುಕಿಗೆ ಇರುವ ಮುಖ್ಯ ಹಣಕಾಸಿನ ಆಧಾರವಾದ ಕಾರಣ ಈ ಸೌಲಭ್ಯವನ್ನು ಅಗತ್ಯವಿದ್ದಾಗ ಮಾತ್ರ ಉಪಯೋಗ ಮಾಡಿಕೊಳ್ಳಬಹುದು. ದೀರ್ಘಕಾಲ ಈ ಸೌಲಭ್ಯ ಬಳಸಿಕೊಂಡರೆ ಪಿಎಫ್ ಹೂಡಿಕೆಯ ಮೇಲಿನ ಬಡ್ಡಿ ಕಡಿಮೆ ಆಗುತ್ತದೆ ಎಂದು ಇಪಿಎಎಫ್ಒ ಹೇಳಿದೆ.
Now we can pay LIC Premium through EPF account
ಇದನ್ನೂ ಓದಿರಿ:
Discussion about this post