ಮುಂಬೈ: ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾನಿ ಕೀ ಪ್ರೇಮ್ ಕಹಾನಿ’ ಸಿನಿಮಾದ ಶೂಟಿಂಗ್ ಮುಗಿಸಿ ಇತ್ತೀಚೆಗಷ್ಟೇ ದೆಹಲಿಯಿಂದ ಚಿತ್ರ ತಂಡ ಮುಂಬೈಗೆ ವಾಪಸಾಗಿದೆ.
ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆಲಿಯಾ ಭಟ್, ರಣವೀರ್ ಸಿಂಗ್, ಕರಣ್ ಜೋಹರ್ ಮುಂಬೈಗೆ ಮರಳಿದ್ದಾರೆ. ಇದೇ ವೇಳೆ, ಚಿತ್ರದಲ್ಲಿರುವ ಕೆಲವು ದೃಶ್ಯಗಳ ಕುರಿತ ಮಾಹಿತಿಯೂ ಬಹಿರಂಗವಾಗಿದೆ.
ಸಿನಿಮಾದಲ್ಲಿ ನಾಯಕಿ ಆಲಿಯಾ ಭಟ್ ಮಧ್ಯಮ ವರ್ಗದ ಹುಡುಗಿಯಾಗಿಯೂ ರಣವೀರ್ ಅವರು ಶ್ರೀಮಂತ ಮನೆತನದ ವ್ಯಕ್ತಿಯಾಗಿಯೂ ಅಭಿನಯಿಸಿದ್ದಾರೆ.
ಇದನ್ನೂ ಓದಿ: Jacqueline Fernandez: ವಿಮಾನ ನಿಲ್ದಾಣಕ್ಕೆ ಬಂದ ಜಾಕ್ವೆಲಿನ್‌ರನ್ನು ವಾಪಸ್ಸು ಕಳುಹಿಸಿದ ಪೊಲೀಸರು
ಶ್ರೀಮಂತ ಹುಡುಗನೊಬ್ಬ ಮಧ್ಯಮ ವರ್ಗದ ಹುಡುಗಿಯ ಪ್ರೇಮದ ಬಲೆಯಲ್ಲಿ ಬೀಳುವುದು ಹಾಗೂ ಆತನ ಮನೆಯವರಿಂದ ವಿರೋಧ ವ್ಯಕ್ತವಾಗುವ ಸನ್ನಿವೇಶ ಸಿನಿಮಾದಲ್ಲಿದೆಯಂತೆ.
ಎಲ್ಲದಕ್ಕಿಂತ ಮಿಗಿಲಾಗಿ ಈ ಸಿನಿಮಾದಲ್ಲಿ ಆಲಿಯಾ ಹಾಗೂ ರಣವೀರ್ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿವೆ ಚಿತ್ರ ತಂಡದ ಮೂಲಗಳು. ಹಲವು ಲಿಪ್‌ಲಾಕ್ ದೃಶ್ಯಗಳೂ ಸಿನಿಮಾದಲ್ಲಿವೆಯಂತೆ.
ದೆಹಲಿಯ ಕುತುಬ್ ಮಿನಾರ್ ಪ್ರದೇಶದಲ್ಲಿ ಚಿತ್ರ ತಂಡವು ಶೂಟಿಂಗ್‌ನಲ್ಲಿ ನಿರತವಾಗಿರುವ ಚಿತ್ರಗಳು ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಪ್ರಕಟವಾಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
View this post on Instagram
























Discussion about this post