ನವದೆಹಲಿ: ಅರಬ್ ಲೀಗ್ನ 22 ದೇಶಗಳಿಗೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಬ್ರೆಜಿಲ್ನನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನಕ್ಕೇರಿದೆ.
15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಈ ಹಂತಕ್ಕೇರಿದೆ. ಕೋವಿಡ್ ನಿಂದ ಜಗತ್ತಿನ ಆರ್ಥಿಕ ಪೂರೈಕೆ ಸರಪಣಿಯಲ್ಲಾಗಿರುವ ವ್ಯತ್ಯಾಸಗಳನ್ನು ಭಾರತ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆ ಮೆರೆದಿರುವುದು ಸ್ಪಷ್ಟ.
ಬ್ರೆಜಿಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಸಮುದ್ರ ಮಾರ್ಗದ ದೂರ ಹೆಚ್ಚು. ಇದಕ್ಕೆ ಹೋಲಿಸಿದರೆ ಭಾರತ ಕ್ಷಿಪ್ರವಾಗಿ ತಲುಪಿಕೊಳ್ಳಬಹುದು. ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವಾಸ್ತವವನ್ನು ಚೆನ್ನಾಗಿ ಬಳಸಿಕೊಂಡಿದೆ ಭಾರತ.
ಈ ಬಗ್ಗೆ ಅರಬ್-ಬ್ರೆಜಿಲ್ ಚೇಂಬರ್ ಆಫ್ ಕಾಮರ್ಸ್ ಮಾಹಿತಿ ನೀಡಿದೆ. ಭಾರತವು ಇದೇ ಮೊದಲ ಬಾರಿಗೆ ಆಹಾರ ರಫ್ತಿನಲ್ಲಿ ಮೊದಲ ಸ್ಥಾನಕ್ಕೇರಿದೆ. ಇದಕ್ಕೆ ಕೋವಿಡ್ ಸಾಂಕ್ರಾಮಿಕ ಸಂದರ್ಭವೇ ಕಾರಣ ಎನ್ನಲಾಗಿದೆ. ಅರಬ್ ದೇಶಗಳ ಗುಂಪು, ಬ್ರೆಜಿಲ್ ದೇಶದ ಅತಿದೊಡ್ಡ ವ್ಯಾವಹಾರಿಕ ಪಾಲುದಾರ. ಕೊರೋನಾ ಬಿಕ್ಕಟ್ಟಿನಿಂದಾಗಿ ಅರಬ್ ನಾಡಿಗೆ ಆಹಾರ ಸರಬರಾಜು ಮಾಡಲು ಬ್ರೆಜಿಲ್ಗೆ ಕಷ್ಟವಾಗಿದೆ. ಏಕೆಂದರೆ ಈ ಎರಡೂ ಸ್ಥಳಗಳ ಮಧ್ಯೆ ಅಗಾಧ ದೂರವಿದೆ.
ಅರಬ್ ನಾಡಿನ ಗುಂಪಿನಲ್ಲಿ 22 ದೇಶಗಳಿವೆ. ಈ ದೇಶಗಳು ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳಲ್ಲಿ ಬ್ರೆಜಿಲ್ ಪಾಲು ಶೇ. 8.15ರಷ್ಟಿತ್ತು. ಆದರೆ ಇದೀಗ ಭಾರತದ ಪಾಲು ಶೇ.8.25 ರಷ್ಟು ಏರಿಕೆಯಾಗಿದೆ. 15 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಬ್ರೆಜಿಲ್ನನ್ನು ವ್ಯವಹಾರದಲ್ಲಿ ಭಾರತ ಕೆಳಕ್ಕಿಳಿಸಿದೆ.
ಹೊಲದಿಂದ ವ್ಯಾಪಾರನೌಕೆ ವಸ್ತುಗಳನ್ನು ಸರಬರಾಜು ಮಾಡುವ ಸ್ಪರ್ಧಾತ್ಮಕತೆಯಲ್ಲಿ ಬ್ರಾಜಿಲ್ ಬಹಳ ಮುಂದಿದ್ದರೂ, ಈಗಿನ ಪರಿಸ್ಥಿತಿಯಲ್ಲಿ ಬ್ರೆಜಿಲಿಯನ್ ಹಡಗುಗಳು ಸೌದಿ ಅರೇಬಿಯಾ ತಲುಪುವಷ್ಟರಲ್ಲಿ ಕೃಷಿ ಉತ್ಪನ್ನಗಳು ಹಾಳಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್ ಬಿಕ್ಕಟ್ಟಿಗೆ ಮುಂಚೆ, ಬ್ರೆಜಿಲಿಯನ್ ಹಡಗುಗಳು ಸೌದಿ ಅರೇಬಿಯಾ ತಲುಪಲು 30 ದಿನಗಳು ಬೇಕಾಗಿತ್ತು. ಆದರೆ ಸಾಂಕ್ರಾಮಿಕ ಸ್ಥಿತಿಯಲ್ಲಿ ಈಗ ಬ್ರೆಜಿಲ್ನಿಂದ ಸೌದಿ ಅರೇಬಿಯಾಗೆ ಒಂದು ಹಡಗು ಬರಲು ಸರಾಸರಿ 60 ದಿನಗಳು ಬೇಕಾಗುತ್ತದೆ. ಈ ವಿಳಂಬ ಬ್ರೆಜಿಲ್ ರಫ್ತಿಗೆ ಹೊಡೆದ ಕೊಟ್ಟಿದೆ.
ಭಾರತದ ಭೌಗೋಳಿಕ ಅನುಕೂಲಗಳ ಕಾರಣ ಹಣ್ಣುಗಳು, ತರಕಾರಿ, ಸಕ್ಕರೆ, ಧಾನ್ಯ ಮತ್ತು ಮಾಂಸಗಳನ್ನು ವಾರದೊಳಗೆ ಸಾಗಿಸಲು ಸಾಧ್ಯವಾಗುತ್ತಿದೆ. ಕೇವಲ ಒಂದು ವಾರಕ್ಕೆ ಸಾಗಣೆ ಆಗುತ್ತಿರುವುದರಿಂದ ಬ್ರೆಜಿಲ್ಗೆ ಆದ ಹಿನ್ನಡೆ ಭಾರತಕ್ಕೆ ವರದಾನವಾಗಿದೆ.
Export of agricultural products
Discussion about this post