ನವದೆಹಲಿ: ಅಣು ವಿಜ್ಞಾನಿಗಳು 1997ರಲ್ಲಿ ಪೋಖ್ರಾನ್ ಎರಡನೇ ಹಂತದ ಅಣ್ವಸ್ತ್ರ ಪರೀಕ್ಷೆಗೆ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ, ಆಗ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಇದಕ್ಕೆ ಅನುಮತಿ ನೀಡಿರಲಿಲ್ಲ. ಕನಿಷ್ಠ ಇನ್ನೊಂದು ವರ್ಷ ಇದನ್ನು ತಡೆಹಿಡಿಯುವಂತೆ ಹೇಳಿದ್ದರು ಮತ್ತು ಇದಕ್ಕೆ ಅವರು ಮೂರು ಕಾರಣಗಳನ್ನು ನೀಡಿದ್ದರು ಎಂಬ ಅಂಶ ಬಿಡುಗಡೆಗೆ ಸಿದ್ಧವಾಗಿರುವ ಅವರ ಆತ್ಮಕಥೆ ‘ಫರೋಸ್ ಇನ್ ಎ ಫೀಲ್ಡ್: ಅನ್ಎಕ್ಸ್ಪ್ಲೋರ್ ಲೈಫ್ ಎಚ್.ಡಿ.ದೇವೇಗೌಡ’ ಪುಸ್ತಕದಲ್ಲಿ ಉಲ್ಲೇಖ ಆಗಿದೆ.
‘1997ರಲ್ ಫೆಬ್ರವರಿಯಲ್ಲಿ ಅಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ. ರಕ್ಷಣಾ ಸಚಿವರ ಸಲಹೆಗಾರರಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಆಗ ಅಣುಶಕ್ತಿ ಆಯೋಗದ ಅಧ್ಯಕ್ಷರು ನನ್ನನ್ನು ಭೇಟಿಯಾಗಿ ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ಕೋರಿದ್ದರು. ಇದಕ್ಕೆ ನಾನು ಖಂಡಿತ ಅನುಮತಿ ನೀಡುವೆ, ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವೆ. ಆದರೆ, ಇನ್ನೊಂದು ವರ್ಷ ಕಾಯಿರಿ ಎಂದು ಹೇಳಿದ್ದೆ’ ಎಂದು ದೇವೇಗೌಡರು ಅವರ ಆತ್ಮಚರಿತ್ರೆ ಬರೆದಿರುವ ಸುಗತ ಶ್ರೀನಿವಾಸರಾಜು ಜತೆ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಮಗ್ರ ಅಣ್ವಸ್ತ್ರ ನಿಷೇಧಿತಕ್ಕೆ (ಸಿಟಿಬಿಟಿ) ಅಮೆರಿಕದಿಂದ ಇದ್ದ ಒತ್ತಡ, ಪಾಕಿಸ್ತಾನದ ಜತೆಗೆ ಸಂಬಂಧ ವೃದ್ಧಿಸುವುದು ಮತ್ತು ದೇಶ ಎದುರಿಸುತ್ತಿದ್ದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ದೇವೇಗೌಡರು ಅಣ್ವಸ್ತ್ರ ಪರೀಕ್ಷೆಯನ್ನು ಮುಂದೂಡುವಂತೆ ಸೂಚಿಸಿದ್ದರು ಎಂಬ ಹೇಳಿಕೆಯನ್ನು ಪುಸ್ತಕದಲ್ಲಿ ಉದಾಹರಿಸಲಾಗಿದೆ.
ಮುಂದೆ ಐ.ಕೆ.ಗುಜ್ರಾಲ್ ಪ್ರಧಾನಿಯಾದಾಗಲೂ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದ ಏಳು ವಾರದ ನಂತರ (ಮೇ 1998) ಪೋಖ್ರಾನ್-2 ಅಣ್ವಸ್ತ್ರ ಪರೀಕ್ಷೆ ನಡೆಸಲಾಯಿತು.
Scientists Planned Nuclear Test In 1997. But PM Deve Gowda Gave 3 Reasons To Say No
ಇದನ್ನು ಓದಿ: ತೈವಾನ್ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ
ಇದನ್ನೂ ಓದಿ: Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್
Discussion about this post