ಚಿಕ್ಕಮಗಳೂರು: ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ.ಪ್ರಭು ಮೂಡಿಗೆರೆ ತಾಲ್ಲೂಕಿನ ಚಿನ್ನಿಗಾ ಗ್ರಾಮ ಪಂಚಾಯಿತಿಯ ನಿಡಗೋಡು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಜನವಸತಿಗಳಿಗೆ ನಲ್ಲಿ ಸಂಪರ್ಕ ಒದಗಿಸುವ ಕಾಮಗಾರಿ ಪರಿಶೀಲಿಸಿದರು.
ಈ ಕಾಮಗಾರಿ ಅಂದಾಜು ಮೊತ್ತ ರೂ.೨೨.೦೦ ಲಕ್ಷಗಳಿಗೆ ತಾಂತ್ರಿಕ ಮಂಜೂರಾತಿಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಕಾಮಗಾರಿಗೆ ಏರು ಕೊಳವೆ ಮಾರ್ಗ, ವಿತರಣಾ ಮಾರ್ಗ ಪೂರ್ಣಗೊಂಡಿದ್ದು, ಉಳಿಕೆ ಬಾವಿ ಅಳವಡಿಸುವುದು ಹಾಗೂ ನಲ್ಲಿಕಟ್ಟೆ ಸಂಪರ್ಕ ಒದಗಿಸುವ ಕಾಮಗಾರಿಯು ಮಾಡಬೇಕಾಗಿರುತ್ತದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಕಾಮಗಾರಿಗಳನ್ನು ಪರಿಶೀಲಿಸಿ ಶೀಘ್ರವಾಗಿ ಪೂರ್ಣಗೊಳಿಸಿ ಜನವಸತಿಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಸೂಚಿಸಿದರು. ಬಳಿಕ ಚಿನ್ನಿಗಾ ಗ್ರಾಮ ಪಂಚಾಯತಿಯ ನಿಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿ, ಸುತ್ತಮುತ್ತಲಿನ ಸ್ವಚ್ಚತೆಯನ್ನು ಪಾಲಿಸಿ ಮಕ್ಕಳಿಗೆ ಬಿಸಿಯೂಟ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ವಿನಾಯಕ ಜೆ.ಹುಲ್ಲೂರ ಗ್ರಾ.ಕು.ನೀ ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಎನ್.ಚನ್ನಬಸಪ್ಪ ಕಾರ್ಯನಿರ್ವಾಹಕ ಅಧಿಕಾರಿ ಡಿ.ಡಿ.ಪ್ರಕಾಶ್, ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
GP Chief Executive Officer View works

























Discussion about this post