ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಡಿಸೆಂಬರ್ 9, ಗುರುವಾರದಂದು ಮತ್ತೊಮ್ಮೆ ಅಪ್ಪನ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆ. ಐವತ್ತೇಳು ವರ್ಷದ ಬೋರಿಸ್ ಜಾನ್ಸನ್ ಅವರ ಪತ್ನಿ ಕ್ಯಾರಿ ಜಾನ್ಸನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಜಾನ್ಸನ್ ದಂಪತಿಯ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ. ಅಂದಹಾಗೆ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಜಾನ್ಸನ್ ದಂಪತಿಗೆ ಎರಡನೇ ಮಗು ಜನಿಸಿದಂತಾಗಿದೆ.
ಬೋರಿಸ್ ಜಾನ್ಸನ್ ಅವರಿಗೆ ಕ್ಯಾರಿ ಅವರು ಮೂರನೇ ಹೆಂಡತಿ. ಬೋರಿಸ್ ಜಾನ್ಸನ್ ತಮ್ಮ ಎರಡನೇ ಹೆಂಡತಿ, ವಕೀಲೆಯೂ ಆಗಿರುವ ಮರೀನಾ ವೀಲರ್ ಜೊತೆಗೆ ನಾಲ್ಕು ಮಕ್ಕಳನ್ನು ಪಡಡೆದಿದ್ದಾರೆ. ಮೂರನೇ ಹೆಂಡತಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಮಾಜಿ ಮಾಧ್ಯಮ ಸಲಹೆಗಾರ್ತಿ ಕ್ಯಾರಿ ಅವರ ಜೊತೆ ದಾಂಪತ್ಯ ಜೀವನ ನಡೆಸಿ ಎರಡು ಮಕ್ಕಳನ್ನು ಬ್ರಿಟನ್ ಅಧ್ಯಕ್ಷ ಪಡೆದಿದ್ದಾರೆ. 2020ರಲ್ಲಿ ಕ್ಯಾರಿ ಜಾನ್ಸನ್ ಮತ್ತು ಬೋರಿಸ್ ಜಾನ್ಸನ್ ದಂಪತಿ ಮೊದಲ ಮಗುವಿನ ಪಾಲಕರಾಗಿ ಭಡ್ತಿ ಪಡೆದಿದ್ದರು. ಅದೇ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಈ ತಾರಾ ದಂಪತಿ ಡಬಲ್ ಭಡ್ತಿ ಪಡೆದಂತಾಗಿದೆ.
ಅಲ್ಲದೇ ಬೋರಿಸ್ ಜಾನ್ಸನ್ ವಿವಾಹೇತರ ಸಂಬಂಧದಿಂದ ಇನ್ನೂ ಒಂದು ಹೆಣ್ಣುಮಗು ಮತ್ತು ಗಂಡುಮಗುವನ್ನು ಹೊಂದಿದ್ದಾರೆ ಎನ್ನಲಾಗಿದೆ. ಬ್ರಿಟನ್ನ ಮಾಧ್ಯಮ ಸಂಸ್ಥೆಯೊಂದಕ್ಕೆ ಈಮುನ್ನ ಸಂದರ್ಶನ ನೀಡಿದ್ದ ಬೋರಿಸ್ ಜಾನ್ಸನ್ ತಮಗೆ ಒಟ್ಟು ಆರು ಮಕ್ಕಳು ಇರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಘಟನೆ ಕುರಿತು ಪ್ರತ್ಯಕ್ಷದರ್ಶಿ ಮಾಹಿತಿ
(Boris Johnson and Carrie Johnson have a girl child daughter and mother healthy)
Discussion about this post