ಚಿಕ್ಕಮಗಳೂರು: ತಾಲ್ಲೂಕಿನ ತೇಗೂರು ಗ್ರಾಮದ ಏಳು ಕೋಟಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ನೂತನ ಗೋಪುರ ಕಳಶ ಪ್ರತಿಷ್ಟಾಪನಾ ಕಾರ್ಯಕ್ರಮ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾನುವಾರ ಬೆಳಿಗ್ಗೆ ದೊಡ್ಡಕೆರೆಯಿಂದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಗಂಗೆ ತಂದು ಪೂಜೆ ಸಲ್ಲಿಸಲಾಯಿತು. ಗ್ರಾಮದ ದೇವರಾದ ಶ್ರೀ ಆಂಜನೇಯಸ್ವಾಮಿ, ಅಂತರಘಟ್ಟಮ್ಮ, ದುರ್ಗಾಮ್ಮ, ಕೆಂಚಪ್ಪ ಹಾಗೂ ಸವದತ್ತಿ ಯಲ್ಲಮ್ಮ ದೇವರನ್ನು ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಲಾಯಿತು.
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ಮುಂಭಾಗದ ಆವರಣದಲ್ಲಿ ೫೦ಕ್ಕೂ ಹೆಚ್ಚು ವಿಳೆದೆಲೆಯಲ್ಲಿ ರಸಾಯನ, ಅಡಿಕೆ, ಹಾಲು, ತುಪ್ಪ ಇಡುವ ಮೂಲಕ ದೋಣಿಪೂಜೆಯನ್ನು ಸಮರ್ಪಿ ಸಲಾಯಿತು. ಇದೇ ವೇಳೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಶ್ರೀ ಗುರೂಜಿ ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ದೇವಾಲಯಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಆರ್ಶೀವಚನ ನೀಡಿದರು.
ನಂತರ ಸ್ವಾಮಿಗೆ ಗುರು ಗಣಪತಿ ಪೂಜೆ, ಗಣ ಹೋಮ, ನವಕ ಪ್ರಧಾನ ಹೋಮ, ಕಲಾಕತ್ಸ ಹೋಮ, ಪೂರ್ಣಾಹುತಿ, ಗೋಪುರ ಕಳಶ ಸ್ಥಾಪನೆ, ನವಕ ಪ್ರಧಾನ ಕಲಶಾಭಿಷೇಕ, ಧಾನ್ಯಾಭಿಷೇಕ, ಸ್ವಾಮಿಯವರಿಗೆ ಅಭಿಷೇಕ ನಂತರ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಸಾರ್ವಜನಿಕ ಅನ್ನಸಂಪರ್ತಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗಜೇಂದ್ರ ರಾಜ್ ಅರಸ್, ಶ್ರೀನಿವಾಸ್‌ರಾಜ್ ಅರಸ್, ಪ್ರಕಾಶ್ ರಾಜ್ ಅರಸ್, ಶಿವರಾಜ್ ಅರಸ್, ಶ್ರೀಧರ್‌ರಾಜು, ಮೈಲಾರರಾಜು, ನಾಗರಾಜು, ದೇವಾಲಯ ಅರ್ಚಕ ಗಣೇಶ್ ರಾಜ್ ಅರಸ್ ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
Kalash Aayappana

























Discussion about this post