ಮುಂಬೈ: ನಟಿಯರಾದ ಕರೀನಾ ಕಪೂರ್, ಅಮೃತಾ ಅರೋರಾ ಸೇರಿದಂತೆ ಬಾಲಿವುಡ್‌ನ ನಾಲ್ವರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ. ಸೋಂಕು ತಗುಲಿದ ಇನ್ನಿಬ್ಬರು ಮಹೀಪ್ ಕಪೂರ್ ಹಾಗೂ ಸೀನಾ ಖಾನ್ ಆಗಿದ್ದಾರೆ.
‘ನನಗೆ ಕೋವಿಡ್ ದೃಢಪಟ್ಟಿದೆ. ತಕ್ಷಣವೇ ಪ್ರತ್ಯೇಕ ವಾಸ ಆರಂಭಿಸಿದ್ದು, ಮಾರ್ಗಸೂಚಿ ಪಾಲಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಲು ಮನವಿ’ ಎಂದು ಕರೀನಾ ಇನ್‌ಸ್ಟಾಗ್ರಾಂ ಸಂದೇಶದಲ್ಲಿ ಸೋಮವಾರ ತಿಳಿಸಿದ್ದರು. ಅವರು ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
‘ನನ್ನ ಕುಟುಂಬದವರು ಮತ್ತು ಸಿಬ್ಬಂದಿ ಕೂಡ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅವರ್‍ಯಾರಲ್ಲೂ ಪ್ರಸ್ತುತ ರೋಗಲಕ್ಷಣಗಳು ಕಂಡುಬಂದಿಲ್ಲ. ಅದೃಷ್ಟವಶಾತ್, ನಾನು ಚೆನ್ನಾಗಿದ್ದೇನೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವುದಾಗಿ ಭಾವಿಸಿದ್ದೇನೆ’ ಎಂದು ಕರೀನ ಹೇಳಿದ್ದಾರೆ.
ಇದನ್ನೂ ಓದಿ: Badava Rascal Trailer: ನಿರೀಕ್ಷೆಯನ್ನು ಬೆಟ್ಟದಷ್ಟೆತ್ತರ ಬೆಳೆಸಿದ ಬಡವ ರಾಸ್ಕಲ್
ಇದಕ್ಕೂ ಮುನ್ನ, ಕರೀನಾ ಕಪೂರ್ ಮತ್ತು ಅವರ ಆಪ್ತ ಸ್ನೇಹಿತ ಅಮೃತಾ ಅರೋರಾ ಅವರಿಗೆ ಕೋವಿಡ್ ದೃಢಪಟ್ಟಿದೆ ಎಂದು ಬೃಹನ್ಮುಂಬೈ ನಗರ ಪಾಲಿಕೆ ತಿಳಿಸಿತ್ತು.
ಇದರ ಬೆನ್ನಲ್ಲೇ ಆಭರಣ ವಿನ್ಯಾಸಕಿ, ನಟ ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್‌ಗೂ ಕೋವಿಡ್ ದೃಢಪಟ್ಟಿದೆ. ಸೊಹಾಲಿ ಖಾನ್ ಪತ್ನಿ, ಫ್ಯಾಷನ್ ಡಿಸೈನರ್ ಸೀಮಾ ಖಾನ್‌ಗೂ ಕೋವಿಡ್ ತಗುಲಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟರು ಕೊಟ್ಟರು ಹೊಸ ಅಪ್‌ಡೇಟ್; 777 ಚಾರ್ಲಿ ಬಿಡುಗಡೆ ಯಾವಾಗ?
Discussion about this post