ನವದೆಹಲಿ: ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಎರಡು ದಿನದ ಹಿಂದೆ ಒಪ್ಪಿಗೆ ನೀಡಿರುವ ಬೆನ್ನಿಗೆ ಈ ಕುರಿತು ಆಕ್ಷೇಪವನ್ನು ಸಮಾಜವಾದಿ ಪಕ್ಷದ (ಎಸ್ಪಿ) ಇಬ್ಬರು ಸಂಸದರು ಎತ್ತಿದ್ದಾರೆ.
ಹೆಣ್ಣುಮಕ್ಕಳು ಫಲವಂತಿಕೆಯು 16-17 ವರ್ಷದಿಂದ ಆರಂಭವಾಗಿ 30ನೇ ವರ್ಷದವರೆಗೆ ಹೆಚ್ಚೂ ಸಮರ್ಥವಾಗಿ ಇರುತ್ತದೆ. 16ನೇ ವರ್ಷದಲ್ಲೇ ವಿವಾಹದ ಪ್ರಸ್ತಾವನೆಗಳು ಬರಲು ಆರಂಭವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲೇ ವಿವಾಹ ನಡೆಸುವುದು ಸೂಕ್ತ ಎಂದು ಸಂಸದ ಸೈಯದ್ ತುಫೈಲ್ ಹಸನ್ ಹೇಳಿದ್ದಾರೆ.
16ನೇ ವಯಸ್ಸಿಗೆ ಋತುಮತಿಯಾಗುವ ಹೆಣ್ಣುಮಕ್ಕಳು 18ನೇ ವರ್ಷಕ್ಕೆ ಮತದಾನ ಮಾಡಬಹುದಾದರೆ ಮದುವೆ ಏಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ಮದುವೆ ವಿಳಂಬವಾದರೆ ಎರಡು ಸಮಸ್ಯೆಗಳು ಕಾಡಬಹುದು. ಹೆಣ್ಣು ಮಕ್ಕಳ ವಯಸ್ಸು ಹೆಚ್ಚಾದಂತೆಲ್ಲ ಫಲವಂತಿಕೆಯ ಸಾಮರ್ಥ್ಯ ಕ್ಷೀಣಿಸುತ್ತದೆ. ಇನ್ನೊಂದು ಸಮಸ್ಯೆ ಏನೆಂದರೆ ವಿಳಂಬವಾಗಿ ಮಕ್ಕಳಾಗುವುದರಿಂದ ತಂದೆ-ತಾಯಿ ವೃದ್ಧಾಪ್ಯಕ್ಕೆ ಬಂದರೂ ಮಕ್ಕಳು ಜೀವನದಲ್ಲಿ ಒಂದು ನೆಲೆ ಕಂಡುಕೊಂಡಿರುವುದಿಲ್ಲ. ಇನ್ನು ವ್ಯಾಸಂಗದಲ್ಲಿ ಇರುತ್ತಾರೆ ಇದು ವಯಸ್ಸಾದ ತಂದೆ-ತಾಯಿಗಳ ಮೇಲೆ ಒತ್ತಡವನ್ನು ಉಂಟು ಮಾಡಬಹುದು ಎಂದು ಹೇಳಿದ್ದಾರೆ.
ಇದೇ ರೀತಿಯ ನಿಲುವನ್ನು ಇನ್ನೊಬ್ಬ ಸಂಸದ ಶಫೀಕರ್ ರೆಹಮಾನ್ ಬಾರ್ಕ್ ವ್ಯಕ್ತಪಡಿಸಿದ್ದಾರೆ. ನಮ್ಮದು ಬಡದೇಶ, ಪೋಷಕರು ಹೆಣ್ಣುಮಕ್ಕಳ ಮದುವೆಯನ್ನು ಬೇಗನೆ ಮಾಡಬೇಕು ಎಂದು ಬಯಸುತ್ತಾರೆ. ಆದರೆ, ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆ ಇದಕ್ಕೆ ಅಡ್ಡಿ ಮಾಡುತ್ತದೆ. ಆದ್ದರಿಂದ ನಮ್ಮಪಕ್ಷ ಸಂಸತ್ನಲ್ಲಿ ಈ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಈ ಮಧ್ಯೆ, ಇಬ್ಬರು ಸಂಸದರ ಹೇಳಿಕೆಯಿಂದ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಂತರ ಕಾಯ್ದುಕೊಂಡಿದ್ದಾರೆ.
Samajwadi MP’s Shocker On Marriage Age
ಇದನ್ನು ಓದಿ: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸು 18 ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಇದನ್ನೂ ಓದಿ: ವಿವಾಹದ ನಂತರ ಒತ್ತಾಯದ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ: ತಾಪ್ಸಿ ಗರಂ
Discussion about this post