ಬೇಳೆಗಳನ್ನು ನಾವು ಅನ್ನ, ರೊಟ್ಟಿ ವಿವಿಧ ಸಾಂಬಾರಗಳಲೆಲ್ಲಾ ಪ್ರಯೋಗಿಸುತ್ತೇವೆ. ವಿವಿಧ ಅಡುಗೆಯೊಂದೇ ಅಲ್ಲ ಬೇಳೆಗಳಲ್ಲಿಯೂ ವಿವಿಧತೆ ಇದೆ. ಪ್ರತಿನಿತ್ಯ ಬೇರೆ ಬೇರೆ ಬೇಳೆಗಳನ್ನು ನಾವು ಬಳಸಬಹುದು. ಈ ಬೇಳೆಗೆಳಲ್ಲಿ ಪ್ರೋಟೀನ್, ವಿಟಾಮಿನ್, ಖನಿಜಾಂಶಗಳು ಹೇರಳವಾಗಿರುತ್ತದೆ. ಇವುಗಳಿಂದ ಮಾಡಿದ ಅಡುಗೆಯನ್ನು ನಮ್ಮ ನಿತ್ಯದ ಉತ್ತಮ ಆಹಾರವನ್ನಾಗಿಸಬಹುದು. ಬೇಳೆಗಳನ್ನು ಉಪಯೋಗಿಸಿ ಮಾಡಿದ ಅಡುಗೆಗಳು ತೂಕ ಇಳಿಸುವವರಿಗೆ ಸಹಕಾರಿಯಾಗಿದೆ. ಇದರಲ್ಲಿಯ ಅಧಿಕ ಪ್ರೋಟೀನ್ ಅಂಶವು ಹಸಿವನ್ನು ತಡೆಯುವಂತೆ ಮಾಡುವುದಲ್ಲದೇ ಸ್ನಾಯುಗಳ ಬಲವರ್ಧನೆಗೂ ಸಹಕಾರಿಯಾಗಿದೆ.
ಪ್ರೋಟೀನ್ ಅಂಶ ಅಧಿಕವಾಗಿರುವ ಬೇಳೆಗಳು ಯಾವುವೆಂದರೆ:
1. ಉದ್ದಿನ ಬೇಳೆ:
ಅಧಿಕ ಪ್ರೋಟೀನ್ ಮತ್ತು ವಿಟಾಮಿನ್ ಬಿ ಅಂಶ ಹೊಂದಿರುವ ಉದ್ದಿನ ಬೇಳೆಯನ್ನು ಹೆಚ್ಚಾಗಿ ದಾಲ್ ಮಖ್ನಿ,ಇಡ್ಲಿ, ದೋಸಾಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಯ ಅಂಶ ಕಡಿಮೆ ಇದ್ದು, ಐರನ್, ಫೊಲಿಕ್ ಎಸಿಡ್, ಕ್ಯಾಲ್ಸಿಯಂ, ಮ್ಯಾಗ್ನಾಸಿಯಂ, ಪೋಟ್ಯಾಸಿಯಂಗಳು ಹೇರಳವಾಗಿದೆ. ದಿನ ನಿತ್ಯದ ಅಡುಗೆಯಲ್ಲಿ ಬಳಸುವ ಉದ್ದಿನಬೇಳೆಯು ಜೀರ್ಣಶಕ್ತಿ ವೃದ್ಧಿಸಲು, ಹೃದಯದ ಆರೋಗ್ಯವನ್ನು ಕಾಪಾಡಲು, ಶಕ್ತಿಯನ್ನು ಹೆಚ್ಚಿಸಲು, ಎಲುಬನ್ನು ಗಟ್ಟಿಯಾಗಿಸಲು ಮತ್ತು ನರ ಮಂಡಲವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅರ್ಧ ಕಪ್ ಉದ್ದಿನಬೇಳೆಯಲ್ಲಿ 12ಗ್ರಾಂ ಪ್ರೋಟೀನ್ ಇರುತ್ತದೆ.
2. ಕಡಲೆ ಬೇಳೆ:
ಪ್ರೋಟೀನ್ ಮತ್ತು ಫೈಬರ್ ಯಥೇಚ್ಛವಾಗಿರುವ ಕಡಲೆಬೇಳೆಯು ನಮ್ಮ ಆರೋಗ್ಯ ವರ್ಧನೆಗೆ ಸಹಕಾರಿ. ಒಂದು ಕಪ್ ಕಡಲೆಬೇಳೆಯು ಸಾಕಷ್ಟು ಪ್ರೋಟೀನ್, ಐರನ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಅನ್ನು ನಮಗೆ ಒದಗಿಸುತ್ತದೆ. ಇದು ಹೃದ್ರೋಗಿಗಳಿಗೆ ಮತ್ತು ಮಧುಮೇಹಿಗಳಿಗೂ ಅನುಕೂಲ. ಅದಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಂಪು ರಕ್ತಕಣಗಳನ್ನು ಹಚ್ಚಿಸಲು ಪಯ್ರೋಜನಕಾರಿ. ಅರ್ಧ ಕಪ್ ಕಡಲೆ ಬೇಳೆಯು 9ಗ್ರಾಂ ಪ್ರೋಟೀನ್ ಕೊಡುತ್ತದೆ.
3. ಮಸೂರ್ (ಮಸೂರಿ ಬೇಳೆ):
ಮಸೂರ್ ಅಥವಾ ಮಸೂರಿ ಬೇಳೆಯು ಉತ್ತರ ಭಾರತದ ಅಡುಗೆಗಳಲ್ಲಿ ಪ್ರಾಧಾನ್ಯವನ್ನು ಪಡೆದಿದೆ. ಸಾಮಾನ್ಯವಾಗಿ ಅನ್ನ ಅಥವಾ ಕುರುಕಲು ತಿಂಡಿ(snack items)ಗಳ ಜೊತೆ ಈ ಬೇಳೆಯನ್ನು ಸೇವಿಸುತ್ತಾರೆ. ಸಿಪ್ಪೆ ಸಹಿತ ಅಥವಾ ಸಿಪ್ಪೆ ರಹಿತ ಮಸೂರಿ ಬೇಳೆಯು ರುಚಿಕರವಾಗಿರುತ್ತದೆ. ಇದು ಪ್ರೋಟೀನ್, ಐರನ್, ಫೈಬರ್, ವಿಟಾಮಿನ್ C, B6,B2, ಫೋಲಿಕ್ ಎಸಿಡ್, ಕ್ಯಾಲ್ಸಿಯಂ, ಝಿಂಕ್ ಮತ್ತು ಮ್ಯಾಗ್ನಿಸಿಯಂಗಳ ಆಗರ. ಅರ್ಧ ಕಪ್ ಬೇಳೆಯು 9ಗ್ರಾಂ ಪ್ರೋಟೀನ್ ಕೊಡುತ್ತದೆ.
4. ತೊಗರೀ ಬೇಳೆ:
ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗಳಲ್ಲಿ ಹೆಚ್ಚಾಗಿ ಉಪಯೋಗಿಸುವ ಬೇಳೆಯೆಂದರೆ ತೊಗರಿ. ಕಿಚಡಿ, ಸಾಂಬಾರುಗಳಲ್ಲಿ ಇದರ ಉಪಯೋಗ ಹೆಚ್ಚು. ಇದು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಆಗರ. ಪೈಬರ್, ಫೋಲಿಕ್ ಎಸಿಡ್, ಐರನ್ ಮತ್ತು ಕ್ಯಾಲ್ಸಿಯಂಗಳು ಅಧಿಕವಾಗಿದೆ. ನಿತ್ಯ ತೊಗರಿಬೇಳೆಯ ಉಪಯೋಗವು ದೇಹದಲ್ಲಿ ಪ್ರೋಟೀನ್ ಅಂಶವನ್ನು ಅಧಿಕಗೊಳಿಸುತ್ತದೆ. ಇದು ಮಧುಮೇಹಿಗಳಿಗೆ ಮತ್ತು ಹೃದ್ರೋಗಿಗಳಿಗೂ ಒಳ್ಳೆಯದು. ಫೋಲಿಕ್ ಎಸಿಡ್ ಅಧಿಕವಾಗಿರುವುದರಿಂದ ಇದನ್ನು ಗರ್ಭಿಣಿಯರಿಗೆ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. 100ಗ್ರಾಂ ತೊಗರಿಬೇಳೆಯಲ್ಲಿ 22ಗ್ರಾಂ ಪ್ರೋಟೀನ್ ಇದೆ.
Lentils for healthy food
ಇದನ್ನೂ ಓದಿ: Winter Food: ಚಳಿಗಾಲದ ಆಹಾರಗಳು; ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್ ಸಲಹೆಗಳು ಇಲ್ಲಿವೆ
Discussion about this post