ನಟಿ ಪ್ರಿಯಾಂಕಾ ಚೋಪ್ರಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪತಿ ನಿಕ್ ಜೋನಸ್ ಹೆಸರು ಕೈಬಿಟ್ಟಿದ್ದು ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ತಾರಾ ಜೋಟಿಯಾಗಿದ್ದ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೂ ಮೊದಲೂ ಇದೇ ರೀತಿ ಮಾಡಿದ್ದರು. ಹೀಗಾಗಿ ಪ್ರಿಯಾಂಕಾ ದಂಪತಿ ಕೂಡ ಇದೇ ಹಾದಿ ಹಿಡಿಯಲಿದ್ದಾರಾ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ವದಂತಿಗಳನ್ನು ಅಲ್ಲಗಳೆದಿದ್ದ ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಮಗಳು ಅಳಿಯ ಚೆನ್ನಾಗಿಯೇ ಇದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಪ್ರಿಯಾಂಕಾ ಮಾತ್ರ ಈವರೆಗೆ ತುಟಿಬಿಚ್ಚಿರಲಿಲ್ಲ.
ಇದನ್ನೂ ಓದಿ: 2022ರಲ್ಲಿ ಮದುವೆಯಾಗಲಿದ್ದಾರಾ ಸಿದ್ಧಾರ್ಥ್ ಮಲ್ಹೋತ್ರಾ – ಕಿಯಾರಾ ಅಡ್ವಾಣಿ?
ಇದೀಗ ಆಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅದು ಕೇವಲ ಸಾಮಾಜಿಕ ಮಾಧ್ಯಮವಷ್ಟೇ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ನಿರಾಳರನ್ನಾಗಿಸಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅವರು, ಟ್ವಿಟರ್ನಲ್ಲಿ ಹಾಗೂ ಇನ್ಸ್ಟಾಗ್ರಾಂನಲ್ಲಿ ಒಂದೇ ಯೂಸರ್ನೇಮ್ ಬೇಕಿತ್ತು. ಆ ಕಾರಣಕ್ಕಾಗಿ ಇನ್ಸ್ಟಾಗ್ರಾಂನಿಂದ ಜೋನಸ್ ಹೆಸರು ತೆಗೆದುಹಾಕಿದ್ದೆ. ಪ್ರತಿಯೊಂದು ವಿಷಯವನ್ನೂ ಜನ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾಗೆ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ
Discussion about this post