ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯ ನೀಟ್ ಪರೀಕ್ಷೆ ಬರೆದು ಸೀಟು ಹಂಚಿಕೆಗಾಗಿ ಕೌನ್ಸಲಿಂಗ್ ಎದುರು ನೋಡುತ್ತಿರುವ ಸ್ಥಾನೀಕ ವೈದ್ಯರ ಸಂಘಗಳ ಮಹಾಒಕ್ಕೂಟ (ಫೋರ್ಡಾ) ದೆಹಲಿ ಪ್ರತಿಭಟನೆ ತೀವ್ರಗೊಳಿಸಿದೆ. ಸೋಮವಾರ ತಮ್ಮ “ಲ್ಯಾಬ್ ಕೋಟ್”ಗಳನ್ನು ಸಾಂಕೇತಿಕವಾಗಿ ಮರಳಿಸಿದ ವೈದ್ಯರು, ಸರ್ಕಾರ ಕೂಡಲೇ ಕೌನ್ಸಲಿಂಗ್ ಆರಂಭಿಸದಿದ್ದರೆ ಬುಧವಾರದಿಂದ ಚಿಕಿತ್ಸೆ ನೀಡುವುದನ್ನು ಪರಿಪೂರ್ಣವಾಗಿ ನಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಫೋರ್ಡಾ ಪ್ರತಿಭಟನೆಗೆ ಏಮ್ಸ್ ಸ್ಥಾನೀಕ ವೈದ್ಯರ ಅಸೋಸಿಯೇಷನ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಬುಧವಾರದಿಂದ ತುರ್ತು ಚಿಕಿತ್ಸೆ ಬಿಟ್ಟು ಉಳಿದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಫೋರ್ಡಾ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಇದು ತೀವ್ರಗೊಂಡಿತು. ಸರೋಜಿನಿ ನಗರ್ ಪೊಲೀಸ್ ಠಾಣೆಯ ಮುಂದೆ ನಾಲ್ಕು ಸಾವಿರ ವೈದ್ಯರು ಸೋಮವಾರ ರಾತ್ರಿ ಕೂಡ ಕೊರೊನಾ ನಿಮಿತ್ತ ವಿಧಿಸಿರುವ ನಿರ್ಬಂಧ ಕ್ರಮಗಳನ್ನು ಲೆಕ್ಕಿಸಿದೆ ಪ್ರತಿಭಟನೆ ನಡೆಸಿದರು.
ಡಿಸೆಂಬರ್ನ ಚಳಿ ಲೆಕ್ಕಿಸದೆ ಅಧಿಕ ಸಂಖ್ಯೆಯಲ್ಲಿ ವೈದ್ಯೆಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ವೇಳೆ ತಮ್ಮ ಮೇಲೆ ಬಲಪ್ರಯೋಗ ಮಾಡಲಾಯಿತು ಎಂದು ವೈದ್ಯೆಯರು ದೂರಿದ್ದಾರೆ.
ಸ್ಥಾನೀಕ ವೈದ್ಯರ ಈ ಪ್ರತಿಭಟನೆಯಿಂದ ದೆಹಲಿಯಲ್ಲಿ ಮೂರು ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಾದ ಸಫ್ದಾರ್ಜಂಗ್, ಆರ್ಎಂಎಲ್, ಲೇಡಿ ಹಾರ್ಡಿಂಜ್ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯವಾಗಿದೆ. ಇದರಿಂದ ರೋಗಿಗಳು ಪರದಾಡುವಂತೆ ಆಗಿದೆ.
Delhi Doctors Brave Police Crackdown On Massive Protest Over NEET Exam
ಇದನ್ನು ಓದಿ: ನಿರಶನದ ವೇಳೆಯಲ್ಲಿ ಹಾನಿಯಾದರೆ ವೆಚ್ಚ ಪ್ರತಿಭಟನಾಕಾರರಿಂದಲೇ ವಸೂಲಿ: ಮಧ್ಯಪ್ರದೇಶದಲ್ಲಿ ಮಸೂದೆ
ಇದನ್ನೂ ಓದಿ: ನೀಟ್ ಪದವಿ ಪ್ರವೇಶ ಪರೀಕ್ಷೆ- 2021 ರದ್ದುಗೊಳಿಸಿ ಹೊಸ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ
Discussion about this post