ಲಖನೌ: ಉತ್ತರ ಪ್ರದೇಶದ ಕಾನ್ಪುರ ಮೂಲದ ಸುಗಂಧ ದ್ರವ್ಯ ತಯಾರಿಕಾ ಕಾರ್ಖಾನೆ ಹೊಂದಿರುವ ಉದ್ಯಮಿ ಪಿಯೂಷ್ ಜೈನ್ ಬಳಿ ಮೊಗೆದಷ್ಟು ಅಕ್ರಮ ಆಸ್ತಿ ಹೊರಬರುತ್ತಿದೆ. 250 ಕೆ.ಜಿ. ಬೆಳ್ಳಿ, 25 ಕೆ.ಜಿ. ಚಿನ್ನ, 600 ಕೆ.ಜಿ. ಗಂಧದ ಎಣ್ಣೆ ಪತ್ತೆಯಾಗಿದೆ. ಒಟ್ಟು ವಶಪಡಿಸಿಕೊಂಡ ನಗದು 257 ಕೋಟಿ ರೂ. ದಾಟಿದೆ ಎಂದು ಈ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಹಾಗೂ ಜಿಎಸ್ಟಿ ಬೇಹುಗಾರಿಕಾ ನಿರ್ದೇಶನಾಲಯ (ಡಿಜಿಜಿಐ) ಹೇಳಿದೆ. ಈ ಮಧ್ಯೆ, ಪಿಯೂಷ್ ಜೈನ್ರನ್ನು ಸೋಮವಾರ ಕೋರ್ಟ್ಗೆ ಹಾಜರು ಮಾಡಲಾಗಿದ್ದು, ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪಿಯೂಷ್ರನ್ನು ಭಾನುವಾರ ರಾತ್ರಿ ಬಂಧಿಸಲಾಗಿತ್ತು.
ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹೊಂದಿದ್ದರೂ, ಇದು ಯಾರ ಗಮನಕ್ಕೂ ಬರಬಾರದು ಎಂದು ಮತ್ತು ಹಳೆಯ ಸ್ಕೂಟರ್ ಮತ್ತು ಹಳೇ ಮಾಡಲ್ ಕಾರಿನಲ್ಲಿ ಓಡಾಡುತ್ತಿದ್ದರು. ಮನೆಗೆಲಸದವರನ್ನೂ ಇಟ್ಟುಕೊಂಡಿರಲಿಲ್ಲ. ಮನೆಯ ಭದ್ರತಾ ಸಿಬ್ಬಂದಿಯನ್ನು ಒಂದು ವರ್ಷಕ್ಕೊಮ್ಮೆ ಬದಲಾವಣೆ ಮಾಡುತ್ತಿದ್ದರು ಎಂಬ ಅಂಶಗಳು ಈಗ ಬಯಲಾಗಿವೆ.
ಪಿಯೂಷ್ಗೆ ಸೇರಿದ ಕಾನ್ಪುರ, ಕನೌಜ್ಗಳ 11 ಸ್ಥಳಗಳು, ಗುಜರಾತ್, ಮುಂಬೈನಲ್ಲಿ ಗುರುವಾರದಿಂದ ಶೋಧಕಾರ್ಯ ನಡೆಯುತ್ತಿದೆ. ಕಾನ್ಪುರದ ಮನೆಯಲ್ಲಿ 177.45 ಕೋಟಿ ರೂ., ಕನೌಜ್ನ ಪೂರ್ವಜರ ಮನೆಯಲ್ಲಿ 10 ಕೋಟಿ ರೂ. ಕನೌಜ್ ಕೈಗಾರಿಕಾ ಘಟಕದಲ್ಲಿ 17 ಕೋಟಿ ರೂ. ನಗದು ಸೇರಿ ಈವರೆಗೆ 257 ಕೋಟಿ ರೂ. ನಗದು ಪತ್ತೆಯಾಗಿದೆ.
UP Businessman Who Had ₹ 257 Crore Cash At
ಇದನ್ನು ಓದಿ: ಪಿಯೂಷ್ ಜೈನ್ ಬಂಧನ: ಕನೌಜ್ ಮನೆಯಲ್ಲಿದ್ದ 10 ಕೋಟಿ ರೂಪಾಯಿ ವಶ
ಇದನ್ನೂ ಓದಿ: IT Raid ಕಾನ್ಪುರದ ಉದ್ಯಮಿ ಮೇಲೆ ಐಟಿ ದಾಳಿ: 150 ಕೋಟಿ ರೂ. ನಗದು ವಶ
Discussion about this post