ದೆಹಲಿ: ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ, ನಗರದ ಜನರು ಭಯಪಡಬೇಕಿಲ್ಲ, ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಯೆಲ್ಲೋ ಅರ್ಲಟ್ ಅಡಿಯಲ್ಲಿ ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಕಾರ್ಯನಿರ್ವಹಿಸುತ್ತವೆ, ಮಾಲ್ಗಳು ಮತ್ತು ಅಂಗಡಿಗಳು ಬೆಸ-ಸಮ ಆಧಾರದ ಮೇಲೆ ತೆರೆಯಲ್ಪಡುತ್ತವೆ. ಮದುವೆಗೆ 20 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಸರ್ಕಾರ ತಿಳಿಸಿದೆ.
ಹೊಸ ನಿಯಮಗಳು ಹೀಗಿವೆ.
1. ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತದೆ.
2. ಆಸ್ಪತ್ರೆಗಳು, ಮಾಧ್ಯಮಗಳು, ಬ್ಯಾಂಕ್ಗಳು, ವಿಮಾ ಕಂಪನಿಗಳು ಮತ್ತು ಟೆಲಿಕಾಂ ಸೇವೆಗಳನ್ನು ಒಳಗೊಂಡಿರುವ ಗೊತ್ತುಪಡಿಸಿದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಖಾಸಗಿ ಕಚೇರಿಗಳು 50% ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತವೆ.
3. ಮದುವೆಗೆ 20 ಜನರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಮನೆಯಲ್ಲಿ ಅಥವಾ ನ್ಯಾಯಾಲಯದಲ್ಲಿ ಮಾತ್ರ ನಡೆಯಬಹುದಾಗಿದೆ. ಅಂತ್ಯಕ್ರಿಯೆಗೂ 20 ವ್ಯಕ್ತಿಗಳ ಮಿತಿ ಅನ್ವಯಿಸುತ್ತದೆ.
4. ಮಾಲ್ಗಳು ಮತ್ತು ಅಂಗಡಿಗಳು ಬೆಸ-ಸಮ ಆಧಾರದ ಮೇಲೆ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತವೆ. ಆನ್ಲೈನ್ ಡೆಲಿವರಿ ಮುಂದುವರಿಯಬಹುದು. ವಸತಿ ಪ್ರದೇಶಗಳಲ್ಲಿನ ಸ್ವಂತ ಅಂಗಡಿಗಳು ಅಥವಾ ಮಾರುಕಟ್ಟೆಗಳು ಬೆಸ-ಸಮ ನಿಯಮ ಅನುಸರಿಸಬೇಕಿಲ್ಲ.
5. ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ಮತ್ತು ಜಿಮ್ಗಳು ಮತ್ತೆ ಮುಚ್ಚಲ್ಪಡುತ್ತವೆ. ಶಾಲಾ-ಕಾಲೇಜುಗಳು ಬಂದ್ ಆಗಲಿವೆ.
6. ರಾತ್ರಿ 10 ಗಂಟೆಗೆ ರೆಸ್ಟೋರೆಂಟ್ಗಳು ಮತ್ತು ಬಾರ್ಗಳನ್ನು ಮುಚ್ಚಲಾಗುತ್ತದೆ. ಇವುಗಳು ತಮ್ಮ ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ.
7. ದೆಹಲಿ ಮೆಟ್ರೋ ಕೂಡ ಅರ್ಧದಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ.
8. ಸಲೂನ್ಗಳು, ಕ್ಷೌರಿಕ ಅಂಗಡಿಗಳು ಮತ್ತು ಪಾರ್ಲರ್ಗಳು ತೆರೆಯಲು ಅನುಮತಿಯಿದೆ. ಸ್ಪಾಗಳು ಮತ್ತು wellness clinics ಮುಚ್ಚಲಾಗುವುದು.
9. ರಾಜಕೀಯ, ಧಾರ್ಮಿಕ, ಹಬ್ಬ-ಸಂಬಂಧಿತ ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ. ಧಾರ್ಮಿಕ ಸ್ಥಳಗಳು ತೆರೆದಿರಬಹುದು ಆದರೆ ಹೊರಗಿನಿಂದ ಜನ ಹೋಗುವಂತಿಲ್ಲ.
ಕಳೆದ ಎರಡು ದಿನಗಳಿಂದ ಕೊರೊನಾ ಪಾಸಿಟಿವ್ ರೇಟ್ 0.5 ಶೇಕಡಾಕ್ಕಿಂತ ಹೆಚ್ಚಿತ್ತು, ಹೀಗಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP) ಪ್ರಕಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
Yellow Alert
Discussion about this post