ನವದೆಹಲಿ: ಪಾಲಿಸಿದಾರರು ಆರೋಗ್ಯ ವಿಮೆ ಕೊಳ್ಳುವ ಸಂದರ್ಭದಲ್ಲಿ ಅನಾರೋಗ್ಯದ ವಿಚಾರವನ್ನು ಮುಚ್ಚುಮರೆ ಮಾಡದೆ ನಿರ್ವಂಚನೆಯಿಂದ ತಿಳಿಸಿದ್ದರೆ. ಅಂಥ ಪಾಲಿಸಿದಾರರು ಕ್ಲೈಮು ಸಲ್ಲಿಸಿದಾಗ ಹೊಂದಿದ್ದ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಕ್ಲೈಮ್ ಅಜಿರ್ಯನ್ನು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಯುನೈಟೆಡ್ ಇನ್ಶುರೆನ್ಸ್ ಕಂಪನಿಗೆ ಅಜಿರ್ದಾರರ ಕ್ಲೈಮ್ ಅನ್ನು ಇತ್ಯರ್ಥ ಪಡಿಸಲು ಸೂಚಿಸಿದೆ.
ಮನಮೋಹನ್ ನಂದಾ ಎಂಬ ಪಾಲಸಿದಾರರು ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಓವರ್ಸೀಸ್ ಮೆಡಿಕ್ಲೆಮ್ ಬಿಜಿನೆಸ್ ಆ್ಯಂಡ್ ಹಾಲಿ ಡೇ ಪಾಲಿಸಿಯನ್ನು ಖರೀದಿಸಿದ್ದರು. ಸ್ಯಾನ್ ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರಿಗೆ ಹೃದಯಾಘಾತ ಆಯಿತು. ಹೀಗಾಗಿ ಅವರು ಅಮೆರಿಕದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಇದರ ವೈದ್ಯಕಿಯ ವೆಚ್ಚದ ಮರುಪಾವತಿಗಾಗಿ ಅವರು ವಿಮಾ ಕಂಪನಿಗೆ ಅಜಿರ್ ಸಲ್ಲಿಸಿದ್ದರು. ಆದರೆ, ಪಾಲಿಸಿದಾರರಿಗೆ ಹೈಪರ್ಲಿಪಿಡೆಮಿಯಾ ಮತ್ತು ಮಧುಮೇಹ ಇದ್ದ ಕಾರಣ ಕ್ಲೈಮು ಮಾನ್ಯವಲ್ಲ ಎಂದು ವಿಮಾ ಸಂಸ್ಥೆ ಹೇಳಿತು. ಹೀಗಾಗಿ ಅವರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋದರು. ಆದರೆ ಅಲ್ಲಿ ವಿಮಾ ಕಂಪನಿಯ ವಾದಕ್ಕೆ ಮನ್ನಣೆ ದೊರೆಯಿತು. ಅವರ ಅರ್ಜಿ ವಜಾ ಗೊಂಡಿತು. ಇದನ್ನು ಪ್ರಶ್ನಿ ಅವರು ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ನ್ಯಾಯಮೂತಿರ್ಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ,ಅಜಿರ್ದಾರರ ಕ್ಲೈಮ್ ಅನ್ನು ಎತ್ತಿ ಹಿಡಿಯಿತು.
Insurer Can’t Reject Claim By Citing Existing Medical Condition
ಇದನ್ನು ಓದಿ: ಇಡಬ್ಲೂಎಸ್ ವರ್ಗದವರ ವಾರ್ಷಿಕ ಆದಾಯ 8 ಲಕ್ಷ ರೂ. ನಗದಿ ಮಾಡಿದರ ಮಾನದಂಡವೇನು?
ಇದನ್ನೂ ಓದಿ: ಎಲ್ಐಸಿ ವಿಮಾ ಕಂತನ್ನು ಪಿಎಫ್ ಮೂಲಕವೂ ಜಮಾ ಮಾಡಲು ಅವಕಾಶ
Discussion about this post