ನವದೆಹೆಲಿ: 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಜನವರಿ 1ರಿಂದ ಕೋವಿನ್ ಆಪ್‌ನಲ್ಲಿ ನೋಂದಣಿ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಕೋವಿನ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ, 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 1 ರಿಂದ ಕೋವಿನ್ ಆಯಪ್ ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ. ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಲು, ಮಕ್ಕಳು 10 ನೇ ತರಗತಿಯ ಗುರುತಿನ ಚೀಟಿಯನ್ನು ಬಳಸಬಹುದು” ಎಂದಿದ್ದಾರೆ.
ಇನ್ನು ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ‘ಮುನ್ನೆಚ್ಚರಿಕೆ ಡೋಸ್’ ಅನ್ನು ಜನವರಿ 10, 2022 ರಿಂದ ನೀಡಲಾಗುವುದು.
Corona Lacy for children 15-18 years old

























Discussion about this post