ಮುಂಬೈ: ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ಈ ವರ್ಷ ಅಮ್ಮನಾಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅವರ ಪತಿ, ಉದ್ಯಮಿ ಗೌತಮ್ ಕಿಚ್ಲು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.
ಕಾಜಲ್ ಅವರು ಹಳದಿ ದಿರಿಸು ಉಟ್ಟಿರುವ ಫೋಟೊ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗೌತಮ್ ಕಿಚ್ಲು, ‘ಇಲ್ಲಿ ನಿಮ್ಮನ್ನು 2022 ಎದುರುನೋಡುತ್ತಿದೆ’ ಎಂದು ಬರೆದಿದ್ದಾರೆ. ಇದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ: ಕೊಲರಾಡೋದಲ್ಲಿ ಅಲನ್ನಾ ಪಾಂಡೆ ರಜೆಯ ಮಜಾ: ಬಿಕಿನಿ ಫೋಟೋ ಮೂಲಕ ಹವಾ ಎಬ್ಬಿಸಿದ ಬಾಲಿವುಡ್ ಚೆಲುವೆ
‘ಹಳೆಯದಕ್ಕೆ ನನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಿದ್ದೇನೆ. ಹೊಸ ಆರಂಭಕ್ಕೆ ಕಣ್ಣುಗಳನ್ನು ತೆರೆದುಕೊಳ್ಳುತ್ತಿದ್ದೇನೆ. 2021ಕ್ಕೆ ಅನಂತ ಕೃತಜ್ಞತೆಗಳು. 2022 ಅನ್ನು ದಯೆ, ಪ್ರೀತಿ ತುಂಬಿದ ಹೃದಯದೊಂದಿಗೆ ಎದುರುನೋಡುತ್ತಿದ್ದೇನೆ’ ಎಂದು ಶನಿವಾರ ಕಾಜಲ್ ಅಗರ್ವಾಲ್ ಇನ್ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದರು.
ಸದ್ಯ ಕಾಜಲ್ ಅವರು ಚಿರಂಜೀವಿ ಹೀರೋ ಆಗಿರುವ ‘ಆಚಾರ್ಯ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
View this post on Instagram
View this post on Instagram
Discussion about this post