Political News: ಅತ್ಯಾಚಾರ ಪ್ರಕರಣದ ಆರೋಪ ಹೊತ್ತು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು(Prajwal Revanna) ಎಸ್‌ಐಟಿ(SIT) ತಂಡ ಹಲವು ದಿನಗಳಿಂದ ಹುಡುಕುತ್ತಿದೆ. ಎಲೆಕ್ಷನ್ (election)ಮುನ್ನಾ ದಿನದವರೆಗೂ ತನಗೇನೂ ಗೊತ್ತೇ ಇಲ್ಲ. ತಾನೇನೂ ಮಾಡೇ ಇಲ್ಲ ಅನ್ನೋ ಹಾಗಿದ್ದ ಪ್ರಜ್ವಲ್ ರೇವಣ್ಣ, ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುವ ಹೊತ್ತಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ (diplomatic passport)ಬಳಸಿ, ವಿದೇಶಕ್ಕೆ ಹಾರಿದ್ದಾರೆ.
ಅಲ್ಲಿಂದ ಇಂದು ಬರುತ್ತೇನೆ, ನಾಳೆ ಬರುತ್ತೇನೆ, ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿ, ಪದೇ ಪದೇ ಫ್ಲೈಟ್ ಟಿಕೇಟ್ ಮಾಡಿಸಿ, ಕ್ಯಾನ್ಸಲ್ ಮಾಡಿದ್ದಾರೆ. ಈ ಮೂಲಕ ಸುಮಾರು 8 ಲಕ್ಷಕ್ಕೂ ಹೆಚ್ಚು ದುಡ್ಡನ್ನು ವ್ಯಯಿಸಲಾಗಿದೆ. ಅಲ್ಲದೇ, ಪ್ರಜ್ವಲ್ ಅಕೌಂಟ್‌ಗೆ ಕೋಟಿ ಕೋಟಿ ಹಣ ಸಂದಾಯ ಆಗಿದೆ ಅನ್ನೋ ಮಾಹಿತಿಯೂ ಇದೆ. ಪ್ರಜ್ವಲ್ ಟ್ವೀಟ್ ಮಾಡಿ, ತಾನು ಮೇ 16ಕ್ಕೆ ಎಸ್‌ಐಟಿ(SIT) ಎದುರು ಬಂದು ವಿಚಾರಣೆಗೆ ಹಾಜರಾಗುತ್ತೇನೆ. ಅಲ್ಲಿಯವರೆಗೂ ಸಮಯ ಕೊಡಿ. ಎಲ್ಲರಿಗೂ ಸತ್ಯ ಗೊತ್ತಾಗುತ್ತದೆ ಎಂದು ಪ್ರಜ್ವಲ್ ಹೇಳಿದ್ದರು.
ಆದರೆ ಈವರೆಗೆ ಪ್ರಜ್ವಲ್ ಜರ್ಮನಿಯಿಂದ ಬೇರೆ ಬೇರೆ ಕಡೆ ಹೋಗುತ್ತಿದ್ದಾರೆಂಬ ಸುದ್ದಿ ಇದೆ ವಿನಃ ಭಾರತಕ್ಕಂತೂ ಬಂದಿಲ್ಲ. ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿದಿನ ಬಕಪಕ್ಷಿಯಂತೆ ಎಸ್‌ಐಟಿ ತಂಡ ಕಾದು ಕುಳಿತಿದ್ದು, ಒಮ್ಮೆ ಪ್ರಜ್ವಲ್ ಭಾರತಕ್ಕೆ ಬಂದ್ರೆ, ಮತ್ತೆ ಅವರನ್ನು ಅರೆಸ್ಟ್ ಆಗುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗಿದೆ. ಜೈಲೂಟ ಫಿಕ್ಸ್ ಎನ್ನುವಂಥ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಪ್ರಜ್ವಲ್ ಕಣ್ಣು ಮುಚ್ಚಾಲೆ ಆಟವಾಡುತ್ತಿದ್ದಾರೆ.
ಈ ಕಾರಣಕ್ಕೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ, ಎಸ್‌ಐಟಿ ವಿಚಾರಣೆಗೆ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿ, ಕಾನೂನಿನಡಿ ವಿಚಾರಣೆ ಎದುರಿಸಲು ಎಸ್‌ಐಟಿ ಗೆ ಕೇಂದ್ರ ಸರ್ಕಾರ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಟ್ವೀಟ್(tweet) ಮಾಡಿದ್ದಾರೆ.
ಒಟ್ಟಾರೆಯಾಗಿ, ಕುಕೃತ್ಯ ಮಾಡಿ, ತಲೆ ಮರೆಸಿಕೊಂಡಿರುವ ಪ್ರಜ್ವಲ್ ಹುಡುಕಾಟವಂತೂ ಜಾರಿಯಲ್ಲಿದೆ. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ(former cm kumaraswamy) ಕೂಡ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ಪ್ರಜ್ವಲ್ ಎಲ್ಲಿದ್ದರೂ ಬೇಗ ಬಾ, ಜೆಡಿಎಸ್‌ನ್ನು ಶತಾಯ ಗತಾಯ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಕೈ ಮುಗಿದು ವಿನಂತಿಸಿದ್ದಾರೆ. ಇನ್ನು ಮಾಜಿ ಪ್ರಧಾನಿ ದೇವೇಗೌಡರು,(former PM Devegowda) ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡ. ಎಲ್ಲಿದ್ದರೂ ಬೇಗ ಭಾರತಕ್ಕೆ ಬಾ ಎಂದು ವಾರ್ನ್ ಮಾಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿ, ಕಾನೂನಿನಡಿ ವಿಚಾರಣೆ ಎದುರಿಸಲು ಎಸ್‌ಐಟಿ ಗೆ ಕೇಂದ್ರ ಸರ್ಕಾರ ನೆರವಾಗುವಂತೆ ಪ್ರಧಾನಿ @narendramodi ಅವರಿಗೆ ಪತ್ರದ ಮೂಲಕ… pic.twitter.com/XWlXObDSxx
— Siddaramaiah (@siddaramaiah) May 23, 2024
Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಏನು ಲಾಭ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
Discussion about this post