Recipe: 3 ಬದನೇಕಾಯಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಹೀಂಗೂ, ಚಿಟಿಕೆ ಅರಿಷಿನ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, ಅಗತ್ಯವಿದ್ದರೆ 10ರಿಂದ15 ಶೇಂಗಾ ಬೀಜ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.
ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.
ಈಗ ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಶೇಂಗಾಬೀಜ, ಕರಿಬೇವು ಹಾಕಿ ಹುರಿಯಿರಿ. ಈಗ ಇದಕ್ಕೆ ಉಪ್ಪು ನೀರಿನಲ್ಲಿ ನೆನೆಸಿದ ಬದನೇಕಾಯಿ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಬದನೇಕಾಯಿ ಸುಕ್ಕೆ ರೆಡಿ.
ಚಪಾತಿ, ರೊಟ್ಟಿ, ದೋಸೆ, ಪರೋಟ ಎಲ್ಲಾದಕ್ಕೂ ಈ ಸುಕ್ಕೆ ಸಖತ್ ಸೂಟ್ ಆಗತ್ತೆ. ಅಲ್ಲದೇ, ಅನ್ನದ ಜೊತೆಯೂ ಕೂಡ ಕಲಿಸಿ ತಿನ್ನಬಹುದು.
Discussion about this post