ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಮಂಡಕ್ಕಿ, ಹುರಿಯಲು 3 ಸ್ಪೂನ್ ಎಣ್ಣೆ, ಒಂದು ಚಿಕ್ಕ ಸ್ಪೂನ್ ಜೀರಿಗೆ, 10 ಎಸಳು ಕರಿಬೇವು, 10 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ, 3 ಹಸಿಮೆಣಸಿನ ಕಾಯಿ, ಚಿಟಿಕೆ ಅರಿಶಿಣ, ಚಿಟಿಕೆ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸಕ್ಕರೆ ಪುಡಿ.
ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆಹಾಕಿ, ಅದಕ್ಕೆ ಜೀರಿಗೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ ಹಾಕಿ ಹುರಿಯಿರಿ. ಎಲ್ಲ ಚೆನ್ನಾಗಿ ಹುರಿದುಕೊಂಡ ಮೇಲೆ ಅದಕ್ಕೆ ಉಪ್ಪು, ಅರಿಶಿಣ, ಮೆಣಸಿನ ಪುಡಿ, ಪೆಪ್ಪರ್ ಪುಡಿ ಹಾಕಿ ಕೊಂಚ ಹುರಿದು, ಚುರ್ಮುರಿ, ಸಕ್ಕರೆ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಕರಂ ಕುರುಂ ಮಸಾಲೆ ಚುರ್ಮುರಿ ರೆಡಿ. (Spicy puffed rice)
ಈ ಚರ್ಮುರಿಯನ್ನು ನೀವು ಗಾಳಿಯಾಡದಿರೋ ಡಬ್ಬದಲ್ಲಿಟ್ಟು ವಾರಪೂರ್ತಿ ತಿನ್ನಬಹುದು. ಭೇಲ್ಪುರಿ ತಿನ್ನಬೇಕು ಅಂತಾ ಅನ್ನಿಸಿದರೆ, ಇದೇ ಚುರ್ಮುರಿಗೆ ನೀವು, ಸೇವು, ಹೆಚ್ಚಿದ ಈರುಳ್ಳಿ, ಟೊಮೆಟೋ, ಸೌತೇಕಾಯಿ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಸೇರಿಸಿ, ಕೊಂಚ ಸಿಹಿಯಾದ ಹುಣಸೆ ಚಟ್ನಿ, ಪುದೀನಾ ಚಟ್ನಿ ಹಾಕಿ ಮಿಕ್ಸ್ ಮಾಡಿದ್ರೆ, ಭೇಲ್ಪುರಿ ರೆಡಿ. ಅಲ್ಲದೇ, ಪಿಕ್ನಿಕ್ ಅಥವಾ ಟ್ರಿಪ್ಗೆ ಹೋಗ್ಬೇಕಾದ್ರೆ ಇದನ್ನ ಮಾಡ್ಕೊಂಡ್ ಹೋಗಿ ಕೊಟ್ರೆ, ತಿಂದವ್ರು ಫೀದಾ ಆಗೋದ್ರಲ್ಲಿ ನೋ ಡೌಟ್.
Discussion about this post