Beauty Tips: ಇಂದಿನ ಕಾಲದವರಲ್ಲಿ ಕೆಲವರು ಮೇಕಪ್ನಿಂದ ಚೆಂದ ಕಂಡ್ರೆ, ಇನ್ನು ಕೆಲವರು ಆಹಾರ ಸೇವಿಸುವ ರೀತಿಯಿಂದ ಚೆಂದಕಾಣಿಸುತ್ತಾರೆ. ನಾವು ಉತ್ತಮ ಆಹಾರ ಸೇವಿಸುವುದರೊಂದಿಗೆ, ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
- ಹೆಸರುಕಾಳನ್ನು ಪುಡಿ ಮಾಡಿ, ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ಮುಖ ತೊಳೆಯುವಾಗ, ಸೋಪಿನ ಬದಲು ಈ ಪುಡಿಯನ್ನು ಬಳಸಿ. ಇದರಿಂದ ಮುಖ ಸಾಫ್ಟ್ ಆಗಿರುತ್ತದೆ. ಗುಳ್ಳೆ, ಮೊಡವೆ ಕಲೆಗಳಿದ್ದರೆ, ಅದು ಕೂಡ ಮಾಯವಾಗುತ್ತದೆ. ಒಂದು ವಾರಕ್ಕಾಗುವಷ್ಟು ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು.
- ರಾತ್ರಿ ಹೆಸರು ಕಾಳು ನೆನೆಹಾಕಿ, ಮರುದಿನ ಅದನ್ನ ಸ್ಮೂತ್ ಆಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಬೆರೆಸಿ, ಫೇಸ್ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಒಮ್ಮೆ ಈ ಪ್ಯಾಕ್ ಹಾಕಿದ್ರೆ ಸಾಕು. ನೀವು ಜೇನುತುಪ್ಪದ ಬದಲು, ಮೊಸರು ಕೂಡ ಬಳಸಬಹುದು.
- ಇನ್ನು ಪ್ರತಿದಿನ ಮೊಳೆಕಟ್ಟಿದ ಹೆಸರುಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ನಿಮ್ಮ ದೇಹದ ತೂಕ ಕಡಿಮೆಯಾಗತ್ತೆ. ಇನ್ನು ಮೊಳಕೆ ಬರಿಸದೇ, ಹೆಸರು ಕಾಳು ನೆನೆಸಿ ತಿಂದ್ರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ತ್ವಚೆ ಸುಂದರವಾಗತ್ತೆ. ಕೂದಲು ಆರೋಗ್ಯಕರವಾಗಿರತ್ತೆ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಪ್ರತಿದಿನ ಸರಿಯಾಗಿ ಮಲ ಮೂತ್ರ ವಿಸರ್ಜನೆಯಾಗುತ್ತಿದ್ದಲ್ಲಿ, ನೀವು ಆರೋಗ್ಯವಂತರಿದ್ದೀರಿ ಎಂದರ್ಥ. ನಿಮಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆ ಎಂದಲ್ಲಿ, ನೀವು ಉತ್ತಮ ಆರೋಗ್ಯವನ್ನ ಹೊಂದಿದ್ದೀರಿ ಎಂದರ್ಥ.
- ಈ ರೀತಿ ಆರೋಗ್ಯವಾಗಿರಬೇಕು ಅಂದ್ರೆ ಫ್ರೆಶ್ ತರಕಾರಿ, ಹಣ್ಣುಗಳನ್ನ ಸೇವಿಸಿ. ಎಳನೀರನ್ನು ಕುಡಿಯಿರಿ. ಪ್ರತಿದಿನ ಮಿತವಾಗಿ ಡ್ರೈಫ್ರೂಟ್ಸ್ ತಿನ್ನಿ. ಮಾಂಸಾಹಾರಿಗಳು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕೂದಲ ಆರೋಗ್ಯ ಉತ್ತಮವಾಗಿರತ್ತೆ. ಸಸ್ಯಾಹಾರಿಗಳು ಪ್ರೋಟಿನ್ಗಾಗಿ ಸೋಯಾ ಚಂಕ್ಸ್, ಮಶ್ರೂಮ್ ತಿನ್ನಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ನೆನೆಸಿ, ಸಿಪ್ಪೆ ತೆಗೆದ ಬಾದಾಮ್, 1 ಅಂಜೂರವನ್ನ ತಿನ್ನಿ. ನೆನೆಸಿಟ್ಟ ಅಂಜೂರ ಮತ್ತು ಬಾದಾಮ್ ನಿಮ್ಮ ಕೂದಲ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಇನ್ನು ನೀವು ಮಲಗುವಾಗ ಬಳಸುವ ದಿಂಬು ಸ್ವಚ್ಛವಾಗಿರಲಿ. ಬಳಸುವ ಬೆಡ್ಶೀಟ್, ಸ್ವಚ್ಛವಾಗಿರಲಿ. ಹೀಗಿದ್ದಾಗ ಮಾತ್ರ, ನಿಮ್ಮ ಕೂದಲು ಹೆಚ್ಚು ಉದುರುವುದಿಲ್ಲ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ಊಟ ಮಾಡಿ ಒಂದು ಗಂಟೆ ಬಳಿಕ ನಿದ್ದೆ ಮಾಡಬೇಕು. ಮತ್ತು ನಿದ್ದೆ ಮಾಡುವ ಒಂದು ಗಂಟೆ ಮುನ್ನ ಮೊಬೈಲ್, ಲ್ಯಾಪ್ಟಾಪ್ ಬಳಸುವುದನ್ನ ನಿಲ್ಲಿಸಿ. ಅದರ ಬದಲು ಪುಸ್ತಕ ಓದಿ.
- ಗುಟ್ಕಾ ಪಾನ್ ಸೇವಿಸುವುದು, ಮದ್ಯಪಾನ, ಧೂಮಪಾನ ಮಾಡುವ ಚಟ ಇದ್ದಲ್ಲಿ ಅದನ್ನ ಬಿಟ್ಟುಬಿಡಿ. ವಾರಕ್ಕೆರಡು ಬಾರಿ ಕೆಮಿಕಲ್ ಮುಕ್ತವಾದ ಎಣ್ಣೆಯಿಂದ ಚೆನ್ನಾಗಿ ಹೆಡ್ ಮಸಾಜ್ ಮಾಡಿಕೊಳ್ಳಿ. ಉತ್ತಮ ಶ್ಯಾಂಪೂವಿನಿಂದ ಹೇರ್ ವಾಶ್ ಮಾಡಿ. ಕೂದಲಿಗೆ ಹೇರ್ ಡ್ರೈಯರ್, ಹೇರ್ ಸ್ಟ್ರೇಟ್ನರ್ ಹೆಚ್ಚು ಬಳಸಬೇಡಿ..
ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..
Discussion about this post