Health Tips: ನೀವು ಯಾರಾದರೂ ಹೇಳುವುದನ್ನು ಕೇಳಿರುತ್ತೀರಿ. ತೂಕ ಇಳಿಸಬೇಕು ಅಂದ್ರೆ ಹೆಸರು ಮೊಳಕೆ ಕಾಳು ತಿನ್ನು ಅಂತ. ಅದೇ ರೀತಿ ದಪ್ಪಗಾಗಬೇಕು ಅಂದ್ರೂ ಹೆಸರು ಕಾಳು ತಿನ್ನು ಅಂತ. ಹಾಗಾದ್ರೆ ಮೊಳಕೆ ಕಾಳು ಹೇಗೆ ತಿಂದ್ರೆ, ತೂಕ ಇಳಿಯುತ್ತದೆ ಮತ್ತು ಹೆಚ್ಚುತ್ತದೆ. ಮೊಳಕೆ ಕಾಳಿನ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ಎಂತೆಂಥ ಅತ್ಯದ್ಭುತ ಬದಲಾವಣೆಯಾಗತ್ತೆ ಅಂತಾ ನಾವಿವತ್ತು ನಿಮಗೆ ಹೇಳಲಿದ್ದೇವೆ.
ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ?
- ಹೆಸರು ಕಾಳಿನ ಸೇವನೆಯನ್ನು ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊಂಚ ಕೊಂಚವೇ ತಿಂದರೆ, ಬರೀ ಒಂದು ತಿಂಗಳಲ್ಲೇ ಆಶ್ಚರ್ಯಕರವಾದ ಬದಲಾವಣೆ ಕಾಣುತ್ತೀರಿ. ನನ್ನ ಕೂದಲು ತುಂಬಾ ಉದುರುತ್ತಿದೆ. ಏನು ಬಳಸಿದರೂ, ಏನು ಮನೆ ಮದ್ದು ಮಾಡಿದರೂ ಕಂಟ್ರೋಲಿಗೆ ಬರುತ್ತಿಲ್ಲ ಅಂತಾ ನಿಮಗೆ ಅನ್ನಿಸಿದರೆ, ನೀವು ಒಂದು ತಿಂಗಳು ಬೆಳಿಗ್ಗೆ ನೆನೆಸಿಟ್ಟ ಹೆಸರು ಕಾಳನ್ನು ಖಾಲಿ ಹೊಟ್ಟೆಯಲ್ಲಿ ತಿಂದು ನೋಡಿ. ಮೊಳಕೆ ಬರಿಸಿದ ಹೆಸರು ಕಾಳಿನ ಸೇವನೆಯೂ ಉತ್ತಮ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಕೂದಲು ಉದುರುವುದು ನಿಲ್ಲುತ್ತದೆ. ಕೂದಲ ಧೃಡತೆ ಹೆಚ್ಚುತ್ತದೆ. ಕೂದಲು ಬೇಗ ಬಿಳಿಯಾಗುವುದಿಲ್ಲ. ಅಲ್ಲದೇ ನೀವು ಸದಾ ಯಂಗ್ ಆಗಿ ಕಾಣ್ತೀರಿ.
- ನಿಮಗೇನಾದ್ರೂ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಎಷ್ಟು ತಿಂದರೂ ಹೊಟ್ಟೆ ತುಂಬುತ್ತಿಲ್ಲ. ಅಥವಾ ಏನೇ ತಿಂದರೂ, ಹೆಚ್ಚು ತಿನ್ನಲು ಇಷ್ಟವಾಗುವುದಿಲ್ಲ. ಬಾಯಿ ರುಚಿ ಇಲ್ಲ ಎನ್ನುವವರು ಹೆಸರು ಕಾಳಿನ ಸಲಾಡ್ ಮಾಡಿ ತಿನ್ನಿ. ಇದರಿಂದ ನಿಮಗೆ ಹಸಿವು ಹೆಚ್ಚಾಗುತ್ತದೆ. ತಿನ್ನ ಅನ್ನ ಸರಿಯಾಗಿ ಜೀರ್ಣವಾಗುತ್ತದೆ. ಅಲ್ಲದೇ. ಹೊಟ್ಟೆಯೂ ಸರಿಯಾಗಿ ಕ್ಲೀನ್ ಆಗುತ್ತದೆ. ಯಾಕಂದ್ರೆ ಹೆಸರು ಕಾಳಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಇದು ರಾಮಬಾಣ ಎಂದು ಹೇಳಲಾಗಿದೆ.
ಪತಿಗೆ ಟಾಟಾ ಬೈಬೈ ಹೇಳಿ ಸೊಸೆಯನ್ನೇ ವಿವಾಹವಾದ ಅತ್ತೆ: 3 ವರ್ಷದ ಲವ್ ಎಂದ ಜೋಡಿ
- ಇನ್ನು ನೀವು ತೂಕ ಹೆಚ್ಚಿಸಿಕೊಳ್ಳಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಹೆಸರು ಕಾಳನ್ನು ಸೇವಿಸಿ. ನಿಮ್ಮ ದೇಹದ ತೂಕ ಆರೋಗ್ಯಕರವಾಗಿ ಹೆಚ್ಚಿಸಿಕೊಳ್ಳಲು ಇದು ಅನುಕೂಲಕರವಾಗಿರುತ್ತದೆ. ಮತ್ತು ನಿಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು ಅಂದ್ರೆ, ಮೊಳಕೆ ಬರಿಸಿದ ಹೆಸರು ಕಾಳು ಸೇವಿಸಿ. ಜೊತೆಗೆ ವ್ಯಾಯಾಮ, ವಾಕಿಂಗ್ ಇರಲಿ. ಆಗ ನಿಮ್ಮ ದೇಹದ ತೂಕ ಇಳಿಯುತ್ತದೆ. ನಿಮ್ಮ ಮನೆಯಲ್ಲಿ ಎರಡು ವರ್ಷಕ್ಕಿಂತ ಮೇಲ್ಪಟ್ಟ, ಹಲ್ಲಿನಿಂದ ಅಗಿಯುವಷ್ಟು ದೊಡ್ಡವರಿರುವ ಮಕ್ಕಳ ದೇಹದ ತೂಕ ಕಡಿಮೆ ಇದ್ದಲ್ಲಿ, ಆ ಮಗುವಿಗೆ ನೀವು ನೆನೆಸಿಟ್ಟ ಹೆಸರು ಕಾಳು ಕೊಡಿ. ಆಗ ಮಗುವಿನ ದೇಹದ ತೂಕ ಹೆಚ್ಚಾಗುತ್ತದೆ.
- ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದೆ. ನಿಮ್ಮ ಮೂಳೆಗಳ ಆರೋಗ್ಯ ಹಾಳಾಗುತ್ತಿದೆ. ಹಲ್ಲಿನ ಆರೋಗ್ಯ ಕ್ಷೀಣಿಸುತ್ತಿದೆ ಅಂತಾ ನಿಮಗೆ ಅನ್ನಿಸಿದಾಗ, ನೀವು ಪ್ರತಿದಿನ ನೆನೆಸಿಟ್ಟ ಹೆಸರು ಕಾಳಿನ ಸೇವನೆ ಮಾಡಲೇಬೇಕು. ಇದರಿಂದ ನಿಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಕ್ಕಿ, ನಿಮ್ಮ ಮೂಳೆ ಗಟ್ಟಿಗೊಳ್ಳುತ್ತದೆ. ಮೂಳೆಗೆ ಶಕ್ತಿ ಸಿಗುತ್ತದೆ. ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಪದೇ ಪದೇ ಕೈ ಕಾಲು ನೋವು ಬರುವುದಿಲ್ಲ. ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಕೆಲಸ ಮಾಡಲು ಚೈತನ್ಯ ಬರುತ್ತದೆ.
- ನೀವು ನೋಡಲು ಚೆಂದಗಾಣಿಸಬೇಕು, ಡಲ್ ಆಗಿರುವ ನಿಮ್ಮ ಸ್ಕಿನ್ ಕಲರ್ ಲೈಟ್ ಆಗಬೇಕು ಅನ್ನೋ ಆಸೆ ಇದ್ದರೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಹೆಸರು ಕಾಳನ್ನು ಸೇವಿಸಲೇಬೇಕು. ಆಗ ನಿಮ್ಮ ಮುಖದ ಸೌಂದರ್ಯ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ, ನಿಮ್ಮನ್ನು ನೋಡಿದವರು, ಇತ್ತೀಚಿಗೆ ಮುಖದಲ್ಲಿ ಗ್ಲೋ ಬರುತ್ತಿದೆ. ಏನು ರೆಮಿಡಿ ಮಾಡ್ತಾ ಇದ್ದಿ ಅಂತಾ ಕೇಳುವಷ್ಟು ನೀವು ಚೆಂದಗಾಣಿಸುತ್ತೀರಿ.
- ಇದರ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಬ್ಬು ಕರಗುತ್ತದೆ. ಆಗ ರಕ್ತನಾಳದಲ್ಲಿ ರಕ್ತದ ಸಂಚಾರ ಉತ್ತಮವಾಗುತ್ತದೆ. ಹೀಗಾದಾಗ, ನಿಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಸಹಕಾರಿಯಾಗಿದೆ.
ಮಧ್ಯರಾತ್ರಿ ತಂತಾನೆ ಓಪನ್ ಆದ ಆಫೀಸು ಬಾಗಿಲು.. ಆಮೇಲಾಗಿದ್ದೇನು..?: Video Viral
- ಇನ್ನು ಗರ್ಭಿಣಿಯಾಗಿದ್ದಾಗ, ಮೊಳಕೆ ಬಾರದ ಹೆಸರು ಕಾಳಿನ ಸೇವನೆ ಮಾಡಬೇಕು. ಕೆಲವರಿಗೆ ಮೊಳಕೆ ಕಾಳಿನ ಸೇವನೆ ವಿಷದಂತೆ ಪರಿಣಮಿಸುತ್ತದೆ. ಹಾಗಾಗಿ ಗರ್ಭಿಣಿಯರು ಪ್ರತಿದಿನ ನೆನೆಸಿಟ್ಟ ಹೆಸರು ಕಾಳಿನ ಸೇವನೆ ಮಾಡಬೇಕು. ಆಗ ಹುಟ್ಟುವ ಮಗು ಆರೋಗ್ಯವಾಗಿ, ಗಟ್ಟಿಮುಟ್ಟಾಗಿ, ಮುದ್ದು ಮುದ್ದಾಗಿ ಹುಟ್ಟುತ್ತದೆ. ಜೊತೆಗೆ ತಾಯಿಯ ಆರೋಗ್ಯವೂ ಚೆನ್ನಾಗಿರುತ್ತದೆ.
- ನೀವು ಮಾಂಸಾಹಾರ ಸೇವನೆ ಮಾಡದಿರುವವರಾಗಿದ್ದರೆ, ಬರೀ ವೆಜ್ ಆಹಾರ ಸೇವಿಸಿ, ನಿಮ್ಮ ಬಾಡಿ ಬಿಲ್ಡ್ ಮಾಡಬೇಕು. ದೇಹಕ್ಕೆ ಬೇಕಾದ ಪ್ರೋಟೀನ್ ಪಡೆಯಬೇಕು ಅಂದ್ರೆ, ನೀವು ನೆನೆಸಿಟ್ಟ ಹೆಸರು ಕಾಳಿನ ಸೇವನೆ ಮಾಡಿ. ನಾನ್‌ವೆಜ್ ತಿನ್ನುವವರು ಕೋಳಿ, ಕುರಿ, ಮೊಟ್ಟೆ ತಿನ್ನುತ್ತಾರೆ. ಆದರೆ ಸಸ್ಯಹಾರಿಗಳು, ಇದನ್ಯಾವುದೂ ತಿನ್ನದೇ, ಪ್ರತಿದಿನ ನೆನೆಸಿಟ್ಟ ಹೆಸರು ಕಾಳಿನ ಸೇವನೆ ಮಾಡಿದ್ರೆ ಸಾಕು. ನಿಮ್ಮ ದೇಹಕ್ಕೆ ಬೇಕಾಗಿರುವ ಎಲ್ಲ ಪ್ರೋಟೀನ್ ಸಿಗುತ್ತದೆ.
ಟೀ ಟೈಮ್‌ನಲ್ಲಿ ಸುಲಭವಾಗಿ ತಯಾರಿಸಬಹುದಾದ ನಾರ್ತ್ ಸ್ಟೈಲ್ ಆಲೂ ಬೋಂಡಾ ರೆಸಿಪಿ
- ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮುಖದ ಮೇಲೆ ಮೊಡವೆ, ಹೊಟ್ಟೆ ಉರಿ ಆಗುತ್ತಿದ್ದರೆ, ನೀವು ನೆನೆಸಿದ ಹೆಸರು ಕಾಳಿನ ಸೇವನೆ ಮಾಡಬಹುದು. ಅಥವಾ ಹೆಸರು ಕಾಳನ್ನು ಬೇಯಿಸಿ, ಅದರ ನೀರಿಗೆ ಬೆಲ್ಲ ಸೇರಿಸಿ, ಕುಡಿಯಬಹುದು. ಇದರಿಂದ ದೇಹದಲ್ಲಿ ಉಷ್ಣತೆ ಕಡಿಮೆಯಾಗುವುದಲ್ಲದೇ, ಶಕ್ತಿ ಬರುತ್ತದೆ.

- ಇನ್ನು ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲೇ ನೀವು ನೆನೆಸಿದ ಹೆಸರು ಕಾಳು ತಿನ್ನುವುದು ಅತೀ ಉತ್ತಮ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಸಾಧ್ಯವಾಗದಿದ್ದಲ್ಲಿ, ತಿಂಡಿಯ ಜೊತೆ. ಊಟಕ್ಕೂ ಒಂದು ಗಂಟೆ ಮುನ್ನ ನೀವು ನೆನೆಸಿದ ಹೆಸರು ಕಾಳಿನ ಸೇವನೆ ಮಾಡಬಹುದು. ಬರೀ ನೆನೆಸಿದ ಹೆಸರು ಕಾಳು ಸೇವಿಸಲು ಇಷ್ಟವಿಲ್ಲದಿದ್ದಲ್ಲಿ, ಒಂದು ಬೌಲ್‌ಗೆ ಹೆಸರು ಕಾಳು, ಹಸಿ ಸ್ವೀಟ್ ಕಾರ್ನ್, ತುರಿದ ಕ್ಯಾರೆಟ್, ತುರಿದ ಕೊಬ್ಬರಿ, ಸೌತೇಕಾಯಿ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸಲಾಡ್ ರೀತಿ ಮಾಡಿ ಸೇವಿಸಿ. ಬೇಕಾದ್ರೆ, ದಾಳಿಂಬೆನೂ ಸೇರಿಸಿ. ಇದು ತಿನ್ನಲೂ ರುಚಿಕರವಾಗಿದ್ದು, ಆರೋಗ್ಯಕ್ಕೂ ಅತ್ಯುತ್ತಮವಾಗಿರುತ್ತದೆ. ಮುಖ್ಯವಾದ ವಿಷಯ ಅಂದ್ರೆ ನೀವು ಸೂರ್ಯ ಮುಳುಗುವ ಮುನ್ನವೇ ನೆನೆಸಿದ ಹೆಸರು ಕಾಳು ಸೇವನೆ ಮಾಡಿದರೆ, ಅದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಸಣ್ಣ ಆಗ್ತಾರಾ..? ಇಲ್ಲಿದೆ ನೋಡಿ ಸರಿಯಾದ ಉತ್ತರ.
- ಇವೆಲ್ಲವೂ ಹೆಸರು ಕಾಳಿನ ಸೇವನೆಯಿಂದ ಆಗುವ ಆರೋಗ್ಯ ಲಾಭಗಳಾದರೆ, ನೀವು ಹೆಸರು ಕಾಳನ್ನು ನೆನೆಸಿ ತಿನ್ನುವುದಲ್ಲದೇ, ಅದರಿಂದ ರುಚಿ ರುಚಿಯಾದ ತಿಂಡಿಯನ್ನೂ ಮಾಡಬಹುದು. ಸಿಹಿ ಇಷ್ಟ ಇರುವವರು, ವಾರಕ್ಕೊಮ್ಮೆ ಇದರ ಪಾಯಸ ಮಾಡಿ ತಿನ್ನಬಹುದು. ಹೆಸರು ಕಾಳನ್ನು ನೆನೆಸಿ, ಬೇಯಿಸಿ, ಬಳಿಕ ಅದಕ್ಕೆ ಅರೆದ ತೆಂಗಿನ ತುರಿ, ಬೆಲ್ಲ, ಏಲಕ್ಕಿ ಸೇರಿಸಿ, ಕುದಿಸಿದರೆ, ಪಾಯಸ ರೆಡಿ. ಇದರ ಸೇವನೆಯಿಂದ ದೇಹದಲ್ಲಿನ ಉಷ್ಣತೆ ಮಾಯವಾಗುತ್ತದೆ. ಇದು ತಿನ್ನಲೂ ರುಚಿ, ಆರೋಗ್ಯಕ್ಕೂ ಉತ್ತಮ. ಆದರೆ ನೀವು ಈ ರೆಸಿಪಿ ಮಾಡುವಾಗ ಸಕ್ಕರೆ ಬಳಸಬಾರದು ಅಷ್ಟೇ.
ಮಕ್ಕಳ ಟಿಫಿನ್ ಬಾಕ್ಸ್‌ಗೆ ಹೆಸರು ಕಾಳಿನ ರೆಸಿಪಿ
- ಇನ್ನು ಸಂಜೆ ಹೊತ್ತಲ್ಲಿ, ಕರಿದ, ಹುರಿದ ಪದಾರ್ಥಗಳನ್ನು ಮಾಡಿ ತಿನ್ನುವ ಬದಲು, ಹೆಸರು ಕಾಳನ್ನು ನೆನೆಸಿ, ಬೇಯಿಸಿ, ಅದಕ್ಕೆ ಬೆಲ್ಲ, ಹಸಿಮೆಣಸು, ಉಪ್ಪು, ಕೊಂಚ ಹುಳಿ, ಹಾಕಿ ಬೇಯಿಸಿ, ಉಸುಳಿಯ ರೀತಿ ಮಾಡಿ ತಿನ್ನಬಹುದು. ಜೊತೆಗೆ ಕೊಂಚ ಹುರಿಯಕ್ಕಿ, ಅಂದ್ರೆ ಚುರ್‌ಮುರಿ, ಹಸಿ ಈರುಳ್ಳಿ, ಕೊತ್ತೊಂಬರಿ ಸೊಪ್ಪು ಕೂಡ ಬೆರೆಸಿದ್ರೆ ಆರೋಗ್ಯಕರ ಚಾಟ್ ರೆಡಿಯಾಗತ್ತೆ.
- ಪಲಾವ್ ಮಾಡುವಾಗ, ಸಾರು, ಸಾಂಬಾರ್ ಮಾಡುವಾಗ ನೆನೆಸಿಟ್ಟ ಹೆಸರು ಕಾಳನ್ನುಸೇರಿಸಿದ್ರೆ, ಸಾಂಬಾರ್ ಟೇಸ್ಟಿಯಾಗಿಯೂ, ಹೆಲ್ದಿಯೂ ಇರುತ್ತದೆ.
- ನಿಮ್ಮ ಮಕ್ಕಳು ನೆನೆಸಿದ ಹೆಸರು ಕಾಳಿನ ಸೇವನೆ ಮಾಡಲು ಹಿಂಜರಿಯುತ್ತಾರೆ ಅಂದ್ರೆ, ನೀವು, ಚಪಾತಿ, ರೊಟ್ಟಿಯ ಮೇಲೆ ತುಪ್ಪ ಸವರಿ, ಅದರಲ್ಲಿ ಹೆಸರು ಕಾಳಿನ ಪಲ್ಯ, ಹಸಿ ತರಕಾರಿ ಹಾಕಿ, ರೋಲ್ ರೀತಿ ಮಾಡಿ, ಟಿಫನ್‌ಗೆ ತುಂಬಿಸಿ ಕೊಡಿ.
- ಹೆಸರು ಕಾಳನ್ನು ನೆನೆಸಿ, ಮಿಕ್ಸಿಜಾರ್ಗೆ ಹಾಕಿ, ಕೊಂಚ ಕೊಬ್ಬರಿ ತುರಿ, ಹಸಿಮೆಣಸು, ಉಪ್ಪು ಹಾಾಕಿ, ರುಬ್ಬಿ, ದೋಸೆ ಹಿಟ್ಟು ರೆಡಿ ಮಾಡಿ, ದೋಸೆ ರೆಡಿ ಮಾಡಿದ್ರೆ, ಪೆಸರೊಟ್ಟು ರೆಡಿ. ಇದರ ಜೊತೆ ಕಾಯಿ ಚಟ್ನಿ ಮಾಡಿಕೊಡಿ.
- ಚಪಾತಿ ಮಾಡುವಾಗ ಆ ಹಿಟ್ಟಿಗೆ ಪಾಲಕ್, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಜೀರಿಗೆ ಸೇರಿಸಿ ಮಾಡಿದ ಪೇಸ್ಟ್ ಸೇರಿಸಿ. ಈಗ ಹಿಟ್ಟು ನಾದಿ. ಅದರಲ್ಲಿ ಹೂರಣವಾಗಿ ಹಾಕಲು, ನೆನೆಸಿ, ಮೊಳಕೆ ಬರಿಸಿದ ಹೆಸರು ಕಾಳಿನ ಉಸುಳಿ ತಯಾರಿಸಿ. ಬಳಿಕ ಚಪಾತಿ ಉಂಡೆ ಮಾಡಿ, ಅದರಲ್ಲಿ ಹೆಸರು ಕಾಳಿನ ಉಸುಳಿ ತುಂಬಿಸಿ, ಪರೋಠಾ ಮಾಡಿ ಕೊಡಿ. ಇದರೊಂದಿಗೆ ಮೊಸರು ಉತ್ತಮ ಕಾಂಬಿನೇಷನ್.
- ನೆನೆಸಿದ ಹೆಸರು ಕಾಳಿಗೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಉಪ್ಪು ಹಾಾಕಿ ಮಿಕ್ಸಿಗೆ ಹಾಕಿ ರುಬ್ಬಿ, ಇದೀಗ ಪಡ್ಡು ಮಾಡುವ ಹಿಟ್ಟು ರೆಡಿ. ಈಈ ಹಿಟ್ಟಿನಿಂದ ಪಡ್ಡು ತಯಾರಿಸಿ, ಮಕ್ಕಳ ಬಾಕ್ಸ್‌ಗೆ ಹಾಕಿ ಕೊಡಬಹುದು.
ಇನ್ನು ಕೊನೆಯದಾಗಿ ನೀವು ಹೆಸರು ಕಾಳು ಬೇಯಿಸಿದ ಬಳಿಕ, ಅದರ ನೀರು ಬಿಸಾಕುವ ಬದಲು, ಆ ನೀರಿಗೆ ಹಸಿಮೆಣಸು, ಸಾಸಿವೆ, ಜೀರಿಗೆ, ಕರಿಬೇವು, ಹಿಂಗು ಹಾಕಿ ಒಗ್ಗರಣೆ ಕೊಟ್ಟರೆ ತಿಳಿಸಾರು ರೆಡಿ. ನೀವು ಹೆಸರು ಬೇಯಿಸುವಾಗ, ಉಪ್ಪು ಹಾಕದಿದ್ದಲ್ಲಿ, ಬೇಯಿಸಿದ ನೀರಿಗೆ ಬೆಲ್ಲ ಹಾಕಿ ಕುದಿಸಿದರೆ, ಹೆಸರು ಕಾಳಿನ ಜ್ಯೂಸ್ ರೆಡಿ.
Discussion about this post