Political News: ಗಡಿಯಲ್ಲಿ ಪಾಕ್ ಮತ್ತು ಭಾರತ ಕಾದಾಡುತ್ತಿದ್ದು, ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ಕೂಡ ಪ್ರತ್ಯುತ್ತರ ನೀಡುತ್ತಿದೆ. ಈಗಾಗಲೇ ಕ್ಷಿಪಣಿ ದಾಳಿ ನಡೆಸಿ, ಆಪರೇಷನ್ ಸಿಂಧೂರ್ ಯಶಸ್ವಿಯಾಗಿಸಿದ್ದು, ಪಾಕ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮುಂದುವರಿಸಿದೆ. ಇನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಕಾರ್ಯಿರ್ವಹಿಸುತ್ತಿರುವ ಡ್ರೋನ್‌ಗಳು ತಯಾರಾಗಿದ್ದು ಬೆಂಗಳೂರಿನಲ್ಲಿ. ಈ ಬಗ್ಗೆ Tweet ಮಾಡಿ ಮಾಹಿತಿ ಹಂಚಿಕ“ಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ನಾವೆಲ್ಲ ಹೆಮ್ಮೆ ಪಡುವ ಸಂಗತಿ ಎಂದಿದ್ದಾರೆ.
ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗೂಡುಗಳ ಆಳಕ್ಕೆ ನುಗ್ಗಿ ರಕ್ಕಸರ ಹುಟ್ಟಡಗಿಸುತ್ತಿರುವ ಆತ್ಮಾಹುತಿ ಡ್ರೋನ್ ಗಳು (SkyStriker suicide drones) ಬೆಂಗಳೂರಿನಲ್ಲಿ ನಿರ್ಮಾಣಗೊಂಡಿವೆ. ಇದು ನಿಜಕ್ಕೂ ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ.
ಹೆಮ್ಮೆಯ ಪ್ರಧಾನಿ ಶ್ರೀ @narendramodiಜೀ ಅವರ ಸರ್ಕಾರದ ದೂರದೃಷ್ಟಿ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಮೇಕ್ ಇನ್ ಇಂಡಿಯಾ ಭಾಗವಾಗಿ ಈ ಅತ್ಯಾಧುನಿಕ ತಂತ್ರಜ್ಞಾನದ, ಸ್ವಯಂ ಚಾಲಿತ ಡ್ರೋನ್ ಗಳು ರೂಪುಗೊಂಡಿದ್ದು, ಈ ಹೊತ್ತು ಪರಿಣಾಮಕಾರಿಯಾಗಿ ಬಳಕೆಗೆ ಬಂದಿವೆ. ಭಾರತದ ಮಿಲಿಟರಿ ಶಕ್ತಿಯ ಜಂಘಾಬಲ ಹೆಚ್ಚಿಸಿ ಭಯೋತ್ಪಾದಕ ರಕ್ಕಸರು ಶತ್ರು ರಾಷ್ಟ್ರದ ಯಾವುದೇ ಮೂಲೆ, ಎಷ್ಟೇ ಆಳದಲ್ಲಿ ಅವಿತು ಕುಳಿತಿದ್ದರೂ, ಹುಡುಕಿಕೊಂಡು ಹೋಗಿ ನುಗ್ಗಿ ಸದೆಬಡಿಯುತ್ತಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
"ಪಾಕ್ ಭಯೋತ್ಪಾದಕರ ಹುಟ್ಟಡಗಿಸುತ್ತಿವೆ ಬೆಂಗಳೂರು ಡ್ರೋನ್ ಗಳು"
ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್" ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗೂಡುಗಳ ಆಳಕ್ಕೆ ನುಗ್ಗಿ ರಕ್ಕಸರ ಹುಟ್ಟಡಗಿಸುತ್ತಿರುವ ಆತ್ಮಾಹುತಿ ಡ್ರೋನ್ ಗಳು (SkyStriker suicide drones) ಬೆಂಗಳೂರಿನಲ್ಲಿ ನಿರ್ಮಾಣಗೊಂಡಿವೆ. ಇದು ನಿಜಕ್ಕೂ… pic.twitter.com/5iWHJ7yCU2
— Vijayendra Yediyurappa (@BYVijayendra) May 8, 2025
























Discussion about this post