Recipe: ಬೇಕಾಗುವ ಸಾಮಗ್ರಿ: ಸ್ವಲ್ಪ ತ“ಗರಿ ಬೇಳೆ, 10ರಿಂದ 15 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಜೀರಿಗೆ, ಕಾಳುಮೆಣಸು, ಸಾಸಿವೆ, 3 ಸ್ಪೂನ್ ತೆಂಗಿನ ಎಣ್ಣೆ ಅಥವಾ ತುಪ್ಪ, ಸ್ವಲ್ಪ ಹಿಂಗು, 2 ಒಣಮೆಣಸು, ಕರಿಬೇವು, 2 ಹಸಿಮೆಣಸು, 2 ಟೋಮೆಟೋ, 1 ಸಣ್ಣ ಕಪ್ ಹುಣಸೆ ರಸ, ಅರಿಶಿನ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಬೇಳೆ ಬೇಯಿಸಿ. ಬೆಳ್ಳುಳ್ಳಿ, ಪೆಪ್ಪರ್, ಜೀರಿಗೆಯನ್ನು ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು, ಕರಿಬೇವು, ಒಣಮೆಣಸು, ಹಿಂಗು ಹಾಕಿ ಹುರಿಯಿರಿ. ಬಳಿಕ ಟೋಮೆಟೋ ಹಾಕಿ ಹುರಿಯಿರಿ.
ಬಳಿಕ ಅರಿಶಿನ, ಹುಣಸೆ ರಸ, ಉಪ್ಪು, ಬೆಲ್ಲ ಹಾಕಿ ಮಿಕ್ಸ್ ಮಾಡಿ. ನಂತರ ಕುಟ್ಟಿ ಪುಡಿ ಮಾಡಿದ ಬೆಳ್ಳುಳ್ಳಿ-ಪೆಪ್ಪರ್- ಜೀರಿಗೆ ಹಾಕಿ ಮಿಕ್ಸ್ ಮಾಡಿ. ನಂತರ ಬೇಕಾದಷ್ಟು ನೀರು, ಬೇಯಿಸಿದ ಬೇಳೆ ಹಾಕಿ ಕುದಿ ಬರಿಸಿ, ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಹಾಕಿದ್ರೆ, ರಸಂ ರೆಡಿ.
Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ
Discussion about this post