Scam Alert: ಎಚ್ಚರಿಕೆ ಸಂದೇಶ: ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ ಬಂದಾಗ, ಆ ಲಿಂಕ್ ಕ್ಲಿಕ್ಕಿಸಬೇಡಿ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಯಾವುದೋ ಕ್ಷಣದಲ್ಲಿ ಹಲವರಿಗೆ ಲಿಂಕ್ ಕ್ಲಿಕ್ ಮಾಡುವ ತಪ್ಪಾಗುತ್ತದೆ. ಬಳಿಕ ಫೋನ್ ಹ್ಯಾಕ್ ಆಗುವುದು, ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗೋದು ಹೀಗೆ ಹಲವು ಎಡವಟ್ಟುಗಳಾಗುತ್ತದೆ.
ಇದೇ ರೀತಿ ಸ್ಕ್ಯಾಮ್ ಶುರುವಾಗಿದ್ದು, ಚಲಾನ್ ಅಪ್ಡೇಟ್ ನೋಟೀಸ್ ಕಳಿಸುವ ನೆಪದಲ್ಲಿ ಲಿಂಕ್ ಕಳಿಸುತ್ತಾರೆ. ಆ ಲಿಂಕ್ ನೀವು ಕ್ಲಿಕ್ ಮಾಡಿದಲ್ಲಿ, ಫೋನ್ ಹ್ಯಾಕ್ ಮಾಡಿ, ಆ ಮೆಸೇಜ್‌ನ್ನು ನಿಮ್ಮ ಕಾಂಟಾಕ್ಟ್‌ನಲ್ಲಿರುವ ಎಲ್ಲರಿಗೂ ಕಳುಹಿಸುತ್ತಾರೆ.
ನಿಮ್ಮ ನಂಬರ್‌ನಿಂದ ಮೆಸೇಜ್ ಬಂತೆಂದು ನಿಮ್ಮ ಮೇಲೆ ನಂಬಿಕೆ ಇಟ್ಟವರು ಆ ಲಿಂಕ್ ಕ್ಲಿಕ್ಕಿಸಬಹುದು. ಬಳಿಕ ಅವರ ಫೋನ್ ಕೂಡ ಹ್ಯಾಕ್ ಆಗುತ್ತದೆ. ಅದರಲ್ಲೂ ಐಫೋನ್‌ಗಿಂತ, ಆ್ಯಂಡ್ರೋಯ್ಡ್ ಫೋನ್ ಬಳಸುವವರು ತುಂಬಾ ಎಚ್ಚರಿಕೆಯಿಂದ ಇರಬೇಕು.























Discussion about this post