ಚಿಕ್ಕಮಗಳೂರು: ತೀವ್ರ ಪೈಪೋಟಿ ನಡುವೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದ್ದು ಇದೊಂದು ಸಂಘಟಿತ ಪ್ರಯತ್ನದ ಗೆಲುವು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ರಾಜ್ಯಾದ್ಯಂತ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಮತದಾರ ಪ್ರಭುಗಳ ಆಯ್ಕೆ ಅಂತಿಮ ತೀರ್ಪು ಅದರಂತೆ ಬಿಜೆಪಿ ೧೨ ಸ್ಥಾನಗಲ್ಲಿ ಗೆಲುವು ಪಡೆದಿದೆ. ಈ ಗೆಲುವು ಸ್ವಾಗತಾರ್ಹ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ೬ ಸ್ಥಾನಗಳನ್ನು ಪಡೆದಿದ್ದು ಈ ಬಾರಿ ೧೨ ಸ್ಥಾನಗಳನ್ನು ಪಡೆದಿದ್ದು ವಿಧಾನ ಪರಿಷತ್ ಹಾಗೂ ವಿಧಾನ ಸಭೆಯಲ್ಲಿ ಬಹುಮತದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದರು.
ಇದೊಂದು ನೇರಚುನಾವಣೆ ಅಲ್ಲದಿದ್ದರೂ ಜನಾಭಿಪ್ರಾಯವನ್ನು ಸ್ವೀಕರಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. ಯಾವುದೇ ಚುನಾವಣೆಯಲ್ಲಿ ಒಂದು ಮತಗಳ ಅಂತರದಲ್ಲಿ ಗೆದ್ದರು ಅದು ಗೆಲುವೇ ಅಥವಾ ಸಾವಿರ ಮತಗಳ ಅಂತರದಿಂದ ಗೆದ್ದರೂ ಅದು ಗೆಲುವೇ ಆ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾಹ ಎಂದರು.
A concerted effort win for bjp























Discussion about this post