ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಆಟೋ ಚಾಲಕರು ಪ್ರಯಾಣ ದರವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದು, ಪ್ರಯಾಣ ದರವನ್ನುಶೇ. 20ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಇಂಧನ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಟೋ ಚಾಲಕರು ಸರ್ಕಾರವನ್ನು ಒತ್ತಾಯಿಸಿದ್ದು, ಇದಕ್ಕೆ ಸ್ಪಂದಿಸಿರುವ ಸಾರಿಗೆ ಇಲಾಖೆ ಆಟೋ ಚಾಲಕರ ಒಕ್ಕೂಟಗಳ ಜೊತೆಗೆ ಸಭೆ ನಡೆಸಿದ್ದು, ಬಳಿಕ ಇಲಾಖೆಯು ದರ ಹೆಚ್ಚಳ ಪ್ರಸ್ತಾವವನ್ನು ಪರಿಷ್ಕರಿಸಿದೆ.
ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಲ್ಲಿ, ಆಟೋ ಪ್ರಯಾಣದ ಕನಿಷ್ಠ ದರ 25 ರೂ. ನಿಂದ 30 ರೂ.ಗೆ ಹೆಚ್ಚಳವಾಗಲಿದೆ. ಪ್ರತಿ ಕಿಲೋಮೀಟರ್‌ಗೆ ಈಗಿರುವ 13 ರೂ. ಬದಲಾಗಿ 16 ರೂ. ಆಗಲಿದೆ. ಹಾಗೆಯೇ ಕನಿಷ್ಠ ದರದಲ್ಲಿ ಪ್ರಯಾಣಿಸಬಹುದಾದ ದೂರವನ್ನು 1.8 ಕಿಲೋಮೀಟರ್‌ಗೆ ಬದಲಾಗಿ 1.9 ಕಿಲೋಮೀಟರ್ ನಿಗದಿಪಡಿಸಿದೆ.

























Discussion about this post