Beauty Tips: ಪಾದದ ಸೌಂದರ್ಯ ಹೆಚ್ಚಿಸಲು ಮನೆಯಲ್ಲೇ ಈ ಥೆರೆಪಿ ಬಳಸಿ
ನೀವು ಬ್ಯೂಟಿ ಪಾರ್ಲರ್‌ನಲ್ಲಿ ಪೆಡಿಕ್ಯೂರ್ ಎಂಬ ಸರ್ವಿಸ್ ಹೆಸರು ಕೇಳಿರುತ್ತೀರಿ. ಇದನ್ನು ಮಾಡುವುದರಿಂದ ನಿಮ್ಮ ಕಾಲಿನ ಉಗುರು, ಚರ್ಮ, ಹಿಮ್ಮಡಿ, ಪಾದ ಎಲ್ಲವೂ ಸಾಫ್ಟ್ ಆಗಿ ಸ್ಮೂತ್ ಆಗುತ್ತದೆ. ಆದರೆ ನೀವು ಹೆಚ್ಚು ಖರ್ಚಿಲ್ಲದೇ, ಇದನ್ನು ಮನೆಯಲ್ಲಿಯೇ ಮಾಡಿಕ“ಳ್ಳಬಹುದು. ಆ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
1 ಬಾಲ್ದಿ ಉಗುರು ಬೆಚ್ಚಗಿನ ನೀರಿಗೆ, 1 ಸ್ಪೂನ್ ದಪ್ಪ ಉಪ್ಪು ಅಥವಾ ಕೆಂಪುಪ್ಪು, ರೋಸ್ ವಾಟರ್, ನಿಂಬೆರಸ ಹಾಕಿ, ಅದರಲ್ಲಿ ಕಾಲದ್ದಿ ಕುಳಿತುಕ“ಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಾಲಿನ ಸಣ್ಣ ನೋವು ಗುಣವಾಗುತ್ತದೆ. ಪಾದ, ಹಿಮ್ಮಡಿ ಎಲ್ಲವೂ ಸ್ಮೂತ್ ಆಗುತ್ತದೆ.
ಅಲ್ಲದೇ ಕಾಲಿನಲ್ಲಿ ಅಡಗಿರುವ ಕೊಳೆ ಕ್ಲೀನ್ ಆಗಿ, ನಿಮ್ಮ ಕಾಲು ಸ್ವಚ್ಛವಾಗುತ್ತದೆ. ಉಪ್ಪು ಮತ್ತು ನಿಂಬೆರಸ ನಿಮ್ಮ ಕಾಲನ್ನು ಕ್ಲೀನ್ ಮಾಡಿದರೆ, ರೋಸ್ ವಾಟರ್ ನಿಮ್ಮ ಕಾಲನ್ನು ಕೋಮಲವನ್ನಾಗಿಸುತ್ತದೆ.
ನೀವು ಬೇಕಾದರೆ ಉಪ್ಪು ಮತ್ತು ಸುವಾಸನೆಭರಿತವಾದ ಎಣ್ಣೆಯನ್ನು ಕೂಡಾ ಉಗುರುಬೆಚ್ಚಗಿನ ನೀರಿಗೆ ಹಾಕಿ, ಅದರಲ್ಲಿ ಕಾಲದ್ದಿ ಇಡಬಹುದು. ಸಾಕ್ಸ್ ಬಳಸುವವರು ಈ ರೀತಿ ಮಾಡಿದರೆ, ನಿಮ್ಮ ಕಾಲಿನಿಂದ ದುರ್ಗಂಧ ಬರುವುದಿಲ್ಲ.
ನಮ್ಮ ಪಾದ ಎಷ್ಟು ಕ್ಲೀನ್ ಆಗಿರುತ್ತದೆಯೋ, ನಮ್ಮ ಆರೋಗ್ಯ ಅಷ್ಟೇ ಚೆನ್ನಾಗಿರುತ್ತದೆ. ಕಾಲಿನಡಿಯಿಂದಲೇ ನಮ್ಮ ದೇಹಕ್ಕೆ ಹಲವು ಕ್ರಿಮಿಗಳು ಸೇರುತ್ತದೆ ಎಂದು ಹೇಳಲಾಗಿದೆ. ಹಾಗಾಗಿಯೇ ಎಲ್ಲಾದರೂ ಹೋಗಿ ಬಂದ ಬಳಿಕ, ಕಾಲು ಸ್ವಚ್ಛ ಮಾಡಲಾಗುತ್ತದೆ.
======================
ಮೊಸರನ್ನು ಈ ರೀತಿ ಬಳಸಿದರೆ, ನಿಮ್ಮ ತ್ವಚೆ ಸೂಪರ್ ಆಗೋದು ಗ್ಯಾರಂಟಿ
ಮೊಸರಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ನಾವು ಅದರಿಂದ ಸೌಂದರ್ಯವನ್ನೂ ಉತ್ತಮಗ~`ಳಿಸಬಹುದು. ಹಾಗಾದ್ರೆ ಮೊಸರನ್ನು ಬಳಸಿ ಯಾವ ರೀತಿ ನಾವು ನಮ್ಮ ಸೌಂದರ್ಯ ಹೆಚ್ಚಿಸಿಕ“ಳ್ಳಬಹುದು ತಿಳಿಯೋಣ ಬನ್ನಿ.
1 ಸ್ಪೂನ್ ಮುಲ್ತಾನಿ ಮಣ್ಣು ಮತ್ತು ಕರ್ಡ್ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ತಯಾರಿಸಿ. ಬಳಿಕ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖ ಕ್ಲೀನ್ ಮಾಡಿ. ಇದರಿಂದ ನಿಮ್ಮ ತ್ವಚೆ ಸ್ಮೂತ್ ಆಗುತ್ತದೆ.
2 ಸ್ಪೂನ್ ಮೊಸರಿಗೆ ಸ್ವಲ್ಪ ಅರಿಶಿನ ಮತ್ತು ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ಮತ್ತು ಇದರಿಂದ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡಿ. ಇದರಿಂದ ಮುಖದ ಭಾಗದಲ್ಲಿ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ನಿಮ್ಮ ಮುಖ ನ್ಯಾಚುರಲ್ ಆಗಿ ಗ್ಲೋ ಆಗುತ್ತದೆ.
1 ಸ್ಪೂನ್ ಕಡಲೆ ಹುಡಿ ಮತ್ತು 2ರಿಂದ 3 ಸ್ಪೂನ್ ಮೊಸರು ಹಾಕಿ ಮಿಕ್ಸ್ ಮಾಡಿ, ಇದರಿಂದ ಮುಖಕ್ಕೆ ಸ್ಕ್ರಬ್ ಮಾಡಿ. ಇದು ನ್ಯಾಚುರಲ್ ಸ್ಕ್ರಬ್ ಆಗಿದ್ದು, ಇದರಿಂದ ಮುಖಕ್ಕೇನೂ ಸಮಸ್ಯೆ ಆಗುವುದಿಲ್ಲ. ಅಲ್ಲದೇ ಮುಖ ಕೂಡ ಚೆನ್ನಾಗಿ ಕಾಣುತ್ತದೆ.
ಆದರೆ ನೆನಪಿರಲಿ, ನೀವು ಬಳಸುವ ವಸ್ತುಗಳು ಉತ್ತಮ ಕ್ವಾಲಿಟಿಯದ್ದಾಗಿರಬೇಕು. ಇಲ್ಲವಾದಲ್ಲಿ ಮುಖದ ಮೇಲೆ ಗುಳ್ಳೆ ಬರಬಹುದು. ಇನ್‌ಫೆಕ್ಷನ್ ಆಗಬಹುದು.
======================
ಹಸಿ ಹಾಲಿನ ಬಳಕೆಯಿಂದ ನಿಮ್ಮ ಸೌಂದರ್ಯ ಇಮ್ಮಡಿಯಾಗಿಸಿ
ಹಾಲಿನ ಸೇವನೆಯಿಂದ ನಮ್ಮ ದೇಹದ ಆರೋಗ್ಯ ಅಭಿವೃದ್ಧಿ ಆಗುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇದರ ಜತೆ ನಿಮ್ಮ ಮುಖದ ಚಂದ ಕೂಡ ಹೆಚ್ಚಿಸಬಹುದು. ಹಾಗಾದ್ರೆ ಹಾಲನ್ನ ಯಾವ ರೀತಿ ಬಳಸುವುದರಿಂದ ನಿಮ್ಮ ಮುಖದ ಅಂದ ಹೆಚ್ಚಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಹಸಿ ಹಾಲನ್ನು ಶ್ರೀಗಂಧದ ಪೇಸ್ಟ್ ಜತೆ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ಹಾಕಬೇಕು. 15 ನಿಮಿಷದ ಬಳಿಕ ಮುಖವನ್ನು ಕ್ಲೀನ್ ಮಾಡಬೇಕು. ಇದರಿಂದ ನಿಮ್ಮ ತರ್ಮದ ಕಾಂತಿ ಹೆಚ್ಚುತ್ತದೆ. ತೇವ ಉಳಿಯುತ್ತದೆ.
ನಿಮ್ಮದು ಎಣ್ಣೆ ಚರ್ಮವಾಗಿದ್ದಲ್ಲಿ, ನಿಮ್ಮ ತ್ವಚೆಗೆ ಹಸುವಿನ ಹಸಿ ಹಾಲನ್ನು ಹಚ್ಚಿ ಮಸಾಜ್ ಮಾಡಿ. ಇದರಿಂದ ಎಣ್ಣೆ ತ್ವಚೆ ಮಾಯವಾಗಿ, ನಿಮ್ಮ ತ್ವಚೆಗೆ ನ್ಯಾಚುರಲ್ ಮಾಯಿಶ್ಚರೈಸ್ ಸಿಗುತ್ತದೆ.
ಮುಖದ ಮೇಲೆ ಗುಳ್ಳೆ, ಕಲೆ ಇದ್ದರೆ, ಹಸಿ ಹಾಲಿನಿಂದ ಮಸಾಜ್ ಮಾಡಿದರೆ, ಕಲೆ ಮಾಯವಾಗುತ್ತದೆ. ಮುಖವೂ ಕ್ಲೀನ್ ಆಗುತ್ತದೆ. ಅಲ್ಲದೇ ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಇನ್ನು ಮುಖಕ್ಕೆ ಹಚ್ಚುವುದಕ್ಕೆ ಮಾತ್ರ ಹಸಿ ಹಾಲು ಉತ್ತಮ. ಸೇವನೆ ಮಾಡಬೇಕು ಎಂದರೆ ನೀವು ಕಾಯಿಸಿದ ಹಾಲನ್ನೇ ಬಳಸಬೇಕು. ಏಕೆಂದರೆ ಹಸಿ ಹಾಲಿನ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಹಾಲು ಕಾಯಿಸಿದಾಾಗ ಈ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಬಳಿಕ ಆ ಹಾಲು ಸೇವನೆಗೆ ಉತ್ತಮವಾಗಿರುತ್ತದೆ.
======================
Health Tips: ತುಳಸಿ ಕಶಾಯ ಸೇವನೆಯ ಲಾಭ ತಿಳಿದರೆ ಆಶ್ಚರ್ಯ ಪಡ್ತೀರಾ..
ತುಳಸಿಗೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತುಳಸಿಯನ್ನು ದೇವಿಯ ರೂಪವಾಗಿ ನಾವು ಪೂಜಿಸುತ್ತೇವೆ. ತುಳಸಿ ಗಿಡಕ್ಕೆ ಪ್ರತಿದಿನ ನೀರೆರೆದು, ಪೂಜೆ ಮಾಡುತ್ತೇವೆ. ಆದರೆ ಈ ತುಳಸಿ ಬರೀ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ. ನಾಲ್ಕು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ, ಕಶಾಯ ಮಾಡಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಮಾಯವಾಗುತ್ತದೆ. ಈ ಬಗ್ಗೆ ತಿಳಿಯೋಣ ಬನ್ನಿ..
ಈ ತುಳಸಿ ಕಶಾಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಪದೇ ಪದೇ ನೆಗಡಿ, ಕೆಮ್ಮು, ಜ್ವರ ಬರುತ್ತಿದೆ ಎಂದರೆ, ನೀವು ನೀರು ಕುದಿಸಿ, ಅದಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಮತ್ತು ತುಳಸಿ ಹಾಕಿ ಕುದಿಸಿ, ಕಶಾಯ ಮಾಡಿ ಕುಡಿಯಿರಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇನ್ನು ಕ್ಯಾನ್ಸರ್, ಹೆಚ್ಐವಿಯಂಥ ಮಾರಣಾಂತಿಕ ಖಾಯಿಲೆ ಬರುವುದನ್ನು ಕೂಡ ತುಳಸಿ ಎಲೆ ತಡೆಯುತ್ತದೆ. ಹಾಗಾಗಿಯೇ ತುಳಸಿ ಕಶಾಯ ಸೇವನೆ ಮಾಡುವವರು ಸದಾ ಆರೋಗ್ಯವಾಗಿರುತ್ತಾರೆ. ಆದರೆ ತುಳಸಿ ಕಶಾಯ ಮಾಡುವ ಮುನ್ನ ತುಳಸಿಯನ್ನು ಸ್ವಚ್ಛವಾಗಿ ತ“ಳೆಯಬೇಕು.
ನಿಮಗೆ ಚರ್ಮದ ಸೋಂಕು, ಪದೇ ಪದೇ ಇನ್‌ಫೆಕ್ಶನ್ ಆಗುವುದೆಲ್ಲ ಆದರೆ, ನೀವು ತುಳಸಿ ಕಶಾಯ ಸೇವಿಸಬಹುದು ಅಥವಾ ತುಳಸಿಯನ್ನು ಅರೆದು, ಫಂಗಸ್, ಗುಳ್ಳೆ, ಇನ್‌ಫೆಕ್ಷನ್ ಆದಲ್ಲಿ ಹಚ್ಚಿಕ“ಳ್ಳಬಹುದು. ಇದರಿಂದ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ.
ನಿಮಗೆ ಲೋಬಿಪಿ ಅಥವಾ ಹೈ ಬಿಪಿ ಇದ್ದಲ್ಲಿ, ನೀವು ತುಳಸಿ ಕಶಾಯ ಅಥವಾ ತುಳಸಿ ಎಲೆ ಸೇವನೆ ಮಾಡುತ್ತ ಬಂದರೆ, ನಿಮ್ಮ ಬಿಪಿ ಕಂಟ್ರೋಲಿಗೆ ಬರುತ್ತದೆ. ಅಥವಾ ನಿಮಗೇನೂ ಇಲ್ಲದಿದ್ದರೂ ತುಳಸಿ ಸೇವನೆಯ ಅಭ್ಯಾಸ ನಿಮಗಿದ್ದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬೆಳಿಗ್ಗೆ ಖಾಲಿ ಹ“ ಟ್ಟೆಯಲ್ಲಿ ಈ ಕಶಾಯ ಸೇವನೆ ಮಾಡಬೇಕು.
ಇನ್ನು ಬಿಪಿ ಸಮಸ್ಯೆ ಇದ್ದವರಿಗೆ ಉಸಿರಾಟದ ಸಮಸ್ಯೆಯೂ ಇರುತ್ತದೆ. ಅಂಥವರು ಕೂಡ ತುಳಸಿ ಕಶಾಯ ಸೇವನೆ ಮಾಡಬಹುದು. ಇದು ಶ್ವಾಸಕೋಶದಲ್ಲಿರುವ ಕಸವನ್ನು ಕ್ಲೀನ್ ಮಾಡಿ, ಉಸಿರಾಡಲು ಸಹಾಯ ಮಾಡುತ್ತದೆ.
ಬರೀ ಬಿಪಿ ಕಂಟ್ರೋಲ್ ಮಾಡುವುದು ಮಾತ್ರವಲ್ಲದೇ, ಇದು ಶುಗರ್ ಕೂಡ ಕಂಟ್ರೋಲಿನಲ್ಲಿಡುತ್ತದೆ. ದೇಹದಲ್ಲಿರುವ ರಕ್ತವನ್ನು ಶುದ್ಧಗ“ಳಿಸುತ್ತದೆ. ಬ್ಯಾಡ್ ಕ“ಲೆಸ್ಟ್ರಾಲ್ ಕಡಿಮೆ ಮಾಡಿ, ನಿಮ್ಮ ದೇಹದ ತೂಕವನ್ನು ಸರಿಯಾಗಿ ಇಡುವಲ್ಲಿ ಸಹಕಾರಿಯಾಗಿದೆ.
ನಿಮಗೆ ತುಳಸಿ ಸೇವನೆ ಮಾಡಿದ್ರೇನೇ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ತುಳಸಿ ಸೇವನೆ ಮಾಡುವುದು ಉತ್ತಮ.
===============================
ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?
ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ. ಅಲ್ಲಿ ಬಜ್ಜಿ, ಬೋಂಡಾ, ಹಪ್ಪಳ, ಚಿಪ್ಸ್ ಎಲ್ಲ ಕರಿಯುವುದೇ ತೆಂಗಿನ ಎಣ್ಣೆಯಲ್ಲಿ. ಹಾಗಾದ್ರೆ ತೆಂಗಿನ ಎಣ್ಣೆ ಬಳಕೆಯಿಂದ ಏನೇನು ಲಾಭ..? ಇದನ್ನು ಬಳಸೋದಾದ್ರೂ ಹೇಗೆ ಅಂತಾ ತಿಳಿಯೋಣ ಬನ್ನಿ..
ಕೂದಲು ತುಂಬ ಉದುರುತ್ತಿದೆ, ತುರಿಕೆಯಾಗುತ್ತಿದೆ ಎಂದಲ್ಲಿ, ನೀವು ಬರೀ ತೆಂಗಿನ ಎಣ್ಣೆಯನ್ನೇ ಬಳಸಿ. ಕೂದಲು ಉದುರುವುದು ನಿಂತು, ಆರೋಗ್ಯಕರವಾಗಿ ಬೆಳೆಯುತ್ತದೆ. ತುರಿಗೆ, ಇನ್‌ಫೆಕ್ಷನ್ ಎಲ್ಲವೂ ಕಡಿಮೆಯಾಗುತ್ತದೆ.
ಇನ್ನು ತಿಂಗಳಿಗೆ 1 ಬಾರಿಯಾದರೂ ನೀವು ದೇಹಕ್ಕೆ ತೆಂಗಿನ ಎಣ್ಣೆಯ ಮಾಲೀಶ್ ಮಾಡಿದ್ರೆ, ನಿಮ್ಮ ಸ್ಕಿನ್ ಚೆನ್ನಾಗಿರುತ್ತದೆ. ಆರೋಗ್ಯವಾಗಿಯೂ ಇರುತ್ತೀರಿ. ತುರಿಕೆ, ಕಜ್ಜಿ, ಗಾಯ ಇತ್ಯಾದಿಗಳಿಗೂ ಇರುವ ಹಳೆಯ ಪರಿಹಾರ ಅಂದ್ರೆ ಅದು ತೆಂಗಿನ ಎಣ್ಣೆ. ಗಾಯವಾದ್ರೂ, ಗುಳ್ಳೆಯಾದರೂ, ತುರಿಕೆಯಾದ್ರೂ ತೆಂಗಿನ ಎಣ್ಣೆಯನ್ನೇ ಬಳಸೋದು.
ಇನ್ನು ಕೆಲವರು ತೆಂಗಿನ ಎಣ್ಣೆಯಿಂದ ವಾರಕ್ಕೆ 1 ಬಾರಿ ಬಾಯಿ ಮುಕ್ಕಳಿಸುತ್ತಾರೆ. ಇದರಿಂದ ಹಲ್ಲು ಚೆನ್ನಾಗಿರುತ್ತದೆ. ಹಲ್ಲು ಬಿಳಿಯಾಗುತ್ತದೆ. ಹಲ್ಲು ಹುಳುಕು ಹಿಡಿಯುವುದಿಲ್ಲ.
ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು. ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಅಂದ್ರೆ, ನೀವು ಅಡಿಗೆಯಲ್ಲಿ ತೆಂಗಿನ ಎಣ್ಣೆ ಬಳಸಬೇಕು. ತೆಂಗಿನ ಎಣ್ಣೆ ಮಸಾಜ್‌ನಿಂದ ಕೂದಲು ಮತ್ತು ತ್ವಚೆಯ ಆರೋಗ್ಯ ಚೆನ್ನಾಗಿರುವುದಲ್ಲದೇ, ಆರೋಗ್ಯವೂ ಚೆನ್ನಾಗಿರುತ್ತದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿಯೇ ತೆಂಗಿನ ಎಣ್ಣೆಯಲ್ಲಿ ಕರಿದ ತಿಂಡಿ, ತೆಂಗಿನ ಎಣ್ಣೆ ಬಳಸಿ ಮಾಡಿದ ಅಡುಗೆ ಸೇವನೆ ಮಾಡಿದವರ ದೇಹದ ತೂಕ ಹೆಚ್ಚಾಗುವುದಿಲ್ಲ. ಏಕೆಂದರೆ ತೂಕವನ್ನು ಮೆಂಟೇನ್ ಮಾಡುವಲ್ಲಿ ತೆಂಗಿನ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ.
ನಿಮಗೆ ತೆಂಗಿನ ಎಣ್ಣೆ ಸೇವನೆ ಮಾಡಿದ್ದಲ್ಲಿ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ಬಳಸುವುದು ಉತ್ತಮ.
==========================
ಮಸಾಲೆ ಸ್ವೀಟ್ ಕಾರ್ನ್ ರೆಸಿಪಿ ಮತ್ತು ಅದರ ಸೇವನೆಯ ಲಾಭಗಳು
ಸಂಜೆ ಹೊತ್ತು ಅಥವಾ ತಿಂಡಿ- ಊಟದ ಮಧ್ಯದಲ್ಲಿ ಹಸಿವಾದಾಗ ಸ್ವೀಟ್ ಕಾರ್ನ್ ತಿಂದರೆ ಉತ್ತಮ. ಚಿಪ್ಸ್, ಬಜಿ, ಸ್ಯಾಂಡ್‌ವಿಚ್, ಬರ್ಗರ್, ಪಿಜ್ಜಾ ತಿನ್ನೋ ಬದ್ಲು ಸ್ವೀಟ್ ಕಾರ್ನ್ ತಿಂದ್ರೆ ನಿಮ್ಮ ಆರೋಗ್ಯಕ್ಕೂ ಒಳ್ಳೆದು, ನಿಮ್ಮ ಜೇಬಿಗೂ ಒಳ್ಳೆದು. ಅದರಲ್ಲೂ ಮನೆಗೆ ಕಾರ್ನ್ ತಂದು ಬೇಯಿಸಿ ಅಥವಾ ಸುಟ್ಟು ತಿಂದರೆ ಇನ್ನೂ ಉತ್ತಮ. ಆದ್ರೆ ಕಾರ್ನ್ ತಿನ್ನುವಾದ ಅದರಲ್ಲಿ ಉಪ್ಪು, ಖಾರ ಮತ್ತು ಬೆಣ್ಣೆ ಪ್ರಮಾಣ ಜಾಸ್ತಿ ಇರದಂತೆ ನೋಡಿಕೊಳ್ಳಿ.
ಸ್ವೀಟ್‌ಕಾರ್ನ್ ರುಚಿ ಹೆಚ್ಚಿಸಲು ಕಾರ್ನ್‌ಗೆ ಉಪ್ಪು, ಕಾರ, ಬೆಣ್ಣೆ ಹಾಕಿಬಿಟ್ಟರೆ ನಿಮಗೆ ಪೂರ್ತಿ ಪ್ರಮಾಣದ ಆರೋಗ್ಯ ಲಾಭ ಸಿಗೋದಿಲ್ಲ. ಅದರ ಬದಲು ಕಪ್ಪುಪ್ಪು, ಕಾಳುಮೆಣಸಿನ ಪುಡಿ (ಪೆಪ್ಪರ್ ಪೌಡರ್), ತುಪ್ಪ ಬಳಸಿ. ಇದು ಕೂಡ ಕಡಿಮೆ ಪ್ರಮಾಣದಲ್ಲಿರಲಿ. ಸ್ವಲ್ಪ ನಿಂಬೆರಸ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಇನ್ನು ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು ಅಂತಾ, ಅದರಿಂದ , ಪಲಾವ್, ರೈಸ್‌ಭಾತ್, ಬಜ್ಜಿ, ಇತ್ಯಾದಿ ಸ್ನ್ಯಾಕ್ಸ್‌ಗಳನ್ನ ಮಾಡ್ತಾರೆ. ಆದ್ರೆ ಕರಿದ ಪದಾರ್ಥಗಳಲ್ಲಿ, ಹೆಚ್ಚು ಬೇಯಿಸಿದ ಪದಾರ್ಥಗಳಲ್ಲಿ ಕಾರ್ನ್ ಬಳಸಿದ್ರೆ, ಕಾರ್ನ್ ಅದರ ಸತ್ವ ಕಳೆದುಕೊಳ್ಳುತ್ತದೆ. ಆಗ ಇಂತಹ ಪದಾರ್ಥಗಳಲ್ಲಿ ಕಾರ್ನ್ ಬಳಸಿದರೂ ನೋ ಯ್ಯೂಸ್. ಆದ್ದರಿಂದ ಕಾರ್ನ್‌ನ್ನ ಕೊಂಚ ಬೇಯಿಸಿ, ಅಥವಾ ಸುಟ್ಟು ತಿನ್ನಬಹುದು. ಸಲಾಡ್ ಮಾಡುವಾಗ ಬಳಸಿದ್ರು ಓಕೆ.
ನಿಯಮಿತ ಪ್ರಮಾಣದ ಸ್ವೀಟ್ ಕಾರ್ನ್ ಸೇವನೆಯಿಂದ ದೇಹದಲ್ಲಿರುವ ಹೆಚ್ಚಿನ ಬೊಜ್ಜನ್ನ ಕರಗುತ್ತದೆ. ನಿಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತದೆ.
ಎನಿಮಿಯಾವನ್ನ ದೂರು ಮಾಡುವಲ್ಲಿ ಸಹಕಾರಿ: ಎನಿಮಿಯಾ ಅಂದ್ರೆ ಮನುಷ್ಯನ ದೇಹದಲ್ಲಿ ರಕ್ತದ ಕೊರತೆ ಇರುವುದು. ಸ್ವೀಟ್ ಕಾರ್ನ್‌ನಲ್ಲಿ ವಿಟಮಿನ್ ಬಿ12, ಐರನ್ ಇರುವುದರಿಂದ ದೇಹದಲ್ಲಿರುವ ರಕ್ತದ ಕೊರತೆ ನೀಗಿಸುವಲ್ಲಿ ಸ್ವೀಟ್ ಕಾರ್ನ್ ಸಹಕಾರಿಯಾಗಿದೆ.
ಸ್ವೀಟ್ ಕಾರ್ನ್ ತಿನ್ನುವುದರಿಂದ ದೇಹದ ತೂಕ ಹೆಚ್ಚಿಸಿಕೊಳ್ಳಲೂಬಹುದು, ಕಡಿಮೆ ಮಾಡಿಕೊಳ್ಳಲೂಬಹುದು. ಅಲ್ಲದೇ, ಫಿಟ್ ಆಗಿ ಕೂಡ ಇರಬಹುದು. ಎಲ್ಲ ಸಮಯದಲ್ಲೂ ಕಾರ್ನ್ ಸುಲಭವಾಗಿ ಸಿಗತ್ತೆ. ಹಾಗಾಗಿ ತೂಕ ಕಳೆದುಕೊಳ್ಳಲು ಇಚ್ಛಿಸುವವರು ವಾರದಲ್ಲಿ 2ರಿಂದ 3 ಬಾರಿ ಕಾರ್ನ್ ತಿನ್ನಬಹುದು. ಹೀಗೆ ತಿನ್ನುವಾಗ ಬಾಣಲೆಗೆ ಜೀರಿಗೆ, ಶೇಂಗಾಕಾಳು,ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ, ಅದರ ಜೊತೆ , ಸಣ್ಣಗೆ ಹೆಚ್ಚಿದ ಸೌತೇಕಾಯಿ, ಈರುಳ್ಳಿ, ಟೊಮೆಟೋ( ಪ್ರತಿನಿತ್ಯ ಟೊಮೆಟೊ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ) ನಿಂಬೆಹಣ್ಣು, ಕಪ್ಪು ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ 2 ನಿಮಿಷ ಹುರಿದು ತಿನ್ನಿ.
ತೂಕ ಹೆಚ್ಚಿಸಲು ಇಚ್ಛಿಸುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ ತಿನ್ನಬಹುದು. ಕಾರ್ನ್ ಬೇಯಿಸುವಾಗ ತುಪ್ಪ ಬಳಸಿದರೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.
ಆದ್ರೆ ನೆನಪಿರಲಿ ಹೆಚ್ಚಾದ್ರೆ ಅಮೃತವೂ ವಿಷವೇ ಎಂಬ ಹಾಗೇ ಮಿತಿಮೀರಿ ಕಾರ್ನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಲ್ಲ. ನಿಯಮಿತವಾಗಿ ಕಾರ್ನ್ ತಿನ್ನಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
Discussion about this post