ಬಿಟ್ ಕಾಯಿನ್ ಎಂಬ ಪದ ಇದೀಗ ರಾಜ್ಯದ ಮೂಲೆಮೂಲೆಯಲ್ಲೂ ಸದ್ದು ಮಾಡುತ್ತಿರುವ ಪದ. ಬಿಟ್ ಕಾಯಿನ್ ಎಂದು ತಿಳಿದವರಿಗಿಂತ ಹಾಗೊಂದು ಪದದ ಅರ್ಥ ಅರಿಯದವರ ಸಂಖ್ಯೆಯೇ ಹೆಚ್ಚು. ಆದರೆ ಬಿಟ್ ಕಾಯಿನ್ ಪ್ರಕರಣದಲ್ಲಿ ಕೇಳಿಬಂದ ಅತಿ ಪ್ರಮುಖ ಹೆಸರು ಹ್ಯಾಕರ್ ಶ್ರೀಕಿ, ಈತನ ಹೆಸರು ಬಿಟ್ ಕಾಯಿನ್‌ಗಿಂತ ಹೆಚ್ಚು ಪ್ರಸಿದ್ಧವಾಗಿದೆ. ಈತನ ಬಂಧನವಾಗಿ ಬೇಲ್‌ನಡಿ ಬಿಡುಗಡೆಯೂ ಆಗಿದೆ.
ರಾಜ್ಯ ರಾಜಕಾರಣವನ್ನೇ ಗಡಗಡ ನಡುಗಿಸಿದ ಬಿಟ್ ಕಾಯಿನ್ ಹಗರಣದ ಆರೋಪಿ ಹ್ಯಾಕರ್ ಶ್ರೀಕಿ ಬಿಡುಗಡೆಯಾಗಿದ್ದಾನೆ. ಬಿಡುಗಡೆಯಾದ ಬೆನ್ನಲ್ಲೇ ನನಗೆ ಜಾಮೀನು ಕೊಟ್ಟವರು ಯಾರು ಎಂಬುದು ಗೊತ್ತಿಲ್ಲ. ನಾನು ಅಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಹೇಳಿದ್ದಾನೆ ಅಂತರಾಷ್ಟ್ರೀಯ ಮಟ್ಟದ ಹ್ಯಾಕರ್ ಎಂದು ಕರೆಯಲ್ಪಟ್ಟಿರುವ ಶ್ರೀಕಿ ಅಲಿಯಾಸ್ ಶ್ರೀಕರ್.
ಹೋಟೆಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದರು. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜಾಮೀನು ಕೊಡಿಸಿದವರು ಯಾರು ಎಂಬುದೂ ತಿಳಿದಿಲ್ಲ. ಮಾಧ್ಯಮಗಳಲ್ಲಿ ಸುಮ್ಮನೆ ಸುದ್ದಿ ಕ್ರಿಯೇಟ್ ಆಗಿದೆ. ನನಗೆ ಏನೂ ಗೊತ್ತಿಲ್ಲ. ದಯವಿಟ್ಟು ನನ್ನನ್ನು ಹಿಂಬಾಲಿಸಬೇಡಿ ಎಂದು ವಿನಂತಿಸಿದ್ದಾನೆ ಹ್ಯಾಕರ್ ಶ್ರೀಕರ್.
ಇದನ್ನೂ ಓದಿ: Bitcoin: ಸರ್ಕಾರದ ಯಾವೊಬ್ಬ ನಾಯಕನೂ ಕೂಡ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ, ನಾವು ಯಾರನ್ನೂ ರಕ್ಷಿಸುತ್ತಿಲ್ಲ
Discussion about this post