Bollywood Special Story: ಇತ್ತೀಚೆಗೆ ಬಾಲಿವುಡ್ ಸ್ಟಾರ್ಸ್‌ಗಿಂತ, ಸೌತ್ ಸ್ಟಾರ್‌ಗಳಿಗೆ ಫ್ಯಾನ್ಸ್ ಹೆಚ್ಚಾಗಿದ್ದಾರೆ ಅನ್ನೋದು ಸತ್ಯ. ಆದ್ರೆ ಬಾಲಿವುಡ್ ಸ್ಟಾರ್‌ಗಳು ಮನೆ ಬಿಟ್ಟು ಹೊರಗೆ ಬಂದ್ರೆ, ಅವರನ್ನ ಮಾತಾಡಿಸೋಕ್ಕೆ, ಹಲವರು ಪ್ರಯತ್ನ ಪಟ್ಟು ಅವರನ್ನ ಮುತ್ತಿಕೊಳ್ತಾರೆ. ಹೀಗೆ ಬರುವ ಫ್ಯಾನ್ಸ್‌ಗಳನ್ನ ಕಂಟ್ರೋಲ್ ಮಾಡೋದು, ಉಪದ್ರ ಕೊಡುವವರನ್ನ ದೂರವಿಡೋರು ಅವರ ಬಾಡಿಗಾರ್ಡ್. ಹಾಗಾದ್ರೆ ಬಾಲಿವುಡ್ ಸ್ಟಾರ್ಸ್ ತಮ್ಮ ಬಾಡಿಗಾರ್ಡ್ಸ್‌ಗೆ ಕೊಡುವ ಸ್ಯಾಲರಿ ಎಷ್ಟು ಅನ್ನೋ ಬಗ್ಗೆ ನಾವಿವತ್ತು ನಿಮ್ಗೆ ಇನ್‌ಫಾರ್ಮೇಶನ್ ಕೊಡ್ತೀವಿ..
ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ. ಶೇರಾ ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲಾ. ಇವರ ಪೂರ್ತಿ ಹೆಸರು ಗುರು ಮೀತ್ ಸಿಂಗ್ ಶೇರಾ. ಸಲ್ಮಾನ್ ಖಾನ್ ನೆರಳಿನಂತೆ ಇವರ ಹಿಂದೆ ಇರುವ ಶೇರಾ, ಎಷ್ಟರ ಮಟ್ಟಿಗೆ ಬಾಲಿವುಡ್‌ನಲ್ಲಿ ಫೇಮಸ್ ಅಂದ್ರೆ, ಸಲ್ಮಾನ್ ಅಂದ್ರೆ ಶೇರಾ, ಶೇರಾ ಅಂದ್ರೆ ಸಲ್ಮಾನ್ ಅನ್‌ನೋ ಮಟ್ಟಿಗೆ ಫೇಮಸ್. ಯಾಕಂದ್ರೆ ಒಂದು ಸ್ಟಾರ್ ನಟನ ಬಾಡಿಗಾರ್ಡ್ ಈ ಮಟ್ಟಿಗೆ ಫೇಮಸ್ ಆಗೋದು ಅಂದ್ರೆ ಸಾಮಾನ್ಯ ಮಾತಲ್ಲ.
ಕಳೆದ 20 ವರ್ಷಗಳಿಂದ ಶೇರಾ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿದ್ದು, ವರ್ಲ್ಡ್ ಟೂರ್, ಫಿಲ್ಮ್ ಪ್ರಮೋಷನ್, ಎಲ್ಲೆ ಹೋದರು, ಸಲ್ಲುಗೆ ಸಾಥ್ ಕೊಡ್ತಾರೆ. ಮೊದ ಮೊದಲು ಸಾಧಾರಣ ಬಾಡಿಗಾರ್ಡ್ ಆಗಿದ್ದ ಶೇರಾ, ಸಲ್ಮಾನ್ ಖಾನ್ ಬಗ್ಗೆ ಇಡುತ್ತಿದ್ದ ಕಾಳಜಿಯನ್ನು ನೋಡಿ, ಸಲ್ಮಾನ್ ಶೇರಾನನ್ನು ಪರ್ಸ್‌ನಲ್ ಬಾಡಿಗಾರ್ಡ್ ಆಗಿ ಪ್ರಮೋಷನ್ ಕೊಟ್ಟಿದ್ದಾರೆ. ಈಗ ಶೇರಾ ಬರೀ ಸಲ್ಮಾನ್ ಬಾಡಿಗಾರ್ಡ್ ಅಷ್ಟೇ ಅಲ್ಲದೇ, ಸಲ್ಮಾನ್ ಖಾರ್ ಪರಿವಾರದ ಓರ್ವ ಸದಸ್ಯನಂತಿದ್ದಾರೆ. ಇವರ ವಾರ್ಷಿಕ ಸಂಬಳ 2 ಕೋಟಿ ರೂಪಾಯಿ. ಅಂದ್ರೆ ಇವರಿಗೆ ಪ್ರತೀ ತಿಂಗಳು 16ರಿಂದ 18 ಲಕ್ಷ ರೂಪಾಯಿ ಸ್ಯಾಲರಿ ಇದೆ.
ಅಮಿತಾಬ್ ಬಚ್ಚನ್: ಬಿಗ್‌ಬಿ ಅಮಿತಾಬ್ ಬಚ್ಚನ್‌ಗೆ ಇರುವ ಫ್ಯಾನ್ಸ್‌ನಾ ಲೆಕ್ಕ ಹಾಕಕ್ಕೆ ಆಗಲ್ಲ ಬಿಡಿ. ಯಾಕಂದ್ರೆ ಇವರು 90ರ ದಶಕದ ನಟನಾಗಿದ್ದು, ಇವರಿಗೆ ಕೋಟಿಗೂ ಮೀರಿ ಫ್ಯಾನ್ಸ್ ಇದ್ದಾರೆ. ಇಂಥ ಫ್ಯಾನ್ ಫಾಲೋವರ್ ಹೊಂದಿರುವ ಸ್ಟಾರ್ ಹೊರಗೆ ಬಂದ್ರೆ, ಇವರನ್ನ ಭೇಟಿಯಾಗೋಕ್ಕೆ ಜನ ಮುಗಿ ಬೀಳದೇ ಇರ್ತಾರಾ..? ಹಾಗಾಗಿ ಇವರಿಗೂ ಕೂಡ ಬಾಡಿಗಾರ್ಡ್ ಇದ್ದ. ಅವನೇ ಜೀತೇಂದ್ರ ಶಿಂಧೆ. ಜೀತೆಂದ್ರೆ ಶಿಂಧೆಗೆ ಅಮಿತಾಬ್ ಕೊಡುತ್ತಿದ್ದ ಸ್ಯಾಲರಿಗೆ ಸಂಬಂಧ ಪಟ್ಟಂತೆ, ಕಳೆದ ವರ್ಷ ಕಾಂಟ್ರವರ್ಸಿಯಾಗಿತ್ತು. ಹೀಗಾಗಿ ಪೊಲೀಸರು ಅವನನ್ನು ಟ್ರಾನ್ಸಫರ್ ಮಾಡಿಸಿದ್ದರು. ಇವನಿಗೆ ಅಮಿತಾಬ್ ವರ್ಷಕ್ಕೆ ಒಂದುವರೆ ಕೋಟಿ ಸ್ಯಾಲರಿ ಕೊಡ್ತಿದ್ರು. ಅಂದ್ರೆ ತಿಂಗಳಿಗೆ 13ರಿಂದ 14 ಲಕ್ಷ ರೂಪಾಯಿ.
ದೀಪಿಕಾ ಪಡುಕೋಣೆ: ಕಳೆದ ವರ್ಷ ಅಷ್ಟೇ, ದೀಪಿಕಾ ಬಾಡಿಗಾರ್ಡ್ ಸುದ್ದಿಯಾಗಿದ್ದರು. ಇದಕ್ಕೆ ಕಾರಣ ಏನಂದ್ರೆ ದೀಪಿಕಾ ತಮ್ಮ ಬಾಡಿಗಾರ್ಡ್‌ನ್ನ ಅಣ್ಣನಂತೆ ನೋಡ್ತಾರೆ ಅಂತಾ. ಇದಾದ ಬಳಿಕ ಅವರ ಬಾಡಿಗಾರ್ಡ್ ಸೆಲೆಬ್ರಿಟಿ ಬಾಡಿಗಾರ್ಡ್ ಆದ್ರು. ದೀಪಿಕಾ ಜೊತೆ ಅವರ ಬಾಡಿಗಾರ್ಡನ್ನ ಕೂಡ ಜನ ಗುರುತಿಸೋಕ್ಕೆ ಶುರು ಮಾಡಿದ್ರು. ಹೀಗೆ ಫೇಮಸ್ ಆದ ಬಾಡಿಗಾರ್ಡ್ ಜಲಾಲ್. ಜಲಾಲ್ ಭಾಯ್.
ದೀಪಿಕಾ ಜಲಾಲ್‌ರನ್ನ ಸುಮ್ಮನೆ ಜಲಾಲ್ ಭಾಯ್ ಅನ್ನಲ್ಲಾ, ಬದಲಾಗಿ ಅವರಿಗೆ ಪ್ರತೀ ವರ್ಷ ರಾಖಿ ಹಬ್ಬಕ್ಕೆ ರಾಖಿನೂ ಕಟ್ಟುತ್ತಾರೆ. ಜಲಾಲ್‌ನನ್ನು ತಮ್ಮ ಫ್ಯಾಮಿಲಿ ಮೆಂಬರ್‌ನಂತೆ ಕಾಣುತ್ತಾರೆ. ದೀಪಿಕಾ ಮದುವೆ ಇಟಲಿಯಲ್ಲಿ ನಡೆದಾಗ, ಅವರ ಎಷ್ಟೋ ಸಂಬಂಧಿಕರು ಮದುವೆಗೆ ಬರಲಾಗಲಿಲ್ಲ. ಆದ್ರೆ ಜಲಾಲ್ ಮಾತ್ರ, ತಪ್ಪದೇ ಮದುವೆಗೆ ಹಾಜರಾಗಿ, ಹುಡುಗಿ ಕಡೆಯವರ ಕೆಲಸದ ಜವಾಬ್ದಾರಿ ವಹಿಸಿದ್ದ. ಜಲಾಲ್ ವಾರ್ಷಿಕ ಸಂಬಳ 1 ಕೋಟಿ ರೂಪಾಯಿ. ಅಂದ್ರೆ ತಿಂಗಳ ಸ್ಯಾಲರಿ 8ರಿಂದ 9 ಲಕ್ಷ ರೂಪಾಯಿ.
ಅಕ್ಷಯ್ ಕುಮಾರ್: ಬಾಲಿವುಡ್ ಖತ್ರೋಂಕಾ ಖಿಲಾಡಿ ಅಂತಾನೇ ಫೇಮಸ್ ಆಗಿರುವ ಹೀರೋ ಅಕ್ಷಯ್ ಕುಮಾರ್‌ಗೂ ಬಾಡಿಗಾರ್ಡ್ ಇದ್ದಾರೆ. ಇವರ ಹೆಸರು ಶ್ರೇಯಸ್ ಠೆಲೆ. ಅಕ್ಷಯ್ ಕುಮಾರ್‌ಗೆ ಫ್ಯಾನ್ಸ್ ಬಂದು ಮುಗ್ಗೆ ಹಾಕಿದಾಗ, ಅವರಿಂದ ಎಸ್ಕೇಪ್ ಆಗೋಕ್ಕೆ ಈ ಶ್ರೇಯಸ್ ಹೆಲ್ಪ್ ಮಾಡ್ತಾರಂತೆ. ಶ್ರೇಯಸ್‌ನನ್ನು ಮನೆ ಸದಸ್ಯನಂತೆ ಕಾಣುವ ಅಕ್ಷಯ್, ಅವರಿಗೆ ವರ್ಷಕ್ಕೆ ಒಂದು ಕೋಟಿ 20 ಲಕ್ಷ ರೂಪಾಯಿ ಸ್ಯಾಲರಿ ಕೊಡ್ತಾರಂತೆ. ಅಂದ್ರೆ ಪ್ರತೀ ತಿಂಗಳು 10 ಲಕ್ಷ ರೂಪಾಯಿ ಸಂಬಳ..
ಶಾರುಖ್ ಖಾನ್: ಕಳೆದ 11 ವರ್ಷಗಳಿಂದ ಶಾರುಖ್ ಖಾನ್ ನೆರಳಿನಂತೆ ಬಾಡಿಗಾರ್ಡ್ ಕೆಲಸ ಮಾಡುವವರು ರವಿ ಸಿಂಗ್. ಇವರು ಅಷ್ಟೊಂದು ಫೇಮಸ್ ಬಾಡಿಗಾರ್ಡ್ ಅಲ್ಲದಿದ್ದರೂ, ಇವರು ಇಡೀ ಬಾಲಿವುಡ್‌ನಲ್ಲೇ ಹೆಚ್ಚು ಸ್ಯಾಲರಿ ಪಡೆಯುವ ಬಾಡಿಗಾರ್ಡ್ ಆಗಿದ್ದಾರೆ. ಇವರು ವಾರ್ಷಿಕವಾಗಿ 2ಕೋಟಿ 7 ಲಕ್ಷರೂಪಾಯಿ ಸ್ಯಾಲರಿ ಪಡೆಯುತ್ತಾರೆ. ಅಂದ್ರೆ ಪ್ರತೀ ತಿಂಗಳು 22 ಲಕ್ಷಕ್ಕೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ.
ಅಮೀರ್ ಖಾನ್: ಅಮೀರ್ ಖಾನ್ ಬಾಡಿಗಾರ್ಡ್ ಆಗಿ ಯುವರಾಜ್ ಘೋರ್ಪಡೆ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಾರ್ಷಿಕ ಸ್ಯಾಲರಿ 2 ಕೋಟಿ ರೂಪಾಯಿ ಕೊಡಲಾಗುತ್ತಿದೆ. ಅಂದ್ರೆ ತಿಂಗಳಿಗೆ, 16ರಿಂದ 18 ಲಕ್ಷ ರೂಪಾಯಿ ಸ್ಯಾಲರಿ.
Discussion about this post