ವಿಜಯಪುರ: ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ನಮ್ಮ ಸರ್ಕಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚಿಸಿ, ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಮಗೆ ಯಾವುದೇ ಭೇದ ಭಾವವಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ರಿಗೆ ಯಾವುದೇ ಭೇದ ಭಾವ ಇಲ್ಲ. ಒಂದೇ ತಾಯಿಯ ಮಕ್ಕಳು ಎಂಬಂತೆ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದರು. ಈ ಭಾಗದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಗೆಲ್ಲಿಸಬೇಕು ಎಂಬುದು. ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ ಎಂದರು.
ಒಂದು ಕಾಲ ಇತ್ತು ಹಣ, ಹೆಂಡ, ಅಧಿಕಾರದ ಬಲದಿಂದ ಗೆಲ್ಲಬಹುದು ಎಂದು ಕಾಂಗ್ರೆಸನವರು ತಿಳಿದುಕೊಂಡಿದ್ದರು ಎಂದರು. ನಮಗೆ ಯಾವುದೇ ರೀತಿಯ ಸೌಲತ್ತು ಸಿಕ್ಕಲ್ಲ ಎಂದು ಯಾವುದಾದರೂ ವ್ಯಕ್ತಿ ಇದ್ದರೆ ಹೇಳಿ. ನಾನು ಪ್ರತಿಯೊಬ್ಬರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೌಲತ್ತು ಕೊಡುವ ಕೆಲಸವನ್ನು ಮಾಡಿದ್ದೇನೆ ಎಂದರು.
ಬರುವ ದಿನಗಳಲ್ಲಿ ಮನೆಯಿಲ್ಲದ ಬಡವರಿಗೆ ಮನೆ ಕಟ್ಟಿ ಕೊಡುವ ಯೋಚನೆ ಮಾಡಲಾಗಿದೆ. ಇನ್ನು ಮುಂದೆ ಸೌಲತ್ತು ಬೇಕು ಎಂದರೆ ನೀವು ಸರ್ಕಾರಿ ಕಚೇರಿಗೆ ಅಲೆಯಬೇಕಿಲ್ಲ. ಕೋವಿಡ್ ನಿಂದ ಮೃತ ಪಟ್ಟವರಿಗೆ 1 ಲಕ್ಷ ಕೊಡುವ ಯೋಜನೆ ಸಹಿತ ಪ್ರಾರಂಭವಾಗಿದೆ ಎಂದರು.
ದಯಮಾಡಿ ಅ.30 ನೇ ತಾರಿಖಿನಂದು ರಮೇಶ ಭೂಸನೂರ ಅವರಿಗೆ ಮತ ಕೊಟ್ಟು ಅವರನ್ನು ಗೆಲ್ಲಿಸಬೇಕು. ನಾನು ಇಷ್ಟೋಂದು ಜನ ಸೇರುತ್ತಾರೆ ಎಂದು ನಾನು ನಿರಿಕ್ಷೆ ಮಾಡಿರಲಿಲ್ಲ. ಇದೆಲ್ಲವನ್ನು ನೋಡಿದರೆ ನಮ್ಮ ಅಬ್ಯರ್ಥಿ ರಮೇಶ ಭೂಸನೂರ ಅವರ ಗೆಲವು ಖಚಿತ ಎಂದೆನಿಸುತ್ತಿದೆ. ಬಹುದೊಡ್ಡ ಅಂತರದಿಂದ ರಮೇಶ ಭೂಸನೂರ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ರಮೇಶ ಭೂಸನೂರ ಅವರು ಗೆದ್ದ ಬಳಿಕ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದರು.
ಕಾಂಗ್ರೆಸನವರು ಬರೀ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವವರ ಬಣ್ಣ ತಾನೇ ಬಯಲಾಗುತ್ತದೆ ಎಂದರು.
ಅಭ್ಯರ್ಥಿ ರಮೇಶ ಭೂಸನೂರ, ಸಚಿವರಾದ ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ,ವಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ನಿಗಮ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ ಇದ್ದರು.

























Discussion about this post