ಬೆಂಗಳೂರು: ರಾಜ್ಯದಲ್ಲಿ ವರ್ಷಕ್ಕೆ ಎರಡು ಬಾರಿ ಸಿಇಟಿ ಪರೀಕ್ಷೆ ನಡೆಸಲು ನಿದಾ೯ರ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಕರ ನೇಮಕಾತಿಗೆ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಅಧಿಸೂಚನೆ ತಂದಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಉತ್ತೀಣ೯ರಾಗುತ್ತಿಲ್ಲ ಎಂದರು.
ಈ ಹಿಂದೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಕೇವಲ 3 ಸಾವಿರ ಶಿಕ್ಷಕರು ಮಾತ್ರ ಉತ್ತೀಣ೯ರಾಗಿದ್ದಾರೆ. ಆದರೆ ನಮಗೆ ಅದಕಿಂತಲೂ ಅತೀ ಹೆಚ್ಚು ಶಿಕ್ಷಕರ ಅವಶ್ಯಕತೆ ಇತ್ತು ಎಂದರು. ಹೀಗಾಗಿ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವಷ೯ದಲ್ಲಿ ಎರಡು ಬಾರಿ ಸಿಇಟಿ ಪರೀಕ್ಷೆ ನಡೆಸಲು ತೀಮಾ೯ನ ಕೈಗೊಳ್ಳಲಾಗಿದೆ ಎಂದ ಅವರು, ಅತೀ ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಶಿಕ್ಷಕರ ಹುದ್ದೆ ಯ ನೇಮಕಾತಿಗೆ ಅತೀ ಆಸಕ್ತಿ ತೋರಿಸಿದ್ದು, ಸರಕಾರಿ ಶಾಲೆಗಳಲ್ಲಿ, ನ ಮೂಲ ಸೌಕರ್ಯಕ್ಕೆ ಒದಗಿಸಲು ಸೂಚನೆ ನೀಡಿದ್ದಾರೆ ಎಂದರು.

























Discussion about this post