ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸಮಾಜ ಹಿತ, ರಾಷ್ಟ್ರಹಿತದ ಕಾಳಜಿ ಇಲ್ಲ. ಅವರು ವೋಟ್‌ಬ್ಯಾಂಕ್ ರಾಜನೀತಿಯನ್ನು ಆದ್ಯತೆಯನ್ನಾಗಿ ಇಟ್ಟುಕೊಂಡಿದ್ದಾರೆ ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈಗಿರುವ ಮತಾಂತರ ಪರಿಸ್ಥಿತಿ ಮುಂದುವರೆದರೆ ಮತಾಂತರ ನಿಷೇಧ ಕಾಯ್ದೆ ತನ್ನಿ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ಹೇಳಿ ಮತಾಂತರ ನಿಷೇಧ ಕಾಯ್ದೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷದ್ದು ದ್ವಿಮುಖ ನೀತಿ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್, ಆಡಳಿತ ನಡೆಸಿದ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ತರಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದು, ದ್ವಿಮುಖ ನೀತಿ ಎಂದು ಹೇಳಿ, ಜವಹಾರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಅರುಣಾಚಲ ಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತಾಂತರ ನಿಷೇಧ ಕಾಯ್ದೆ ತಂದಿದೆ. ಒರಿಸ್ಸಾದಲ್ಲೂ ತಂದಿತು ಎಂದರು.
ಬೌದ್ಧ, ಜೈನ್, ಶಿಖ್ ಧರ್ಮದಲ್ಲಿ ಯಾವುದೇ ನಿಬಂಧನೆ ಹಾಕಿಲ್ಲ, ಕಾರಣ, ಇವುಗಳು ಸಂಸ್ಕೃತಿ, ಮೂಲ ನಂಬಿಕೆ ಬದಲಾಯಿಸುವುದಿಲ್ಲ, ಹಿಂದೂ ಧರ್ಮದವರು ಬೌದ್ಧ ಆಗಬಹುದು, ಮತಾಂತರ ನಿಷೇಧ ಕಾಯ್ದೆಯಲ್ಲಿ ಈಗಲೂ ಅವಕಾಶ ಇದೆ, ಹಿಂದೂಗಳು, ಮುಸ್ಲಿಮರಾಗಿ ಪರಿವರ್ತನೆಯಾದರೆ ಅಂಬೇಡ್ಕರ್‌ಗೆ ಅಲ್ಲಿ ಜಾಗ ಸಿಗುವುದಿಲ್ಲ. ಬೌದ್ಧರಾದರೆ, ವೈಷ್ಣವರಾದರೆ ಅಂಬೇಡ್ಕರ್‌ಗೆ ಜಾಗ ಸಿಗುತ್ತೆ, ರಾಮನಿಗೂ ಜಾಗ ಸಿಗುತ್ತೆ, ಜೈನರ ಮನೆಯಲ್ಲಿ ರಾಮನಿಗೂ ಜಾಗ ಇದೆ, ಅಂಬೇಡ್ಕರ್‌ಗೂ ಜಾಗ ಇದೆ. ಕ್ರಿಶ್ಚಿಯನ್‌ರಾಗಿ ಪರಿವರ್ತನೆಯಾದ್ರೆ, ಸಿದ್ದರಾಮಯ್ಯರಿಗೂ ಜಾಗ ಇಲ್ಲ ಎಂದು ಹೇಳಿದರು.
ಮತಾಂತರ ಇರುವುದು ಮತ ಗಳಿಕೆಗೆ ಇರುವ ಸಾಧನ ಅಲ್ಲ. ಮತಾಂತರ ದೇಶಾಂತರಕ್ಕೆ ಸಮಾನ ಎಂದು ಗಾಂಧಿಜೀಯವರು ಹೇಳಿದ್ದರು. ನಮ್ಮದು ಗಾಂಧಿಯ ಹಿಂದೂತ್ವ ಎಂದು ಹೇಳುವ ಕಾಂಗ್ರೆಸ್ ಮತಾಂತರ ಬಗ್ಗೆ ಗಾಂಧಿಜೀಯವರು ಏನು ಹೇಳಿದ್ರು ಎಂಬುದನ್ನು ಒಮ್ಮೆ ಸಿದ್ಧರಾಮಯ್ಯ ಅವರು ಇತಿಹಾಸವನ್ನು ಓದಬೇಕು ಎಂದು ಹೇಳಿದರು.
Congress party prefers vote bank politics
























Discussion about this post