ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಸಿಗೋಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದೆ. ವಸತಿ ಶಾಲೆಯಲ್ಲಿರುವ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜವಾಹರ್ ನವೋದಯ ವಿದ್ಯಾಲಯ ಸೀಲ್‌ಡೌನ್ ಮಾಡಲಾಗಿದೆ.
ಇದನ್ನೂ ಓದಿ: Cluster Declaration: ಕೋವಿಡ್- 19: ಮೂರು ಪ್ರಕರಣ ಪತ್ತೆಯಾದರೆ ಕ್ಲಸ್ಟರ್ ಘೋಷಣೆ
ಮೂವರು ವಿದ್ಯಾರ್ಥಿಗಳು, 4 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಸತಿ ಶಾಲೆಯಲ್ಲಿದ್ದ 418 ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳು, ಸಿಬ್ಬಂದಿಗೆ ರೋಗ ಲಕ್ಷಣಗಳಿಲ್ಲ.
ಇದನ್ನೂ ಓದಿ: Dangerous: ರೂಪಾಂತರಿ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿ ಸೋಂಕು ಅಲ್ಲ
ಜಿಲ್ಲಾಡಳಿತ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇದರ ನಡುವೆ ಒಮಿಕ್ರಾನ್ ಕರ್ನಾಟಕಕ್ಕೆ ಕಾಲಿಟ್ಟಿರುವುದು ಆತಂಕ ದುಪ್ಪಟ್ಟಾಗಿದೆ.
ಇದನ್ನೂ ಓದಿ: e Paper – December 5, 2021
Corona infection for 40 people

























Discussion about this post