ತಮಗೆ ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ದುಬಾರಿ ಸಂತೋಷಕೂಟಗಳನ್ನು ನೀಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇದಕ್ಕಾಗಿ ಊಹೆಗೂ ಮೀರಿದ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಇಂತಹುದೇ ಒಂದು ವಿಲಕ್ಷಣ ಪ್ರಯೋಗದಲ್ಲಿ, ದುಬೈನ ಜೋಡಿಯೊಂದು ಇತ್ತೀಚೆಗೆ ತಮಗೆ ಜನಿಸಲಿರುವ ಮಗುವಿನ ಲಿಂಗವನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಳ್ಳುವ ಸಲುವಾಗಿ ವಿಡಿಯೋ ಒಂದನ್ನು ತಯಾರಿಸಿದ್ದು ಇದಕ್ಕೆ ಹುಲಿಯೊಂದನ್ನು ಬಳಸಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ೩ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು ಟೀಕೆಗಳ ಸುರಿಮಳೆಯೇ ಆಗಿಹೋಗಿದೆ.
ದುಬೈನ ಐಷಾರಾಮಿ ಬುರ್ಜ್ ಅಲ್ ಅರಬ್ ಹೋಟೆಲ್ ಬಳಿಯ ಸಮುದ್ರ ದಂಡೆಯಲ್ಲಿ ವಿಡಿಯೋದಲ್ಲಿ ಹುಲಿಯೊಂದು ರಾಜಾರೋಷವಾಗಿ ಓಡಾಡುತ್ತಾ ಅದರ ಬಳಿಯೇ ಹಾರಾಡುತ್ತಿದ್ದ ಬಲೂನುಗಳನ್ನು ಕಂಡು ಅವುಗಳಲ್ಲಿ ಒಂದನ್ನು ತನ್ನ ಹಿಂಗಾಲುಗಳ ಮೇಲೆ ನಿಂತು ಮೇಲೆ ಹಾರಿಸಲು ನೋಡಿದಾಗ ಗುಲಾಬಿ ಬಣ್ಣದ ಪುಡಿ ಬಲೂನ್‌ನಿಂದ ಹೊರಚೆಲ್ಲಿ ಹುಟ್ಟಲಿರುವ ಮಗು ಹೆಣ್ಣೆಂದು ತಿಳಿಯುತ್ತದೆ.
ಈ ವಿಡಿಯೋವನ್ನು “ಲವಿನ್ ದುಬೈ” ಎಂಬ ಇನ್ಸ್‌ಟಾಗ್ರಾಮ್ ಪುಟದಿಂದ ಹಂಚಿಕೊಳ್ಳಲಾಗಿದ್ದು ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂತಹ ಪ್ರಾಣಿಗಳು ಭೂಮಿಯ ಮೇಲಿರುವುದು ಕಾಡುಗಳಲ್ಲಿ ಸ್ವಚ್ಛಂದವಾಗಿ ಇರುವುದಕ್ಕಲ್ಲದೇ ಮುನುಷ್ಯನ ಸ್ವಾರ್ಥಕ್ಕಾಗಿ ಬಳಸಲು ಅಲ್ಲ” ಎಂದೆಲ್ಲಾ ಅಭಿಪ್ರಾಯ ವ್ಯಕ್ತಾಪಡಿಸಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ 2 ದಿನಗಳ ಹಿಂದಷ್ಟೇ ಹಂಚಿಕೊಂಡ “ಕಾರ್ಲೊಟ್ಟ ಕ್ಯಾವಲಾರಿ” ಎಂಬ ಮಹಿಳೆ “ನಮ್ಮಿಂದ ಹುಲಿಗೆ ಯಾವುದೇ ಅಪಾಯವಾಗಿಲ್ಲ ಹಾಗೂ ಉಪಯೋಗಿಸಲಾದ ಪ್ಲಾಸ್ಟಿಕ್‌ಅನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ, ಯಾರೂ ಆತಂಕಗೊಳ್ಳಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
View this post on Instagram
Couple uses tiger in a video to reveal the gender of their baby
ಇದನ್ನೂ ಓದಿ: ಅಪಘಾತಕ್ಕೀಡಾಗಿ ಅಪರೂಪದ ಹುಲಿ ಬೆಕ್ಕು ಸಾವು
ಇದನ್ನೂ ಓದಿ: ಗಂಡು ಹುಲಿ ಸಾವು ಪತ್ತೆ:ಕಾದಾಟ ಕಾರಣ
Discussion about this post