ಬೆಂಗಳೂರು: ದೀಪಾವಳಿ ಹಬ್ಬಕ್ಕೂ ಮೊದಲೇ ಕರ್ನಾಟಕ ಸರಕಾರ ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡಿದೆ. ಸರಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ)ಯನ್ನು ಹೆಚ್ಚಿಸಿ ಬುಧವಾರ ಆದೇಶ ಹೊರಡಿಸಿದೆ. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಸರಕಾರಿ ನೌಕರರ ಡಿಎ ಈಗ, ಅವರ ಮೂಲ ವೇತನದ ಶೇ. 24.5 ರಷ್ಟು ಆಗಿರುತ್ತದೆ. ಹೊಸ ಆದೇಶದಲ್ಲಿ ಶೇ. 3ರಷ್ಟು ಹೆಚ್ಚಿಸಲಾಗಿದೆ.
ಹಣಕಾಸು ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಡಿಎ ಹೆಚ್ಚಳವು ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಪಿಂಚಣಿದಾರರು ಕೂಡ ಈ ಹೆಚ್ಚಳದಿಂದ ಪ್ರಯೋಜನ ಪಡೆಯುತ್ತಾರೆ. ಆರು ಲಕ್ಷ ಉದ್ಯೋಗಿಗಳು ಹಾಗೂ 4.5 ಲಕ್ಷ ಪಿಂಚಣಿದಾರರಿಗೆ ಇದರ ಪ್ರಯೋಜನ ಸಿಗಲಿದೆ.
ಡಿಎ ಹೆಚ್ಚಳವು ಪೂರ್ಣ ಸಮಯದ ಸರಕಾರಿ ನೌಕರರು, ಜಿಲ್ಲಾ ಪಂಚಾಯತ್ ನೌಕರರು, ನಿಯಮಿತ ಸಮಯದ ವೇತನ ಶ್ರೇಣಿಯಲ್ಲಿರುವ ನೌಕರರು, ನಿಯಮಿತ ಸಮಯದ ಶ್ರೇಣಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣ ಸಮಯದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಈ ಆದೇಶವು ಯುಜಿಸಿ/ಎಐಸಿಟಿಇ/ಎಸಿಎಆರ್ ವೇತನ ಶ್ರೇಣಿಯ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೂ ಅನ್ವಯಿಸುತ್ತದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಇದನ್ನೂ ಓದಿ: e Paper – October 28, 2021
ಇದನ್ನೂ ಓದಿ: Parking Fee: ನ.1 ರಿಂದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ಜಾರಿ

























Discussion about this post