ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಭಾರತ್ ಬಂದ್ ಮಾಡಲಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ರಸ್ತೆ ತಡೆದು ರೈತರ ಧರಣಿ ನಡೆಸುತ್ತಿದ್ದು ಈ ಮಧ್ಯೆ ಪ್ರತಿಭಟನಾಕಾರರನ್ನ ತಡೆಯುತ್ತಿದ್ದ ಡಿಸಿಪಿ ಅವರ ಕಾಲಿನ ಮೇಲೆ ಕಾರು ಹರಿದಿರುವ ಘಟನೆ ನಡೆದಿದೆ.
ಬೆಂಗಳೂರಿನ ಗೊರಗುಂಟೆ ಪಾಳ್ಯದ ಬಳಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಪ್ರತಿಭಟನಾಕಾರರನ್ನ ತಡೆಯಲು ಮುಂದಾಗಿದ್ದರು. ಇದೇ ವೇಳೆ ಕಾರೋಂದು ಅವರ ಕಾಲಿನ ಮೇಲೆ ಹರಿದಿದೆ.
DCP ಧರ್ಮೇಂದ್ರ ಕುಮಾರ್ ಮೀನಾಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಾರು ಹರಿಸಿದ ಚಾಲಕನ್ನ ಆರ್ ಎಂಸಿ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

























Discussion about this post