ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ರೈ ಹೆಸರಿನ ಚಂಡಮಾರುತದಿಂದ 208 ಜನರು ಮೃತಪಟ್ಟಿದ್ದು, 239 ಜನರು ಗಾಯಗೊಂಡಿದ್ದಾರೆ. 52 ಮಂದಿ ಕಣ್ಮರೆ ಆಗಿದ್ದಾರೆ. ರ್ಮೂರು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ. ದೇಶದ ಬಹುತೇಕ ಕರಾವಳಿ ಭಾಗ ನಿರ್ನಾಮ ಆಗಿದೆ. ಸಂತ್ರಸ್ತ ಜನರಿಗೆ ಆಹಾರ ಮತ್ತು ನೀರು ಇನ್ನಿತರ ಅವಶ್ಯಕ ಸಾಮಗ್ರಿ ಪೂರೈಸುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ದೇಶದ ದಕ್ಷಿಣ ಮತ್ತು ಮಧ್ಯ ಪ್ರಾಂತ್ಯಗಳಲ್ಲಿ ವ್ಯಾಪಕ ಅನಾಹುತ ಸೃಷ್ಟಿಸಿರುವ “ಟೈಫೂನ್ ರೈ’ ಅವಾಂತರದಿಂದ ಮೂರು ಲಕ್ಷಕ್ಕೂ ಹೆಚ್ಚು ಜನರು ಸುರತ ಸ್ಥಳಗಳಿಗೆ ಓಡಿ ಹೋಗಿದ್ದಾರೆ. ಭೀಕರ ಬಿರುಗಾಳಿಯಿಂದಾಗಿ ದೇಶದ ಸಂಪರ್ಕ ಹಾಗೂ ವಿದ್ಯುತ್ ವ್ಯವಸ್ಥೆ ಛಿದ್ರವಾಗಿದೆ. ಸಾವಿರಾರು ಮನೆಗಳ ಛಾವಣಿಗಳು ಹಾರಿ ಹೋಗಿವೆ. ಕಾಂಕ್ರಿಟ್ ಕಟ್ಟಡಗಳು ಕುಸಿದಿವೆ, ಆಸ್ಪತ್ರೆಗಳು ಹಾನಿಗೊಂಡಿವೆ. ನೂರಾರು ವಿದ್ಯುತ್ ಕಂಬಗಳು ಬುಡ ಮೇಲಾಗಿದ್ದು ಅನೇಕ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. 2013ರಲ್ಲಿ ಕಾಣಿಸಿಕೊಂಡಿದ್ದ “ಹೈಯಾನ್” ಚಂಡಮಾರುತದಷ್ಟೆ ಪ್ರಭಾವದ್ದಾಗಿದೆ ಇದು ಎಂದು ಹೇಳಲಾಗುತ್ತಿದೆ. “ಹೈಯಾನ್” ಬಿರುಗಾಳಿಯನ್ನು ಫಿಲಿಪ್ಪೀನ್ಸ್‌ನಲ್ಲಿ ಯೋಲಾಂಡಾ ಎಂದು ಕರೆಯಲಾಗಿತ್ತು. 7,300 ಜನರು ಸಾವನ್ನಪ್ಪಿದ್ದರು ಅಥವಾ ನಾಪತ್ತೆಯಾಗಿದ್ದರು.
ರೈ ಚಂಡಮಾರುತವು ಫಿಲಿಪ್ಪೀನ್ಸ್ನ ಸಿಯಾರಗಾವೊ ಪ್ರವಾಸಿ ದ್ವೀಪಕ್ಕೆ ಗುರುವಾರ ಗಂಟೆಗೆ 195 ಕಿ.ಮೀ. ವೇಗದಲ್ಲಿ ಅಪ್ಪಳಿಸಿತು. ಕ್ರಿಸ್ಮಸ್ ಮತ್ತು ರಜಾದಿನಗಳನ್ನು ಕಳೆಯಲು ಜನರಲ್ ಲೂನಾ ಪಟ್ಟಣದ ಕಡಲ ಕಿನಾರೆಯ ರೆಸಾರ್ಟ್ಗಳಲ್ಲಿ ಸೇರಿದ್ದ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು.
ಬೋಹೋಲ್ ಪ್ರಾಂತ್ಯದಲ್ಲಿ 74 ಜನರು ಸಾವನ್ನಪ್ಪಿದ್ದು, 10 ಜನರು ಕಣ್ಮರೆಯಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಸಂವಹನ ಸಂಪರ್ಕ ಕಡಿತ ಗೊಂಡಿರುವ ಕಾರಣ 48 ಮೇಯರ್ಗಳಲ್ಲಿ 33 ಮೇಯರ್ಗಳು ಪ್ರವಾಹದ ಸ್ಥಿತಿ ಬಡಿ್ಗೆ ವರದಿ ಮಾಡಿದ್ದಾರೆ ಎಂದು ಈ ಪಾಂತ್ಯದ ಗವರ್ನರ್ ಅರ್ಥರ್ ಯಾಪ್ ಹೇಳಿದ್ದಾರೆ.
Death toll in Philippines typhoon hits 208
ಇದನ್ನು ಓದಿ: Jawad Cyclone: ಜವಾದ್ ಚಂಡಮಾರುತ ದುರ್ಬಲ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆ
Discussion about this post