ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ದಿನಾಂಕ ೮.೧೧.೨೦೨೧ ರಿಂದ ಕಲಾ ಮತ್ತು ವಿಜ್ಞಾನ ವಿಭಾಗಗಳ ಒಂದನೇ, ಮೂರನೇ ಮತ್ತು ಐದನೇ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಲಿದ್ದು, ಬಿ.ಕಾಂ ಮತ್ತು ಬಿ.ಬಿ.ಎ ವಿಭಾಗಗಳ ಒಂದನೇ, ಮೂರನೇ ಮತ್ತು ಐದನೇ ಸೆಮಿಸ್ಟರ್ ತರಗತಿ ೧೨.೧೧.೨೦೨೧ ರಿಂದ ಪ್ರಾರಂಭವಾಗಲಿದೆ. ಪ್ರಥಮ ವರ್ಷದ ಪ್ರವೇಶಾತಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಲು ೧೬.೧೧.೨೦೨೧ ಕೊನೆಯದಿನವಾಗಿದೆ.
ಸ್ನಾತಕೋತ್ತರ ಪದವಿಗೆ ಪ್ರವೇಶಾತಿ: ಸ್ನಾತಕೋತ್ತರ ಪದವಿಗಳಾದ ಎಂ.ಎಸ್ಸಿ (ಭೌತಶಾಸ್ತ್ರ), ಎಂ.ಎ (ಅರ್ಥಶಾಸ್ತ್ರ), ಎಂ.ಎ (ಇಂಗ್ಲೀಷ್), ಎಂ.ಕಾಂ, ಎಂ.ಬಿ.ಎ (ಟ್ರಾವೆಲ್ ಅಂಡ್ ಟೂರಿಸಂ), ಯೋಗಿಕ್ ಸೈನ್ಸ್ ಮತ್ತು ಕೆಲವು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ೨೩.೧೧.೨೦೨೧ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಜಾಲತಾಣವನ್ನು ನೋಡಬಹುದಾಗಿದೆ ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ.
Corona case decreases: ದೇಶದಲ್ಲಿ ಕೊರೋನಾ ಪ್ರಕರಣ ಇಳಿಕೆ
Admission begins in college

























Discussion about this post