ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಎಂದು ಮಕ್ಕಳ ಕಣ್ಣಿಗೆ ಹಾನಿಯಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡವರೂ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯ ಹಾಗೂ ಅಗರ್ವಾಲ್ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಪಕ್ಷ ಮಕ್ಕಳು ಪಟಾಕಿ ಹೊಡೆಯುವುದನ್ನು ನೋಡುತ್ತಾ ನಿಂತಿದ್ದಾಗ ಈ ಅವಘಡಗಳು ಸಂಭವಿಸಿದೆ. ನಿನ್ನೆಯಷ್ಟೇ ಬಾಲಕನೊಬ್ಬ ಫ್ಲವರ್ ಪಾಟ್ ಹತ್ತಿಸುವುದನ್ನು ನೋಡುತ್ತಾ ನಿಂತಿದ್ದು, ಅದರ ಕಿಡಿ ಬಂದು ಕಣ್ಣಿಗೆ ಹಾರಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಪಟಾಕಿ ಹಚ್ಚುವಾಗ ಮಕ್ಕಳು ಜೊತೆಯಲ್ಲಿ ಇರುವವರು ಈ ಕ್ರಮಗಳನ್ನು ಅನುಸರಿಸಿ. ದೊಡ್ಡವರು ಇಲ್ಲದೆ ಪಟಾಕಿ ಹಚ್ಚಲು ಬಿಡಬೇಡಿ. ಪಟಾಕಿಗೆ ಬೆಂಕಿ ಹೊತ್ತಿದೆಯೋ ಇಲ್ಲವೋ ಎಂದು ಬಗ್ಗಿ ನೋಡಬೇಡಿ. ಕಾಟನ್ ಬಟ್ಟೆ ಧರಿಸಿ. ಮನೆಯೊಳಗೆ, ಪಾರ್ಕಿಂಗ್ನಲ್ಲಿ ಪಟಾಕಿ ಹಚ್ಚಬೇಡಿ.
ಗಾಜು ಅಥವಾ ಲೋಹದ ಡಬ್ಬಿಯಲ್ಲಿ ರಾಕೆಟ್ ಹಚ್ಚಬೇಡಿ. ಪಟಾಕಿ ಹಚ್ಚಲು ಉದ್ದನೆ ಕಡ್ಡಿ ಬಳಸಿ. ಕಳಪೆ ಗುಣಮಟ್ಟದ ಪಟಾಕಿ ತರಬೇಡಿ.
Fireworks damage children’s eyes

























Discussion about this post