ಶಿವಮೊಗ್ಗ: ಭಾರತದ ಅತಿ ಎತ್ತರದ ಜೋಗ ಜಲಪಾತದ ಸೌಂದರ್ಯವನ್ನು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ವೀಕ್ಷಿಸಿ ಸಂತಸ ಪಟ್ಟರು.
ಇದನ್ನೂ ಓದಿ: Compensation money: ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೬ನೇ ಘಟಿಕೋತ್ಸವಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿಸರ್ಗದ ಸೌಂದರ್ಯ ಬೇಟಿ ನೀಡಿದ್ದರು.
ಇದನ್ನೂ ಓದಿ: Hunger strike: ನವಜೋತ್ ಸಿಂಗ್ ಸಿಧು ರಾಜ್ಯ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ …?
ಮುಂಜಾನೆಯೇ ಜೋಗದ ರಾ ಜಾ ರಾಣಿ ರೋರರ್ ರಾಕೆಟ್ ಹೆಸರಿನ ಜಲಧಾರೆಗಳ ಮಾಹಿತಿಯನ್ನು ಪಡೆದರು. ನಂತರ ದಟ್ಟವಾದ ಕಾಡು ಮತ್ತು ಗುಡ್ಡಗಳ ನಡುವಲ್ಲಿ ಶರಾವತಿ ನದಿಯು ಹರಿದು ಅತಿ ಎತ್ತರದಿಂದ ಭೋರ್ಗರೆಯುತ್ತಾ ನಾಲ್ಕು ಸೀಳಾಗಿ ಧುಮುಕುತ್ತಿರುವ ವೈಭವದ ದೃಶ್ಯವನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: Corona case increases: ದೇಶದಲ್ಲಿ ಮತ್ತೆ ಕರೋನಾ ಪ್ರಕರಣ ಹೆಚ್ಚಳ ….?
ನಂತರ ಘಟಿಕೋತ್ಸವದಲ್ಲಿ ಹೆಸರಾಂತ ಅಣು ಜೀವಶಾಸ್ತ್ರಜ್ಞ ಭಾರತೀಯ ಸಂಜಾತ ವಿಜ್ಞಾನಿ ಡಾ.ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಶಿಕ್ಷಣ ವಿಭಾಗದಲ್ಲಿ ೨೮ ವಿದ್ಯಾರ್ಥಿಗಳಿಗೆ ೩೫ ಚಿನ್ನದ ಪದಕ ಹಾಗೂ ೧೫ ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: Relaxation of restrictions: ಸೌದಿ ಅರೇಬಿಯಾ ಪ್ರಯಾಣ ನಿರ್ಬಂಧ ಸಡಿಲಿಕೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕರಾದ ಡಾ. ಆರ್.ಸಿ. ಅಗರ್ವಾಲ್ ಘಟಿಕೋತ್ಸವದ ಭಾಷಣ ಮಾಡಿದರು .ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ. ಎಂ. ಕೆ. ನಾಯ್ಕ್, ಕುಲಸಚಿವರುಗಳಾದ ಡಾ. ಆರ್ ಲೋಕೇಶ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: cyclone attack: ರಾಜ್ಯಕ್ಕೆ ಇಂದು ಮತ್ತೊಂದು ಸೈಕ್ಲೋನ್ ದಾಳಿ
Governor Thawar Chand Gelhot, who enjoyed the beauty of Jog Falls

























Discussion about this post