ಶೃಂಗೇರಿ: ವಿದ್ಯುನ್.ಆರ್.ಹೆಬ್ಬಾರ್ ಮೆಣಸೆ ಗ್ರಾ.ಪಂ ವ್ಯಾಪ್ತಿಯ ಹೊಸಳ್ಳಿಯ ಬಾಲಪ್ರತಿಭೆ.ಇವರ ತಂದೆ ರವಿಶಂಕರ್,ತಾಯಿ ನಮಿತಾ.ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿರುವ ರವಿಪ್ರಕಾಶ್ ಅವರ ಪುತ್ರ ವಿದ್ಯುನ್.ಆರ್.ಹೆಬ್ಬಾರ್ ಬಿಜಿಎಸ್-ಎನ್.ಪಿ.ಎಸ್ನ ಐದನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರುಷದ ವಿದ್ಯಾರ್ಥಿ.
ತಂದೆ ಶ್ರೀ ರವಿಪ್ರಕಾಶ್ ಉತ್ತಮ ಛಾಯಾಗ್ರಾಹಕರು.ಮೂರು ವರುಷದ ಬಾಲಕ ತಂದೆಯ ಡಿ.ಎಸ್.ಎಲ್.ಆರ್ ಕ್ಯಾಮರ ಬಳಸಿ ಛಾಯಾಗ್ರಹಣ ಮಾಡುವ ಕಲೆಯನ್ನು ಕರಗತಮಾಡಿಕೊಂಡ ಪೋರ.ವನ್ಯಜೀವಿ ಛಾಯಾಗ್ರಹಣದಲ್ಲಿ ಅತೀವ ಆಸಕ್ತಿ ಇರುವ ಆತನ ಪ್ರತಿಭೆಗೆ ಪೋಷಕರು ಪ್ರೋತ್ಸಾಹ ನೀಡಿದರು.ಇದರ ಫಲವಾಗಿ ಹತ್ತುವರುಷ ಒಳಗಿನ ವನ್ಯಜೀವಿ ವಿಭಾಗದ ಗ್ರ್ಯಾಂಡ್ ಟೈಟಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

ಎಂಟನೇ ವಯಸ್ಸಿನಲ್ಲಿ ಸಿಟಿ ಸಿಗ್ನೇಚರ್ ಪೋಟೋಗ್ರಾಫಿಗೆ “ಹೈಲಿ ಕಮಾಂಡೆಡ್ ಪ್ರಶಸ್ತಿ ಗೆದ್ದುಕೊಂಡ ವಿದ್ಯುನ್ ಸಣ್ಣಸಣ್ಣ ಕೀಟಗಳ ವಿವಿಧ ಪ್ರಕ್ರಿಯೆಗಳ ಸೂಕ್ಷ್ಮತೆಗಳನ್ನು ಕ್ಯಾಮರದ ಕಣ್ಣಲ್ಲಿ ಸೆರೆಹಿಡಿಯುವಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದು ಮನೆಯ ಸುತ್ತಮತ್ತಲೂ ಇರುವ ಪರಿಸರವನ್ನು ಬಳಸಿಕೊಂಡು ಸಾಧನೆಯ ಮೆಟ್ಟಲು ಏರುತ್ತಿದ್ದಾನೆ.ಭವಿಷ್ಯತ್ತಿನಲ್ಲಿ ಉತ್ತಮ ವನ್ಯಜೀವಿ ಛಾಯಾಗ್ರಾಹಕನಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಆತನಲ್ಲಿವೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಲಂಡನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವತಿಯಿಂದ ಪ್ರತಿ ವರುಷ ಈ ಸ್ಪರ್ಧೆ ನಡೆಯುತ್ತದೆ.ಸುಮಾರು ೫೦ಸಾವಿರ ಚಿತ್ರಗಳು ಬರುತ್ತವೆ.ಅದರಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ.ಮಕ್ಕಳು ಹಾಗೂ ದೊಡ್ಡವರ ವಿಭಾಗದ ಸ್ಪರ್ಧೆ ನಡೆಯುತ್ತದೆ.ಮಕ್ಕಳಿಗೆ ಮೂರು ವಿಭಾಗದಲ್ಲಿ ಆಯ್ಕೆ ನಡೆಯುತ್ತದೆ.ಹತ್ತು,ಹದಿನಾಲ್ಕು ಹಾಗೂ ಹದಿನೇಳು ವರುಷಗಳ ಒಳಗಿನ ತಲಾ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ಬಳಿಕ ಆಯ್ಕೆಯಾದ ಮೂವರ ಪೋಟೋಗಳಲ್ಲಿ ಒಬ್ಬರನ್ನು ಮಾತ್ರ ಗ್ರ್ಯಾಂಡ್ ಟೈಟಲ್ಗೆ ಆಯ್ಕೆ ಮಾಡಲಾಗುತ್ತದೆ.ವಿದ್ಯುನ್ ಈ ವಿಭಾಗದಲ್ಲಿ ಆಯ್ಕೆಗೊಂಡ ಕರ್ನಾಟಕ ಪ್ರತಿಭಾವಂತ ಛಾಯಾಗ್ರಾಹಕ.ಈ ಸ್ಪರ್ಧೆ ಹಾಗೂ ಪ್ರಶಸ್ತಿ ವಿತರಣೆ ಲಂಡನ್ನಲ್ಲಿ ನಡೆಯಬೇಕಿದ್ದು ಆನ್ಲೈನ್ ಮುಖಾಂತರ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ವಿದ್ಯುನ್ ಮುಡಿಗೇರಿಸಿದ್ದಾನೆ.
ವಿದ್ಯುನ್.ಆರ್.ಹೆಬ್ಬಾರ್ ಮಾತನಾಡಿ ಲಾಕ್ಡೌನ್ನಿಂದ ಶಾಲೆಯ ಅವಧಿ ಕಡಿಮೆ ಇದ್ದು ಪೋಟೋಗ್ರಾಫಿಯ ಸುಧಾರಣೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ.ಲಂಡನ್ನಲ್ಲಿ ಪ್ರಶಸ್ತಿ ಪಡೆಯಬೇಕಿತ್ತು.ಕೋವಿಡ್ ನಿಬಂಧನೆ ಕಾರಣದಿಂದ ಹೋಗಲು ಸಾಧ್ಯವಾಗಲಿಲ್ಲ.ನನ್ನ ಸಾಧನೆಗೆ ಪೋಷಕರು ನೀಡಿದ ಪ್ರೋತ್ಸಾಹ ಅನನ್ಯ ಎಂದರು.
ಶ್ರೀನಿವಾಸ್ ಮಾತನಾಡಿ ಮೊಮ್ಮಗ ವಿದ್ಯುನ್ ಗಳಿಸಿದ ಪ್ರಶಸ್ತಿಯಿಂದ ನನಗೆ ಅತೀವ ಸಂತಸ ತಂದಿದೆ.ಸಣ್ಣವಯಸ್ಸಿನಲ್ಲಿ ಕ್ಯಾಮರಾ ಕೈಯಲ್ಲಿ ಹಿಡಿದು ತಿರುಗಾಡುತ್ತಿದ್ದ ಆತನಲ್ಲಿ ಸಾಧನೆ ಮಾಡುವ ಆತ್ಮವಿಶ್ವಾಸ ಇದೆ ಎಂದರು

























Discussion about this post